ಫೋನ್ ಪದೇ ಪದೇ ಹ್ಯಾಂಗ್ ಆಗುತ್ತಿದೆಯಾ ? ಈ ಟ್ರಿಕ್ ಬಳಸಿದರೆ ಆಗಲಿದೆ ಸೂಪರ್ ಫಾಸ್ಟ್
ಫೋನ್ ಪದೇ ಪದೇ ಹ್ಯಾಂಗ್ ಆಗುತ್ತಿದ್ದರೆ, ಈ ಟಿಪ್ಸ್ ಗಳನ್ನು ಒಮ್ಮೆ ಬಳಸಿ ನೋಡಿ. ಆಂಡ್ರಾಯ್ಡ್ ಫೋನ್ ಕೆಲವೇ ನಿಮಿಷಗಳಲ್ಲಿ ಸೂಪರ್ ಫಾಸ್ಟ್ ಆಗಿ ಬಿಡುತ್ತವೆ.
ನವದೆಹಲಿ : ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ದಿನನಿತ್ಯದ ಬಳಕೆಯೊಂದಿಗೆ ಕೆಲ ಸಮಯದ ನಂತರ ಸ್ಮಾರ್ಟ್ ಫೋನ್ ಗಳು (smart phone) ಸ್ಲೋ ಆಗುತ್ತವೆ. ಈ ಫೋನ್ ಗಳ ಬಳಕೆ ಕಿರಿ ಕಿರಿ ಉಂಟು ಮಾಡುತ್ತದೆ. ಸ್ಮಾರ್ಟ್ಫೋನ್ ಸರಾಗವಾಗಿ ಚಲಾಯಿಸುವುದು ಬಹಳ ಮುಖ್ಯ. ಫೋನ್ ಪದೇ ಪದೇ ಹ್ಯಾಂಗ್ ಆಗುತ್ತಿದ್ದರೆ, ಈ ಟಿಪ್ಸ್ ಗಳನ್ನು ಒಮ್ಮೆ ಬಳಸಿ ನೋಡಿ. ಆಂಡ್ರಾಯ್ಡ್ ಫೋನ್ ಕೆಲವೇ ನಿಮಿಷಗಳಲ್ಲಿ ಸೂಪರ್ ಫಾಸ್ಟ್ ಆಗಿ ಬಿಡುತ್ತವೆ.
1. ಬ್ಯಾಕ್ ಗ್ರೌಂಡ್ ಪ್ರೋಸೆಸ್ ನಿಲ್ಲಿಸಿ :
ನಮ್ಮ ಫೋನ್ ನಲ್ಲಿರುವ ಎಷ್ಟೋ appಗಳು ಬ್ಯಾಕ್ ಗ್ರೌಂಡ್ ನಲ್ಲಿ ಆಗಾಗ ಅಪ್ಡೇಟ್ ಆಗುತ್ತಲೇ ಇರುತ್ತವೆ. ಇದು ಫೋನಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಇವುಗಳನ್ನು ಮ್ಯಾನ್ಯುವಲಿ ಕಂಟ್ರೋಲ್ ಮಾಡಬಹುದಾಗಿದೆ. ಕಾಲಕಾಲಕ್ಕೆ ಈ ಆಪ್‌ಗಳನ್ನು ಬಂದ್ ಮಾಡಿದರೆ ಫೋನ್‌ನ ವೇಗವು ಉತ್ತಮವಾಗಿರುತ್ತದೆ. ಇದಕ್ಕಾಗಿ ಹೀಗೆ ಮಾಡಬಹುದು.
- ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ.
-ಡೆವಲಪರ್ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.
- ಲಿಮಿಟ್ ಬ್ಯಾಕ್ ಗ್ರೌಂಡ್ ಪ್ರೋಸೆಸ್ ಆಯ್ಕೆಮಾಡಿ.
ಇದನ್ನೂ ಓದಿ : ಮೊಬೈಲ್ ಬಳಕೆದಾರರಿಗೆ ಸೆಪ್ಟೆಂಬರ್ ಒಂದರಿಂದ ಬದಲಾಗಲಿದೆ ನಿಯಮ, ನಿಮ್ಮ ಮೇಲಾಗುವ ಪರಿಣಾಮ ತಿಳಿಯಿರಿ
2. ಅಸಾಮಾನ್ಯ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ:
ಸ್ಮಾರ್ಟ್‌ಫೋನ್‌ಗಳು (Smart phone) ನಿಮಗೆ ಉಪಯುಕ್ತವಲ್ಲದ ಬಹಳಷ್ಟು ಬ್ಲೋಟ್‌ವೇರ್‌ಗಳನ್ನು ಪ್ಯಾಕ್ ಮಾಡುತ್ತವೆ. ಬಳಕೆಯಲ್ಲಿರದ ಕೆಲವು ಅಪ್ಲಿಕೇಶನ್‌ಗಳನ್ನು ನೀವು ಇನ್‌ಸ್ಟಾಲ್ ಮಾಡಿರಬಹುದು. ಈ ಎಲ್ಲಾ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ನಲ್ಲಿ ಸ್ಪೇಸ್ ಖಾಲಿ ಮಾಡುತ್ತವೆ. ಇದು ನಿಮ್ಮ ಡಿವೈಸ್ ಅನ್ನು ನಿಧಾನಗೊಳಿಸುತ್ತದೆ. ಹಾಗಾಗಿ ಬಳಕೆಯಲ್ಲಿ ಇಲ್ಲದ ಅಪ್ಲಿಕೇಶನ್‌ಗಳನ್ನು ಅನ್ ಇನ್ಸ್ಟಾಲ್ ಮಾಡಿ.
