Cheapest Smartphone Market : ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸ್ಮಾರ್ಟ್‌ಫೋನ್ ಬಳಸುತ್ತಾರೆ.ಸ್ಮಾರ್ಟ್‌ಫೋನ್‌ನೊಂದಿಗೆ ಅದರ ಪರಿಕರಗಳಾದ ಹೆಡ್‌ಫೋನ್‌ಗಳು,ಸ್ಪೀಕರ್‌ಗಳ ಅಗತ್ಯವೂ ಇರುತ್ತದೆ. ಇಂದು ನಾವು ದೇಶದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.ಎಲೆಕ್ಟ್ರಾನಿಕ್ಸ್  ಸಾಧನ ಖರೀದಿಸುವವರಿಗೆ ಇದು ಸ್ವರ್ಗವಿದ್ದಂತೆ.ಇಲ್ಲಿ ಸಿಗುವುದಿಲ್ಲ ಎನ್ನುವ ಎಲೆಕ್ಟ್ರಾನಿಕ್ ಸಾಧನಗಳೇ ಇಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಮಾತ್ರವಲ್ಲದೆ ಅದರ ಬಿಡಿ ಭಾಗಗಳು ಕೂಡಾ  ಇಲ್ಲಿ ಸಿಗುತ್ತವೆ. 


COMMERCIAL BREAK
SCROLL TO CONTINUE READING

ಈ ಮಾರುಕಟ್ಟೆಯು ಕೈಗೆಟುಕುವ ಬೆಲೆ ಮತ್ತು ವಿವಿಧ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಲ್ಯಾಪ್‌ಟಾಪ್‌ಗಳವರೆಗೆ ಎಲ್ಲವನ್ನೂ ಸಗಟು ಬೆಲೆಯಲ್ಲಿ ಖರೀದಿಸಬಹುದು. ಇದಲ್ಲದೇ ಸ್ಮಾರ್ಟ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ಕೂಡಾ ಇಲ್ಲಿ ನಡೆಯುತ್ತದೆ.


ಇದನ್ನೂ ಓದಿ :  Jio ಗ್ರಾಹಕರಿಗೆ ಗಿಫ್ಟ್: ಈ ಬಜೆಟ್ ಸ್ನೇಹಿ ಯೋಜನೆಗಳಲ್ಲಿ ಸಿಗುತ್ತೆ ಬಂಪರ್ ಲಾಭ


ಈ ಮಾರುಕಟ್ಟೆಯು ಅಗ್ಗದ ಸ್ಮಾರ್ಟ್‌ಫೋನ್‌ಗಳು,ಮೊಬೈಲ್ ಪರಿಕರಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳಿಗೆ ಹೆಸರುವಾಸಿಯಾಗಿದೆ.ಇಲ್ಲಿ ಹೊಸ ಫೋನ್, ಲ್ಯಾಪ್‌ಟಾಪ್, ಪ್ರಿಂಟರ್,ಪ್ಲೇ ಸ್ಟೇಷನ್, ಹೋಮ್ ಥಿಯೇಟರ್ ಸಿಸ್ಟಮ್,ಸ್ಪೀಕರ್,ಎಲ್‌ಇಡಿ ಟಿವಿ, ಡಿಎಸ್‌ಎಲ್‌ಆರ್ ಕ್ಯಾಮೆರಾ ಸೇರಿದಂತೆ ಪ್ರತಿಯೊಂದು ಸಾಧನ ಖರೀದಿಗೆ ಲಭ್ಯ. ಅದು ಕೂಡಾ ಅತ್ಯಂತ ಕಡಿಮೆ ಬೆಲೆಗೆ. ಇಲ್ಲಿ ಅನೇಕ ಅಂಗಡಿಗಳಿವೆ. ಈ ಮಾರುಕಟ್ಟೆಯ ಇನ್ನೊಂದು ವಿಶೇಷ ಎಂದರೆ ಇಲ್ಲಿ ಎಷ್ಟು ಚೌಕಾಶಿ ಮಾಡುತ್ತೀರೋ ಖರೀದಿ ಮೇಲೆ ಅಷ್ಟು   ಹಣವನ್ನು ಉಳಿಸಬಹುದು. 


