Flipkart Offer : ಹಳೆ ಎಸಿ ಕೊಟ್ಟು ಹೊಸ ಎಸಿ ಮನೆಗೆ ತನ್ನಿ ! ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ
Exchange Old AC With New One Offer: ಫ್ಲಿಪ್‌ಕಾರ್ಟ್ ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಎಸಿಯನ್ನು ಎಕ್ಸ್ಚೇಂಜ್ ಮಾಡುವ ಕಾರ್ಯಕ್ರಮವನ್ನು ಪರಿಚಯಿಸಿದೆ.
Exchange Old AC With New One Offer : ನಿಮ್ಮ ಹಳೆಯ ACಯನ್ನು ಬದಲಾಯಿಸಿ ಹೊಸ ಎಸಿ ಖರೀದಿಸುವುದಾದರೆ, ಇದು ಸರಿಯಾದ ಸಮಯ. ಹೊಸ ಎಸಿಯನ್ನು ಖರೀದಿಸುವುದು ದುಬಾರಿ ಎನಿಸಬಹುದು. ಆದರೆ ನಿಮ್ಮ ಹಳೆಯ ACಯನ್ನು ಕೊಟ್ಟು ಹೊಸ ಎಸಿಯನ್ನು ಮನೆಗೆ ತರುವ ಅವಕಾಶ ಸಿಕ್ಕಿದರೆ ಹೊಸ ಎಸಿ ತರುವ ಬಗ್ಗೆ ಯೋಚಿಸಬಹುದು. ಫ್ಲಿಪ್‌ಕಾರ್ಟ್ ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಎಸಿಯನ್ನು ಎಕ್ಸ್ಚೇಂಜ್ ಮಾಡುವ ಕಾರ್ಯಕ್ರಮವನ್ನು ಪರಿಚಯಿಸಿದೆ.
ಫ್ಲಿಪ್‌ಕಾರ್ಟ್ ಸ್ಟ್ಯಾಂಡರ್ಡ್ ಇ- ವೇಸ್ಟ್ ರಿಸೈಕ್ಲಿಂಗ್ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎನ್ನಲಾಗಿದೆ. ನೀವೂ ಕೂಡಾ ಹೊಸ AC ಖರೀದಿಸುವ ಬಗ್ಗೆ ಯೋಚಿಸುತ್ತಿದ್ದು, ಹಳೆಯ ಎಸಿಯನ್ನು ಎಕ್ಸ್ಚೇಂಜ್ ಮಾಡುವುದಾದರೆ, ಈ ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ Flipkart ಹೊರತಂದಿರುವ ಎಕ್ಸ್ಚೇಂಜ್ ಪ್ರೋಗ್ರಾಮ್ ನಲ್ಲಿ ಭಾಗವಹಿಸಬೇಕು. ಹಾಗಿದ್ದರೆ ಫ್ಲಿಪ್‌ಕಾರ್ಟ್ ಏರ್ ಕಂಡಿಷನರ್ ಎಕ್ಸ್‌ಚೇಂಜ್ ಪ್ರೋಗ್ರಾಂ ಅನ್ನು ಬಳಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ವೊಡಾಫೋನ್-ಐಡಿಯಾದ ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ನಲ್ಲಿ ಎಲ್ಲವೂ ಅನ್ಲಿಮಿಟೆಡ್
ಫ್ಲಿಪ್‌ಕಾರ್ಟ್ ಏರ್ ಕಂಡೀಷನರ್ ಎಕ್ಸ್‌ಚೇಂಜ್ ಪ್ರೋಗ್ರಾಂ ಅನ್ನು ಹೇಗೆ ಬಳಸುವುದು ? :
- ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್ ತೆರೆಯಿರಿ.
- ನೀವು ಖರೀದಿಸಲು ಬಯಸುವ ಏರ್ ಕಂಡಿಷನರ್ ಅನ್ನು ಸರ್ಚ್ ಮಾಡಿ.
