ನವದೆಹಲಿ : ಪ್ರಸ್ತುತ, ಸ್ಮಾರ್ಟ್ ಟಿವಿಯ (Smart TV) ಪ್ರವೃತ್ತಿ ಹೆಚ್ಚಾಗಿದೆ. ಆದರೆ ಇನ್ನೂ ಅನೇಕ ಮನೆಗಳಲ್ಲಿ ನಾನ್ ಸ್ಮಾರ್ಟ್ ಟಿವಿಯೇ ಇದೆ. ಸ್ಮಾರ್ಟ್ ಟಿವಿಯಿಲ್ಲದೆ ಹೋದರೆ ನೆಟ್ ಫ್ಲಿಕ್ಸ್ (Netflix) ನೊಡಬಹುದೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಇನ್ನು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ನಾನ್ ಸ್ಮಾರ್ಟ್ ಟಿವಿಯಲ್ಲೂ ನೆಟ್ ಫ್ಲಿಕ್ಸ್ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಈ ಹಂತಗಳನ್ನು ಅನುಸರಿಸಿ :
Netflixನಲ್ಲಿ ಕಾಸ್ಟಿಂಗ್ ಫೀಚರ್ ಮೂಲಕ, ಸ್ಮಾರ್ಟ್ ಫೋನ್ ಮಾಧ್ಯಮದ ಮೂಲಕ ಟಿವಿಯಲ್ಲಿ ಸ್ಕ್ರೀನ್ ಕಾಸ್ಟ್ ಮಾಡಬಹುದು. ಇದಲ್ಲದೆ ಹೆಚ್ ಡಿಯಲ್ಲೂ ವಿಡಿಯೋಗಳನ್ನು ವೀಕ್ಷಿಸಬಹುದು. ನಿಮ್ಮ ಮೊಬೈಲ್ ಡಿವೈಸ್ (Mobile) ಮೂಲಕ ಫಾಸ್ಟ್ ಫಾರ್ವರ್ಡ್ , ರಿವೈಂಡ್ ಮತ್ತು ಪಾಸ್ ಮಾಡಬಹುದಾಗಿದೆ. ಇದರಲ್ಲಿ ಆಡಿಯೋ ಮತ್ತು ಸಬ್ ಟೈಟಲ್ ಸೆಟ್ಟಿಂಗ್ ನಲ್ಲೂ ಬದಲಾವಣೆ ಮಾಡಿಕೊಳ್ಳಬಹುದು. 


ಇದನ್ನೂ ಓದಿ : Samsung Galaxy M32 ಇಂದು ಭಾರತದಲ್ಲಿ ಬಿಡುಗಡೆ, ಇದರ ಬೆಲೆ, ವೈಶಿಷ್ಟ್ಯದ ಬಗ್ಗೆ ತಿಳಿಯಿರಿ


-ನಿಮ್ಮ ಮೊಬೈಲ್‌ನಲ್ಲಿ ನೆಟ್‌ಫ್ಲಿಕ್ಸ್ ಇನ್ ಸ್ಟಾಲ್ ಮಾಡಿ. ನಿಮ್ಮ ಅಕೌಂಟ್ ಗೆ  ಲಾಗ್ ಇನ್ ಮಾಡಿ.
-ಪರದೆಯ ಮೇಲೆ ಮೂಲೆಯಲ್ಲಿರುವ ಕಾಸ್ಟ್ ಐಕಾನ್ ಆಯ್ಕೆಮಾಡಿ.
- ಯಾವ ಡಿವೈಸನ್ನು ಕಾಸ್ಟ್ ಮಾಡಲು ಬಯಸುತ್ತಿರೋ, ಅದನ್ನು ಆಯ್ಕೆ ಮಾಡಿ. 
-ಅದರ ನಂತರ, ನೀವು ವೀಕ್ಷಿಸಲು ಬಯಸುವ ಚಲನಚಿತ್ರ ಅಥವಾ ಸೀರೀಸನ್ನು  ಪ್ಲೇ ಮಾಡಿ. 


ಕಾಸ್ಟ್ ಫೀಚರ್ ಮೂಲಕ ನೆಟ್ ಫ್ಲಿಕ್ಸ್ ನಲ್ಲಿ ಗೇಮಿಂಗ್ (Gaming) ಕೂಡಾ ಮಾಡಬಹುದು. ಸೋನಿ ಪ್ಲೇಸ್ಟೇಷನ್ 4, ಸೋನಿ ಪ್ಲೇಸ್ಟೇಷನ್ 5, ಎಕ್ಸ್ ಬಾಕ್ಸ್ ಒನ್ ನಂತಹ ಆಟಗಳ ಅನುಭವವನ್ನು ನೀವು ಆನಂದಿಸಬಹುದು. ಅಲ್ಲದೆ, ಡಾಂಗಲ್ ಮೂಲಕ  ಅಮೆಜಾನ್ ಫೈರ್ ಸ್ಟಿಕ್ (Amazon fire stick) , ಗೂಗಲ್ ಕ್ರೋಮ್ಕಾಸ್ಟ್ ಅಥವಾ ಏರ್ಟೆಲ್ ಎಕ್ಸ್ಟ್ರೀಮ್ ಸ್ಟಿಕ್ (Airtel Xtream) ಮತ್ತು ಜಿಯೋ ಫೈಬರ್ ಸೆಟ್ ಟಾಪ್ ಬಾಕ್ಸ್ ಕ್ಸೆಸ್ ಪಡೆದುಕೊಳ್ಳಬಹುದು.


ಇದನ್ನೂ ಓದಿ : Smartphone: ಈ ಸುಲಭ ಟ್ರಿಕ್ ಅಳವಡಿಸಿಕೊಳ್ಳಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಸಮಸ್ಯೆಗಳನ್ನು ಪರಿಹರಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.