ಈ ಮಾರುಕಟ್ಟೆಯ ವೈಶಿಷ್ಟ್ಯಗಳು :
ಅಗ್ಗದ ಸ್ಮಾರ್ಟ್‌ಫೋನ್‌ಗಳು -ಇಲ್ಲಿ ನೀವು ಕಡಿಮೆ ಬೆಲೆಯಲ್ಲಿ ಪ್ರತಿಯೊಂದು ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದು.
ಮೊಬೈಲ್ ಪರಿಕರಗಳು - ಮೊಬೈಲ್ ಕವರ್‌ಗಳು, ಚಾರ್ಜರ್‌ಗಳು, ಹೆಡ್‌ಫೋನ್‌ಗಳು, ಪವರ್ ಬ್ಯಾಂಕ್‌ಗಳು ಮುಂತಾದ ಎಲ್ಲಾ ರೀತಿಯ ಮೊಬೈಲ್ ಪರಿಕರಗಳು ಇಲ್ಲಿ ಸುಲಭವಾಗಿ ಲಭ್ಯವಿವೆ.
ಎಲೆಕ್ಟ್ರಾನಿಕ್ ವಸ್ತುಗಳು - ಸ್ಮಾರ್ಟ್‌ಫೋನ್‌ಗಳ ಹೊರತಾಗಿ, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಕ್ಯಾಮೆರಾಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಇಲ್ಲಿ ಕಾಣಬಹುದು.
ಹಳೆಯ ಮೊಬೈಲ್ ಫೋನ್‌ಗಳು - ಇಲ್ಲಿ ನೀವು ನಿಮ್ಮ ಹಳೆಯ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಬಹುದು ಅಥವಾ ಖರೀದಿಸಬಹುದು.


ಇದನ್ನೂ ಓದಿ : ಎಚ್ಚರ...!! Google Pay, Phone Pay ಬಳಸುತ್ತಿದ್ದೀರಾ..? ಈ ಹೊಸ ಸ್ಕ್ಯಾಮ್‌ ಬಗ್ಗೆ ತಿಳಿಯಿರಿ.. ಇಲ್ಲಾ ಹಣ ಗೋವಿಂದ..!


ಇಲ್ಲಿ ಶಾಪಿಂಗ್ ಮಾಡುವ ಪ್ರಯೋಜನಗಳು : 
ಕೈಗೆಟುಕುವ ಬೆಲೆಗಳು - ಇತರ ಸ್ಟೋರ್‌ಗಳಿಗೆ ಹೋಲಿಸಿದರೆ ಇಲ್ಲಿ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ವಸ್ತುಗಳ ಖರೀದಿ ಸಾಧ್ಯವಾಗುತ್ತದೆ. 
ಹಲವು ಆಯ್ಕೆಗಳು - ವಿವಿಧ ಬ್ರಾಂಡ್‌ಗಳು ಮತ್ತು ಮಾದರಿಗಳ ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿ ಕಾಣಬಹುದು. 
ಚೌಕಾಸಿ - ಅಂಗಡಿಯವರೊಂದಿಗೆ ಚೌಕಾಸಿ ಮಾಡುವ ಮೂಲಕ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು. 


ಅಂದ ಹಾಗೆ ನಾವು ಹೇಳುತ್ತಿರುವ ಈ ಮಾರುಕಟ್ಟೆಯ ಹೆಸರು ಗಫರ್ ಮಾರುಕಟ್ಟೆ. ಇದು ನವದೆಹಲಿಯ ಕರೋಲ್ ಬಾಗ್ ಏರಿಯಾದಲ್ಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.