iPhone 12 For Free: ಒಂದು ರೂಪಾಯಿ ಕೂಡ ಪಾವತಿಸದೇ ಐಫೋನ್ 12 ಅನ್ನು ಉಚಿತವಾಗಿ ಪಡೆಯಿರಿ !

iPhone 12 For Free: ಐಫೋನ್ 12ನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು. ಒಂದು ವೇಳೆ ನೀವೂ ಕೂಡ ಐಫೋನ್ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಂದು ನಿಮಗೆ ಈ ಸುವರ್ಣಾವಕಾಶವಿದೆ. ಹಾಗಾದರೆ ಬನ್ನಿ ಐಫೋನ್ 12ನ್ನು ಹೇಗೆ ಉಚಿತ ಪಡೆದುಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Sep 5, 2022, 03:56 PM IST
  • ಅತ್ಯಂತ ಪ್ರೀಮಿಯಮ್ ಹಾಗೂ ದುಬಾರಿ ಫೋನ್ ಗಳಲ್ಲಿ ಐಫೋನ್ ಕೂಡ ಒಂದು.
  • ಆದರೆ ಈ ಫೋನ್ ಮೇಲೆ ಒಂದು ಅದ್ಭುತ ಆಫರ್ ನೀಡಲಾಗುತ್ತಿದ್ದು,
  • ಇದರಿಂದ ಐಫೋನ್ 12 ಅನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು.
iPhone 12 For Free: ಒಂದು ರೂಪಾಯಿ ಕೂಡ ಪಾವತಿಸದೇ ಐಫೋನ್ 12 ಅನ್ನು ಉಚಿತವಾಗಿ ಪಡೆಯಿರಿ ! title=
iPhone 12 For Free

How To Get Free iPhone 12: ಅತ್ಯಂತ ಪ್ರೀಮಿಯಮ್ ಹಾಗೂ ದುಬಾರಿ ಫೋನ್ ಗಳಲ್ಲಿ ಐಫೋನ್ ಕೂಡ ಒಂದು. ಆದರೆ ಈ ಫೋನ್ ಮೇಲೆ ಒಂದು ಅದ್ಭುತ ಆಫರ್ ನೀಡಲಾಗುತ್ತಿದ್ದು, ಇದರಿಂದ ಐಫೋನ್ 12 ಅನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು. ಆದರೆ ಅದರ ಹಿಂದೆ ಒಂದು ಟ್ವಿಸ್ಟ್ ಇದೆ. ಐಫೋನ್ 12 ಅನ್ನು ಉಚಿತವಾಗಿ ಪಡೆದುಕೊಳ್ಳುವ ಈ ಅವಕಾಶವನ್ನು ವೆರಿಝೋನ್ ನೀಡುತ್ತಿದೆ. ಈ ಐಫೋನ್ ಅನ್ನು ಎರಡು ವರ್ಷಗಳ ಹಿಂದಿನ $699 (ರೂ. 55,840) ಆರಂಭಿಕ ಬೆಲೆಯಲ್ಲಿ ಮತ್ತು 64GB ಮೂಲ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ವೆರಿಝೋನ್ ಡೀಲ್ ಈ ಫೋನ್ ಅನ್ನು ಫ್ರೀಯಾಗಿಸಿದೆ. ಈ ಐಫೋನ್ ಪಡೆಯಲು ಯಾವುದೇ ಟ್ರೇಡ್ ಇನ್ ಮೂಲಕ ಹೋಗುವ ಅವಶ್ಯಕತೆ ಇಲ್ಲ. ಉಚಿತ ಐಫೋನ್ 12 ಲಾಭ ಪಡೆಯಲು ನೀವು ಮಾಡಬೇಕಾಗಿರುವುದು ಇಷ್ಟೇ.  iPhone 12 ನ ಲಾಭವನ್ನು ಉಚಿತವಾಗಿ ಪಡೆಯಲು Verizon ನಿಂದ ಹೊಸ ಲೈನ್ ಖರೀದಿಸಬೇಕು.

ಐಫೋನ್ 12 A14 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬರುತ್ತದೆ, ಉತ್ತಮ ಕ್ಯಾಮೆರಾ ಕಾರ್ಯಕ್ಷಮತೆ. ಇದು iOS 16 ಆವೃತ್ತಿಗೆ ಇತ್ತೀಚಿನ ಅಪ್‌ಗ್ರೇಡ್ ಅನ್ನು ಸಹ ಪಡೆದುಕೊಳ್ಳುತ್ತದೆ, ಹೊಸ ಆವೃತ್ತಿ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಐಫೋನ್ 12 ಡೀಲ್ ಅನ್ನು ಇನ್ನಷ್ಟು ಆಕರ್ಷಕಗೊಳಿಸುತ್ತದೆ. ಆದಾಗ್ಯೂ, ಫೋನ್ ನಿಮ್ಮದಾಗುವ ಮೊದಲು ನೀವು ಪೂರೈಸಬೇಕಾದ ಈ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ನೀವು ತಿಳಿದಿರಬೇಕು.

