5G ಲಾಂಚ್ ಆದ ಆರು ತಿಂಗಳಲ್ಲಿಯೇ 6G Test Bed ಘೋಷಿಸಿದ ಪ್ರಧಾನಿ ಮೋದಿ !

Modi announces 6G Test Bed : ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ 6G ವಿಷನ್ ಡಾಕ್ಯುಮೆಂಟ್ ಅನ್ನು ಪ್ರಸ್ತುತಪಡಿಸಿದ್ದು, 6G ಟೆಸ್ಟ್ ಬೆಡ್ ಅನ್ನು ಘೋಷಿಸಿದ್ದಾರೆ. ಡಿಜಿಟಲ್ ಕ್ರಾಂತಿಯತ್ತ ಭಾರತ ದಾಪುಗಾಲು ಹಾಕುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  

Written by - Ranjitha R K | Last Updated : Mar 22, 2023, 03:46 PM IST
  • 6G ಅನ್ನು ಅಳವಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧ
  • 6G ಟೆಸ್ಟ್ ಬೆಡ್ ಅನ್ನು ಘೋಷಿಸಿಡ ಪ್ರಧಾನಿ ಮೋದಿ
  • 100 5G ಲ್ಯಾಬ್‌ಗಳನ್ನು ಸ್ಥಾಪಿಸಲಿರುವ ಭಾರತ
 5G ಲಾಂಚ್ ಆದ ಆರು ತಿಂಗಳಲ್ಲಿಯೇ 6G Test Bed ಘೋಷಿಸಿದ ಪ್ರಧಾನಿ ಮೋದಿ !   title=

Modi announces 6G Test Bed : 5G ಪ್ರಾರಂಭವಾದ 5 ತಿಂಗಳ ನಂತರ, ಭಾರತವು ಈಗ 6G ಅನ್ನು ಅಳವಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ್ 6G ವಿಷನ್ ಡಾಕ್ಯುಮೆಂಟ್ ಅನ್ನು ಪ್ರಸ್ತುತಪಡಿಸಿದ್ದು, 6G ಟೆಸ್ಟ್ ಬೆಡ್ ಅನ್ನು ಘೋಷಿಸಿದ್ದಾರೆ. 6G ಟೆಸ್ಟ್‌ಬೆಡ್ ಅನ್ನು ಹೊಸ ತಂತ್ರಜ್ಞಾನ ಮತ್ತು ಸಂಶೋಧನೆಯ ಪ್ರಗತಿಗಾಗಿ ಮತ್ತು  6 G ವೆರಿಫಿಕೆಶನ್ ಗಾಗಿ ಬಳಸಲಾಗುತ್ತದೆ. 6ಜಿಯ  ವಿಷನ್ ನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ International Telecommunication Union  ಉದ್ಘಾಟಿಸಿದ್ದಾರೆ. 

ಡಿಜಿಟಲ್ ಕ್ರಾಂತಿಯತ್ತ ಭಾರತ ದಾಪುಗಾಲು ಹಾಕುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತವು ವೇಗವಾಗಿ 5G ಸೇವೆ ಒದಗಿಸುವ ದೇಶವಾಗಿದೆ. 5ಜಿ  ಆರಂಭವಾಗಿ 5 ತಿಂಗಳೊಳಗೆ 6ಜಿ ತಂತ್ರಜ್ಞಾನದ ಬಗ್ಗೆ ಇದೀಗ ನಾವು ಮಾತನಾಡುತ್ತಿದ್ದೇವೆ. ಇದು ನವ ಭಾರತದ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಐಟಿಯುನ  ವರ್ಲ್ಡ್ ಟೆಲಿ ಕಮ್ಯುನಿಕೆಶನ್  ಸ್ಟಾಂಡರ್ಡೈ ಸೇಶನ್ ಅಸೆಂಬ್ಲಿ ದೆಹಲಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ : Tata Tigor CNG ಕಾರ್ ಅನ್ನು ಕೇವಲ 86,000 ರೂ.ಗೆ ಮನೆಗೆ ತನ್ನಿ

ಅಲ್ಲದೆ, ಮುಂಬರುವ ವರ್ಷಗಳಲ್ಲಿ ಭಾರತವು 100 5G ಲ್ಯಾಬ್‌ಗಳನ್ನು ಸ್ಥಾಪಿಸಲಿದೆ ಎಂದು ಹೇಳಿದ್ದಾರೆ. ಭಾರತ್ 6G ವಿಷನ್ ಡಾಕ್ಯುಮೆಂಟ್ ಮತ್ತು 6G ಟೆಸ್ಟ್ ಬೆಡ್ ಒಟ್ಟಿಗೆ ದೇಶದಲ್ಲಿ ನಾವೀನ್ಯತೆ ಮತ್ತು ವೇಗದ ತಂತ್ರಜ್ಞಾನ ಸೃಷ್ಟಿಗೆ ವಾತಾವರಣವನ್ನು ಶಕ್ತಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ. 

ಟೆಸ್ಟ್‌ಬೆಡ್ ಎಂದರೇನು? :
ಹೊಸ ತಂತ್ರಜ್ಞಾನಗಳು ಮತ್ತು ಪರಿಕಲ್ಪನೆಗಳನ್ನು  ಆರಂಭಿಸುವ ಮೊದಲು ಅಥವಾ ಹೆಚ್ಚಿನ ಪ್ರೇಕ್ಷಕರಿಗೆ ಪರಿಚಯಿಸುವ ಮೊದಲು ಪರೀಕ್ಷಿಸಲು ಮತ್ತು ಮೌಲ್ಯಮಾಪನ ಮಾಡಲು ಬಳಸುವ ವ್ಯವಸ್ಥೆಯನ್ನು ಟೆಸ್ಟ್‌ಬೆಡ್ ಎಂದು ಕರೆಯಲಾಗುತ್ತದೆ.  

ಇದನ್ನೂ ಓದಿ : ಮನೆಯಲ್ಲಿರುವ ಸ್ಮಾರ್ಟ್‌ ಟಿವಿ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದೆಯೇ? ತಕ್ಷಣ ಈ ಕೆಲಸ ಮಾಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a

Trending News