- ಪ್ರಾಡಕ್ಟ್ ಪೇಜ್ ನಲ್ಲಿ, ಏರ್ ಕಂಡಿಷನರ್ ಎಕ್ಸ್ಚೇಂಜ್ ಪ್ರೊಗ್ರಾಮ್ ಆಯ್ಕೆ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹಳೆಯ AC ಯ ಬ್ರ್ಯಾಂಡ್, ಮಾಡೆಲ್ , ವರ್ಷ ಮುಂತಾದ ವಿವರಗಳನ್ನು ನಮೂದಿಸಿ.
- ವಿವರಗಳನ್ನು ಭರ್ತಿ ಮಾಡಿದ ನಂತರ, ವಿನಿಮಯ ಮೌಲ್ಯವನ್ನು ಲೆಕ್ಕಹಾಕಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಇದರ ನಂತರ ಪ್ರೋಸೆಸ್ ಮಾಡಬೇಕಾಗುತ್ತದೆ.
- ಆರ್ಡರ್ ಮಾಡಿದ ನಂತರ, Flipkart ನಿಂದ ಕಾಂಫರ್ಮೆಶನ್ ಇಮೇಲ್ ಮತ್ತು SMS ಸಿಗುತ್ತದೆ.
- ನಂತರ ನಿಮ್ಮ ಹಳೆಯ AC ಅನ್ನು ಅನ್‌ಇನ್‌ಸ್ಟಾಲ್ ಮಾಡಲು Flipkart ಕಡೆಯಿಂದ ಟೆಕ್ನಿಷಿಯನ್ ಬರುತ್ತಾರೆ.
ಇದನ್ನೂ ಓದಿ : 5G ಲಾಂಚ್ ಆದ ಆರು ತಿಂಗಳಲ್ಲಿಯೇ 6G Test Bed ಘೋಷಿಸಿದ ಪ್ರಧಾನಿ ಮೋದಿ !
-ಟೆಕ್ನಿಷಿಯನ್ ಹಳೆಯ ಎಸಿಯನ್ನು ಉಚಿತವಾಗಿ ಅನ್‌ಇನ್‌ಸ್ಟಾಲ್ ಮಾಡುತ್ತಾರೆ.
- ಅನ್‌ಇನ್‌ಸ್ಟಾಲ್ ಮಾಡುವ ದಿನದಂದು, ವಿನಿಮಯ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಹಳೆಯ AC ಯ ಸ್ಥಿತಿಯನ್ನು ಪರಿಶೀಲಿಸುತ್ತಾರೆ.
- ಪರಿಶೀಲನೆ ಪೂರ್ಣಗೊಂಡ ನಂತರ, ನಿಮಗೆ ಅನ್ ಇನ್ಸ್ಟಾಲ್ ಮೆಂಟ್ ಸರ್ಟಿಫಿಕೆಟ್ ಒದಗಿಸುತ್ತಾರೆ. ಹೊಸ AC ಯ ವಿತರಣೆಯ ಸಮಯದಲ್ಲಿ ಈ ಸರ್ಟಿಫಿಕೆಟ್ ಅಗತ್ಯವಿರುವುದರಿಂದ ಅದನ್ನು ಸುರಕ್ಷಿತವಾಗಿ ಇರಿಸಿ.
- ಅದರ ನಂತರ, ಡೆಲಿವರಿ ಏಜೆಂಟ್ ಹೊಸ AC ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಟೆಕ್ನಿಷಿಯನ್ ನೀಡಿದ ಅನ್ ಇನ್ಸ್ಟಾಲ್ ಮೆಂಟ್ ಸರ್ಟಿಫಿಕೆಟ್ ಅನ್ನು ವಿತರಣಾ ಏಜೆಂಟ್ ಪರಿಶೀಲಿಸುತ್ತಾರೆ.
- ಚೆಕ್‌ಗಳು ಹೊಂದಾಣಿಕೆಯಾದರೆ, ಡೆಲಿವರಿ ಏಜೆಂಟ್ ಹೊಸ AC ಅನ್ನು ಡೆಲಿವರಿ ಮಾಡಿ, ಹಳೆಯ AC ಅನ್ನು ತೆಗೆದುಕೊಳ್ಳುತ್ತಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.