ಇದನ್ನೂ ಓದಿ-Facebook, Instagram ಹಾಗೂ WhatsApp ನ ಈ ವೈಶಿಷ್ಟ್ಯಗಳನ್ನು ಬಳಸಲು ಇನ್ಮುಂದೆ ಶುಲ್ಕ ಪಾವತಿಸಬೇಕು

Verizon ನಲ್ಲಿ iPhone 12 ಡೀಲ್‌
ಹಂತ 1: ವೇರಿಝೋನ್ ವೆಬ್ ಸೈಟ್ ಗೆ ಭೇಟಿ ನೀಡಿ ಐಫೋನ್ 12ಕ್ಕಾಗಿ ಹುಡುಕಾಟ ನಡೆಸಿ.
ಹಂತ 2: ನಿಮ್ಮ ಆಯ್ಕೆಗೆ ಅನುಗುಣವಾಗಿ ಐಫೋನ್ 12ರ ಮೆಮೊರಿ ಹಾಗೂ ಕಲರ್ ಆಪ್ಶನ್ ಅನ್ನು ಆಯ್ದುಕೊಳ್ಳಿ.
ಹಂತ 3: ಈಗ Add New ಲೈನ್ ಆಪ್ಶನ್ 'ಗೆಟ್ ಇಟ್ ಫ್ರೀ ವಿಥ್ ಸೆಲೆಕ್ಟ್ 5ಜಿ ಅನ್ ಲಿಮಿತಾದ್ ಪ್ಲಾನ್ಸ್, ನ್ಯೂ ಲೈನ್ಸ್ ರಿಕ್ವಾಯರ್ಡ್ ಮೇಲೆ ಕ್ಲಿಕ್ಕಿಸಿ. 
ಹಂತ 4: ಮುಂದುವರೆಯಿರಿ ಆಯ್ಕೆಯ ಮೇಲೆ ಕ್ಲಿಕ್ಕಿಸಿ ಮುಂದಿನ ವಿಂಡೋದಲ್ಲಿ ಹೊಸ ಬಳಕೆದಾರ ಆಪ್ಶನ್ ಆಯ್ದುಕೊಳ್ಳಿ. 
ಹಂತ 5: ಇದಾದ ಬಳಿಕ ಹೊಸ ಸ್ಕ್ರೀನ್ ತೆರೆದುಕೊಳ್ಳಲಿದ್ದು, ಅದರಲ್ಲಿ ನೀವು ನಿಮ್ಮ ಪಿನ್ ಕೋಡ್ ನಮೂದಿಸಬೇಕು ಹಾಗೂ ಲೋಕೇಶನ್ ಅನ್ನು ಖಾತರಿಪಡಿಸಬೇಕು.

ಇದನ್ನೂ ಓದಿ-New Smartphone Launch: ಭಾರತಕ್ಕೆ ಲಗ್ಗೆ ಇಡುತ್ತಿದೆ ಈ 200ಎಂಪಿ ಕ್ಯಾಮರಾ ಫೋನ್, ಇಲ್ಲಿದೆ ಬೆಲೆ-ವೈಶಿಷ್ಟ್ಯಗಳ ವಿವರ

ಹಂತ 6: ಈಗ ನಿಮ್ಮ ಮುಂದೆ ವೆರಿಜೋನ್ ಪ್ಲಾನ್ ಗಳು ಕಾಣಿಸಿಕೊಳ್ಳಲಿವೆ. ನಿಮ್ಮ ಬಳಕೆಗೆ ಅನುಗುಣವಾಗಿ ಪ್ಲಾನ್ ಆಯ್ದುಕೊಳ್ಳಿ ಮತ್ತು ಉಚಿತ ಐಫೋನ್ ಲಾಭ ಪಡೆದುಕೊಳ್ಳಲು 36 ತಿಂಗಳ ಅವಧಿಗಾಗಿ ಹಣಪಾವತಿಗಾಗಿ ಮುಂದುವರೆಯಿರಿ.
ಹಂತ 7: ಒಂದೊಮ್ಮೆ ಯೋಜನೆಗಾಗಿ ಹಣ ಪಾವತಿಯಾದ ಬಳಿಕ ಮೇಲೆ ಸೂಚಿಸಲಾದ ಅವಧಿಗಾಗಿ ವೆರಿಜೋನ್ ಸದಸ್ಯತ್ವದ ಯೋಜನೆಯ ಜೊತೆಗೆ ಐಫೋನ್ 12 ನಿಮ್ಮ ಬಳಿ ಬರಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News