Flipkart Electronics Sale: ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭವಾಗಿದೆ. ಈ ಸೇಲ್ ಮೇ 24 ರಿಂದ ಆರಂಭವಾಗಿದ್ದು, ಮೇ 29 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸೇಲ್‌ನಲ್ಲಿ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗುತ್ತಿದೆ. ಭಾರತದಲ್ಲಿ ಇನ್ನೇನು 5G ಸೇವೆ ಪ್ರಾರಂಭವಾಗಲಿದೆ. ಆದ್ದರಿಂದ ಜನರು 5G ಫೋನ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅನೇಕ ದೊಡ್ಡ ಕಂಪನಿಗಳು 5G ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫ್ಲಿಪ್‌ಕಾರ್ಟ್  ಸೇಲ್‌ನಲ್ಲಿ 5G ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. 17 ಸಾವಿರ ಮೌಲ್ಯದ Redmi Note 10T 5G ಫೋನ್ ಅನ್ನು ಕೇವಲ 749 ರೂಗಳಿಗೆ ಖರೀದಿಸಬಹುದು. 


COMMERCIAL BREAK
SCROLL TO CONTINUE READING

Redmi Note 10T 5G ಕೊಡುಗೆಗಳು ಮತ್ತು ರಿಯಾಯಿತಿಗಳು :
Redmi Note 10T 5G 4 GB RAM + 64 GB ಸ್ಟೋರೇಜ್ ರೂಪಾಂತರದ ಲಾಂಚಿಂಗ್ ಪ್ರೈಸ್ 16,999 ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್  11,999 ರೂ.ಗೆ ಲಭ್ಯವಿದೆ. ಈ ಫೋನ್ ಮೇಲೆ 5000 ರೂಪಾಯಿ ರಿಯಾಯಿತಿ ಸಿಗುತ್ತಿದೆ. ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್ ಕೂಡ ಇದೆ, ಇದರಿಂದಾಗಿ ಫೋನ್‌ನ ಬೆಲೆ ಸಾವಿರ ರೂ.ಗಿಂತ ಕಡಿಮೆಯಾಗುತ್ತದೆ. 


ಇದನ್ನೂ ಓದಿ : WhatsApp ಬಳಕೆದಾರರಿಗಾಗಿ ಬರಲಿದೆ ಬ್ಯಾಂಗ್ ವೈಶಿಷ್ಟ್ಯ


Redmi Note 10T 5G ಎಕ್ಸ್‌ಚೇಂಜ್ ಆಫರ್ :
Redmi Note 10T 5G ನಲ್ಲಿ 11,250 ರೂಪಾಯಿಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 11,250 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಹೀಗೆ ಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ ಈ ಫೋನ್‌ ಅನ್ನು 749 ರೂ.ಗೆ ಖರೀದಿಸಬಹುದು. 


REDMI Note 10T 5G ವಿಶೇಷಣಗಳು :
Redmi Note 10 6.5-ಇಂಚಿನ FHD + AMOLED ಡಿಸ್ಪ್ಲೇಯನ್ನು ಹೊಂದಿದೆ.  ಇದು 90Hz ನ ರಿಫ್ರೆಶ್ ರೇಟ್  ಹೊಂದಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅನ್ನು ಹೊಂದಿದೆ. Redmi Note 10T 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 48MP ಪ್ರೈಮರಿ  ಕ್ಯಾಮೆರಾ, 2MP ಡೆಪ್ತ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಫೋನ್‌ನ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಇದು 18W ಫಾಸ್ಟ್  ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. 


ಇದನ್ನೂ ಓದಿ : Amazonನಲ್ಲಿ ಪ್ಲಾಸ್ಟಿಕ್ ಬಕೆಟ್ ಬೆಲೆ 26,000 ರೂ. ಗ್ರಾಹಕರಿಗೆ EMIಮೇಲೆ ಖರೀದಿಸುವ ಅವಕಾಶ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.