Samsung Galaxy M53 5G ಮೇಲೆ ಭಾರೀ ರಿಯಾಯಿತಿ ! ದೊಡ್ಡ ಸಂಖ್ಯೆಯಲ್ಲಿ ಬಿಕರಿಯಾಗುತ್ತಿದೆ ಫೋನ್
Discount on Galaxy M53 5G:Samsung Galaxy M53 ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವ ಹೊಸ ಸ್ಮಾರ್ಟ್‌ಫೋನ್. ಹೊಸ ಫೋನ್ ಆಗಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.
Discount on Galaxy M53 5G : Samsung Galaxy M53 ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವ ಹೊಸ ಸ್ಮಾರ್ಟ್‌ಫೋನ್. ಹೊಸ ಫೋನ್ ಆಗಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಫೋನ್ ನಲ್ಲಿ ನೀಡಲಾದ ಅದ್ಭುತ ವೈಶಿಷ್ಟ್ಯಗಳು ಮತ್ತು ವಿನ್ಯಾಸವೇ ಈ ಫೋನ್ ಬೇಡಿಕೆ ಹೆಚ್ಚಾಗಲು ಕಾರಣ. ಮಾರುಕಟ್ಟೆಯಲ್ಲಿರುವ ದುಬಾರಿ ಫೋನ್ ಗಳಿಗೂ ಇದು ಟಕ್ಕರ್ ನೀಡುತ್ತಿದೆ. ನೀವು ಕೂಡಾ ಈ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗಾಗಿ ಒಳ್ಳೆಯ ಸುದ್ದಿವೊಂದಿದೆ. ಹೌದು, ಈ ಫೋನ್ ಅನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಈ ಫೋನಿನ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ನೀಡುತ್ತಿದೆ.
ಈ ಫೋನಿನ ವಿಶೇಷತೆಗಳು :
Galaxy M53 5Gನಲ್ಲಿ, ಗ್ರಾಹಕರು 6.7-ಇಂಚಿನ ಫುಲ್ HD+ ಡಿಸ್ಪ್ಲೇ ಇನ್ಫಿನಿಟಿ O ಸೂಪರ್ AMOLED+ ಡಿಸ್ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಡಿಸ್ಪ್ಲೇಯಲ್ಲಿ ಗೊರಿಲ್ಲಾ ಗ್ಲಾಸ್ 5 ರ ಪ್ರೊಟೆಕ್ಷನ್ ನೀಡಲಾಗಿದೆ. ಈ ಫೋನ್ ನಾಲ್ಕು ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಇದರ ಪ್ರೈಮರಿ ಲೆನ್ಸ್ 108 ಮೆಗಾಪಿಕ್ಸೆಲ್ ನದ್ದಾಗಿದೆ. ಎರಡನೇ ಲೆನ್ಸ್ 8 ಮೆಗಾಪಿಕ್ಸೆಲ್‌ಗಳ ಅಲ್ಟ್ರಾ ವೈಡ್, ಮೂರನೇ ಲೆನ್ಸ್ 2 ಮೆಗಾಪಿಕ್ಸೆಲ್‌ಗಳ ಡೆಪ್ತ್ ಮತ್ತು ನಾಲ್ಕನೇ ಲೆನ್ಸ್ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಆಗಿದೆ. ಸೆಲ್ಫಿಗಾಗಿ ಈ ಸ್ಯಾಮ್‌ಸಂಗ್ ಫೋನ್‌ನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. Galaxy M53 5G 8 GB RAM ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್‌ನೊಂದಿಗೆ 128 GBವರೆಗೆ ಸ್ಟೋರೇಜ್ ಅನ್ನು ಹೊಂದಿದೆ. 8 GB ವರ್ಚುವಲ್ RAM ಕೂಡಾ ಈ ಫೋನ್ ನೊಂದಿಗೆ ಲಭ್ಯವಿರುತ್ತದೆ. ಅಂದರೆ ಇದು ಒಟ್ಟು 16 GB ಸ್ಟೋರೇಜ್ ಇರಲಿದೆ.
ಇದನ್ನೂ ಓದಿ : Realmeಯ ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಅನ್ನು ಕೇವಲ 599 ರೂ.ಗಳಿಗೆ ಖರೀದಿಸಿ
ಈ ಸ್ಮಾರ್ಟ್‌ಫೋನ್ ಮೇಲಿನ ಆಫರ್ ಏನು ? :
ಈ ಸ್ಮಾರ್ಟ್‌ಫೋನ್‌ನ ನಿಜವಾದ ಬೆಲೆ 32,999 ರೂಪಾಯಿ ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಮೇಲೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರಿಯಾಯಿತಿಯ ನಂತರ ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ಅಂದರೆ 26,990 ರೂಗಳಲ್ಲಿ ಈ ಫೋನ್ ಅನ್ನು ಖರೀದಿಸಬಹುದಾಗಿದೆ. ಅಂದರೆ ಈ ಫೋನ್ ಖರೀದಿ ಮಾಡುವ ಮೂಲಕ ಸಾವಿರಾರು ರೂಪಾಯಿಯನ್ನು ಉಳಿಸಬಹುದಾಗಿದೆ.
ಇದನ್ನೂ ಓದಿ : ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಖರೀದಿಯಲ್ಲಿ ಬಂಪರ್ ಡಿಸ್ಕೌಂಟ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.