3. ನಿಮ್ಮ ಕ್ಯಾಚೆ ಕ್ಲೀನ್ ಮಾಡಿ :
ಫೋನ್‌ನ ಕ್ಯಾಚೆ ಯಾವಾಗಲೂ ಕ್ಲಿಯರ್ ಆಗಿರಬೇಕು. ಇದು ಅನೇಕ ಜಂಕ್ ಫೈಲ್‌ಗಳಿಂದ ಮಾಡಲ್ಪಟ್ಟಿರುತ್ತದೆ. ನಿಮ್ಮ ಫೋನ್ ಹ್ಯಾಂಗ್ ಆಗಲು ಸ್ಲೋ ಆಗಲು ಇದು ಪ್ರಮುಖ ಕಾರಣವಾಗಿರುತ್ತದೆ. ಕ್ಯಾಚೆ ಕ್ಲಿಯರ್ (cache clear) ಮಾಡಲು ಫೋನ್ app ಡೌನ್ಲೋಡ್ ಮಾಡಬಹುದು. ಅಥವಾ ಮ್ಯಾನ್ಯುವಲಿ ಕೂಡಾ ಡಿಲೀಟ್ ಮಾಡಬಹುದು. ಇದಕ್ಕಾಗಿ
- ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ.
- ಸ್ಟೋರೇಜ್ ಡೇಟಾವನ್ನು ಆಯ್ಕೆ ಮಾಡಿ.
-ಇಲ್ಲಿ ಕ್ಯಾಚೆ ಡೇಟಾದ ಆಯ್ಕೆ ಕಾಣಿಸುತ್ತದೆ
-ಓಕೆ ಕ್ಲಿಕ್ ಮಾಡಿ ಮತ್ತು ನಿಮ್ಮ ಕ್ಯಾಚೆ ಕ್ಲಿಯರ್ ಮಾಡಿ
4. Android ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ:
ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಮೊದಲೇ ಕೆಲವು ಅಪ್ಲಿಕೇಶನ್‌ಗಲು ಇನ್ಸ್ಟಾಲ್ ಆಗಿರುತ್ತವೆ. ಅವುಗಳಲ್ಲಿ ಕೆಲವು ನಿಮಗೆ ಅಗತ್ಯವಿಲ್ಲದೆ ಇರಬಹುದು. ಆಗ್ತಿ ಇರದ app ಗಳನ್ನೂ ಡಿಲೀಟ್ ಮಾಡಿ. ಇದಕ್ಕಾಗಿ ಕೆಲ ಹಂತಗಳನ್ನು ಅನುಸರಿಸಬೇಕು.
- ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ.
ಅಪ್ಲಿಕೇಶನ್ ಮ್ಯಾನೇಜರ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಫೋನ್‌ನ ಅಪ್ಲಿಕೇಶನ್ ಪಟ್ಟಿಯನ್ನು ಆಯ್ಕೆ ಮಾಡಿ.
- ಎಲ್ಲಾ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್ ಇನ್ಸ್ಟಾಲ್ ಮಾಡಿ
ಇದನ್ನೂ ಓದಿ : WhatsApp ಬಳಕೆದಾರರೇ ಎಚ್ಚರ! ಮಿಸ್ ಆಗಿ ಕೂಡ ಈ ಆವೃತ್ತಿಯನ್ನು ಡೌನ್‌ಲೋಡ್ ಮಾಡಬೇಡಿ
5. ಅನಿಮೇಷನ್‌ಗಳನ್ನು ನಿಷ್ಕ್ರಿಯಗೊಳಿಸಿ:
ಲೈವ್ ವಾಲ್ ಪೇಪರ್ (live wall paper) ಅಥವಾ ಅನಿಮೇಷನ್ ಕೂಡ ನಿಮ್ಮ ಫೋನಿನ ವೇಗವನ್ನು ನಿಧಾನಗೊಳಿಸುತ್ತದೆ. ನೀವು ಈ ಸೇವೆಯನ್ನು ನಿಷ್ಕ್ರಿಯಗೊಳಿಸಬೇಕು. ಇದನ್ನು ಮಾಡಲು ಈ ಹಂತಗಳನ್ನು ಅನುಸರಿಸಿ.
- ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ.
-ಡೆವಲಪರ್‌ಗಳ ಆಯ್ಕೆಗೆ ಹೋಗಿ.
- ಇಲ್ಲಿ ವಿಂಡೋ ಆನಿಮೇಷನ್ ಸ್ಕೇಲ್ ಮತ್ತು ಟ್ರಾನ್ಸಿಶನ್ ಆನಿಮೇಷನ್ ಸ್ಕೇಲ್ ಕಾಣಿಸುತ್ತದೆ.
- ಈ ಆಯ್ಕೆಗಳನ್ನು 0.5x ನಲ್ಲಿ ಆಯ್ಕೆ ಮಾಡಿ. ಇದು ನಿಮ್ಮ ಫೋನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
6. ಲೈವ್ ವಾಲ್‌ಪೇಪರ್‌ಗಳನ್ನು ಬಳಸಬೇಡಿ:
ಲೈವ್ ವಾಲ್‌ಪೇಪರ್‌ಗಳು ಅದ್ಭುತವಾಗಿ ಕಾಣುತ್ತವೆ. ಆದರೆ, ರನ್ ಮಾಡಲು ಅಷ್ಟೇ ಕಷ್ಟವಾಗಿರುತ್ತದೆ. ಇವುಗಳು ಸಿಪಿಯು ಮತ್ತು ಬ್ಯಾಟರಿಯ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ. ಇದರಿಂದ ಡಿವೈಸ್ ನಿಧಾನವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