ನವದೆಹಲಿ: Cheapest Netflix Plan - ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಒಟಿಟಿ (OTT) ಪ್ಲಾಟ್‌ಫಾರ್ಮ್ (Over The Top Platform) ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಚಂದಾದಾರರನ್ನು ತನ್ನತ್ತ ಆಕರ್ಷಿಸಲು ನೆಟ್‌ಫ್ಲಿಕ್ಸ್ (Netflix)ಪ್ರವೇಶ ಮಟ್ಟದ ಯೋಜನೆ ಸಿದ್ಧಪಡಿಸಿದೆ. ನೆಟ್ಫ್ಲಿಕ್ಸ್ ಭಾರತದಲ್ಲಿ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಹೊಸ ಯೋಜನೆಯನ್ನು ಪ್ರಾರಂಭಿಸುವ ಯೋಜನೆಯನ್ನು ರೂಪಿಸಿದೆ. ಕಂಪನಿಯು ಭಾರತೀಯ ಬಳಕೆದಾರರಿಗಾಗಿ ಹೊಸ ಮೊಬೈಲ್ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ನೀವು ಕೇವಲ 299 ರೂಗಳಿಗೆ ಎಚ್‌ಡಿ ಗುಣಮಟ್ಟದಲ್ಲಿ ನೆಟ್‌ಫ್ಲಿಕ್ಸ್ ಕಂಟೆಂಟ್ ಅನ್ನು ಸಂಪೂರ್ಣ ತಿಂಗಳು ಆನಂದಿಸಲು ಸಾಧ್ಯವಾಗಲಿದೆ. Netflix ಈ ಹೊಸ ಯೋಜನೆಯ ಮೂಲಕ, ಬಳಕೆದಾರರು ಒಂದು ಸಮಯದಲ್ಲಿ ಒಂದೇ ಪರದೆಯ ಮೇಲೆ HD ಗುಣಮಟ್ಟದಲ್ಲಿ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗಲಿದೆ. ಈ ಯೋಜನೆಯ ಮೂಲಕ, ಬಳಕೆದಾರರು ಯಾವುದೇ ಮೊಬೈಲ್, ಟ್ಯಾಬ್ಲೆಟ್ ಅಥವಾ ಡೆಸ್ಕ್‌ಟಾಪ್ / ಲ್ಯಾಪ್‌ಟಾಪ್‌ನಲ್ಲಿ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗಲಿದೆ.
ಇದನ್ನೂ ಓದಿ-BSNL Special OTT Plans: ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ವಿಶೇಷ ಕೊಡುಗೆ
ಟೆಸ್ಟಿಂಗ್ ನಡೆಸುತ್ತಿದೆ ಕಂಪನಿ
Netflix ಬಿಡುಗಡೆಗೊಳಿಸಲು ರೂಪಿಸುತ್ತಿರುವ ಈ ಯೋಜನೆಯ ಹೆಸರು Mobile+ ಹಾಗೂ ಟೆಸ್ಟಿಂಗ್ ಅವಧಿಯ ವೇಳೆ ಇದಕ್ಕಾಗಿ ಬಳಕೆದಾರರು ಪ್ರತಿ ತಿಂಗಳು ರೂ.299 ಹಣ ಪಾವತಿಸಬೇಕು. ವರದಿಗಳ ಪ್ರಕಾರ ಈ ಹೊಸ Mobile+ ಯೋಜನೆಯ ಟೆಸ್ಟಿಂಗ್ ಅನ್ನು ಪ್ರಸ್ತುತ ಕೆಲವೇ ಆಯ್ದ ಗ್ರಾಹಕರಿಗೆ ನೀಡಲಾಗುತ್ತಿದೆ ಹಾಗೂ ಅವರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದ ಬಳಿಕ ಅದನ್ನು ಇತರೆ ಬಳಕೆದಾರರಿಗೆ ಜಾರಿಗೊಳಿಸಲಾಗುವುದು.
ಇದನ್ನೂ ಓದಿ-'Tandav' ವಿವಾದದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ, OTTಗಾಗಿ ನೂತನ ಮಾರ್ಗಸೂಚಿಗಳ ಬಿಡುಗಡೆಗೆ ಸಿದ್ಧತೆ
ಈ ಪ್ಲಾನ್ ನಲ್ಲಿ ಕೇವಲ SD ಕ್ವಾಲಿಟಿಯಲ್ಲಿ ಕಂಟೆಂಟ್ ಅನ್ನು ಆಫರ್ ಮಾಡಲಾಗುತ್ತಿದೆ. ಇಂತಹುದರಲ್ಲಿ HD ಕ್ವಾಲಿಟಿಯ ಕಂಟೆಂಟ್ ಜೊತೆಗೆ ಅಗ್ಗದ ದರದ ನೆಟ್ ಫ್ಲಿಕ್ಸ್ ಚಂದಾದಾರಿಕೆ ಬಯಸುವವರು ಟೆಸ್ಟಿಂಗ್ ಅವಧಿಯಲ್ಲಿ Mobile+ Plan ಅನ್ನು ಆಯ್ದುಕೊಳ್ಳಬಹುದು. ಸದ್ಯದ ಪರಿಸ್ಥಿತಿಯಲ್ಲಿ ಇಡೀ ವಿಶ್ವಾದ್ಯಂತ ಮೊಬೈಲ್ ನಲ್ಲಿ Netflix ಸ್ಟ್ರೀಮ್ ಬಳಸುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ. ಇದೆ ಇದರ ಹಿಂದಿನ ದೊಡ್ಡ ಕಾರಣ ಎಂದೂ ಕೂಡ ಹೇಳಲಾಗುತ್ತಿದೆ.
ಇದನ್ನೂ ಓದಿ-ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.