ಬೆಂಗಳೂರು : ಆನ್‌ಲೈನ್ ಶಾಪಿಂಗ್‌ನಿಂದಾಗಿ, ಈಗ ಜನರು ಯಾವುದೇ ವಸ್ತುಗಳ ಖರೀದಿಗೆ ಹೊರಗೆ ಹೋಗಬೇಕಿಲ್ಲ. ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಬೇಕಾದ ವಸ್ತು ತಲುಪುತ್ತದೆ. ಈ ಸೌಲಭ್ಯದಿಂದ ಜನಜೀವನ ಸ್ವಲ್ಪ ಮಟ್ಟಿಗೆ ಸುಲಭವಾಗಿದೆ. ಇದೀಗ ಜನ ಸಾಮಾನ್ಯರು ಕೂಡಾ ಪ್ರತಿಯೊಂದು ವಸ್ತುವಿನ ಖರೀದಿಗೂ ಆನ್‌ಲೈನ್ ಮೊರೆ ಹೋಗುತ್ತಿದ್ದಾರೆ. ಯಾಕಂದರೆ ಇಲ್ಲಿ ಸಿಗುವ ರಿಯಾಯಿತಿಗಳಿಂದಾಗಿ ದುಬಾರಿ ವಸ್ತುವನ್ನು ಅಗ್ಗದ ಬೆಲೆಯಲ್ಲಿ ಖರೀದಿ ಮಾಡುವುದು ಕೂಡಾ ಸಾಧ್ಯವಾಗುತ್ತದೆ. ಆದರೆ ಈಗ ಬೆಳಕಿಗೆ ಬಂದಿರುವ ವಿಶೇಷ ಪ್ರಕರಣದಲ್ಲಿ ಅಗ್ಗದ ಬೆಲೆಯ ಪ್ಲಾಸ್ಟಿಕ್ ಬಕೆಟ್ ಅನ್ನು ಇಲ್ಲಿ 25,999 ರೂ.ಗೆ ಮಾರಾಟ ಮಾಡುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
Amazonನಲ್ಲಿ ಬಕೆಟ್ ಬೆಲೆ ಸಾವಿರಾರು :
ಇ-ಕಾಮರ್ಸ್‌ನ ಸಾಮಾನ್ಯ ಸಮಸ್ಯೆ ಎಂದರೆ ಬಯಸಿದ ವಸ್ತುವಿಗೆ ಬೇಡಿಕೆ ಹೆಚ್ಚಾದಾಗ, ಸ್ಟಾಕ್ ಖಾಲಿಯಾಗುತ್ತದೆ. ಮತ್ತೆ ಇದನ್ನೂ ಖರೀದಿ ಮಾಡಬೇಕಾದರೆ ಗ್ರಾಹಕರು ಕಾಯಬೇಕಾಗುತ್ತದೆ. ಕೆಲವೊಮ್ಮೆ ಬೇಡಿಕೆ ಹೆಚ್ಚಾದಾಗ ಸರಕಿನ ಬೆಲೆಯೂ ಹೆಚ್ಚುತ್ತದೆ. ಆನ್‌ಲೈನ್ ಶಾಪಿಂಗ್‌ನಲ್ಲಿ ಬೆಲೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿದೆ. ಆದರೆ ಊಹೆಗೂ ಮೀರಿ ಬೆಲೆ ಇರುತ್ತದೆ. ಅಮೆಜಾನ್ ಇಂಡಿಯಾದಲ್ಲಿ ಇತ್ತೀಚೆಗೆ ಇದೇ ರೀತಿಯ ಘಟನೆ ನಡೆದಿದೆ. ಅಮೆಜಾನ್‌ನಲ್ಲಿ ಬಕೆಟ್ ಅನ್ನು 25,900 ರೂ.ಗೆ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
Just found this on Amazon and I don't know what to do pic.twitter.com/hvxTqGYzC4
— Vivek Raju (@vivekraju93) May 23, 2022
ಇದನ್ನೂ ಓದಿ : Portable Air Cooler: ಫ್ಯಾನ್‌ಗಿಂತಲೂ ಅಗ್ಗದ ದರದಲ್ಲಿ ಲಭ್ಯವಿದೆ ಈ ಕೂಲರ್- ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತೆ
EMIನಲ್ಲಿಯೂ ಬಕೆಟ್ ಲಭ್ಯ :
ಲಿಸ್ಟಿಂಗ್ ನ ಸ್ಕ್ರೀನ್‌ಶಾಟ್‌ನಲ್ಲಿ, ಕೆಂಪು ಬಕೆಟ್ ಅನ್ನು 25,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈ ಬಕೆಟ್‌ನ ನಿಜವಾದ ಬೆಲೆ 35,900 ರೂಪಾಯಿಗಲಾಗಿದ್ದು, ಈ ಬಕೆಟ್ ಮೇಲೆ 28 % ದಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಈ ಬಕೆಟ್ ಖರೀದಿಸಲು ಇಎಂಐ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಈ ಸ್ಕ್ರೀನ್‌ಶಾಟ್ ಶೇರ್ ಆದ ಕೂಡಲೇ ಇದಕ್ಕೆ ವಿವಿಧ ರೀತಿಯಾಗಿ ಗ್ರಾಹಕರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : WhatsApp Tips And Tricks: ನಿಮ್ಮ Whatsapp chat ಅನ್ನು ಬೇರೆಯವರು ಕದ್ದು ಓದುತ್ತಿದ್ದಾರೆಯೇ ಹೀಗೆ ಪತ್ತೆ ಹಚ್ಚಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.