ಈ ಒಂದು ಸೆಟ್ಟಿಂಗ್ ಆಫ್ ಮಾಡಿ ನೋಡಿ, ಫೋನ್ ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ!

How to Improve Battery Life:ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ ಅನ್ನು ಆಫ್ ಮಾಡಿದರೆ ಫೋನಿನ ಬ್ಯಾಟರಿ ಲೈಫ್ ಹೆಚ್ಚಾಗುವುದು.   

Written by - Ranjitha R K | Last Updated : Sep 11, 2024, 02:14 PM IST
  • ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗ
  • ಫೋನಿನ ಬ್ಯಾಟರಿ ಬಾಳಿಕೆ ಚೆನ್ನಾಗಿ ಇದ್ದರೆ ಅದನ್ನು ದೀರ್ಘಕಾಲದವರೆಗೆ ಬಳಸಬಹುದು.
  • ಫೋನಿನ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಿ
ಈ ಒಂದು ಸೆಟ್ಟಿಂಗ್ ಆಫ್ ಮಾಡಿ ನೋಡಿ, ಫೋನ್ ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ!  title=

How to Improve Battery Life : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಜನರು ಉತ್ತಮ ಬ್ಯಾಟರಿ ಬಾಳಿಕೆ ಹೊಂದಿರುವ ಸ್ಮಾರ್ಟ್‌ಫೋನ್ ಗಳನ್ನೇ ಖರೀದಿಸಲು ಇಷ್ಟಪಡುತ್ತಾರೆ. ಫೋನಿನ ಬ್ಯಾಟರಿ ಬಾಳಿಕೆ ಚೆನ್ನಾಗಿ ಇದ್ದರೆ ಅದನ್ನು ದೀರ್ಘಕಾಲದವರೆಗೆ ಬಳಸಬಹುದು. ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ.ಆದರೆ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು.ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ ಆಫ್ ಆಗಿದ್ದರೆ ಫೋನಿನ ಬ್ಯಾಟರಿ ಲೈಫ್ ಕೂಡಾ ಹೆಚ್ಚಾಗುವುದು. 

 ಆಟೋ ಬ್ರೈಟ್ ನೆಸ್ : 
ಆಟೋ ಬ್ರೈಟ್ ನೆಸ್ ವೈಶಿಷ್ಟ್ಯವು ನಿಮ್ಮ ಸುತ್ತಲಿನ ಬೆಳಕಿಗೆ ಅನುಗುಣವಾಗಿ ನಿಮ್ಮ ಫೋನ್‌ ಸ್ಕ್ರೀನಿನ ಹೊಳಪನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.ಈ ವೈಶಿಷ್ಟ್ಯವು ಬ್ಯಾಟರಿಯನ್ನು ತ್ವರಿತವಾಗಿ ಖಾಲಿ ಮಾಡುತ್ತದೆ.ಸ್ಕ್ರೀನ್ ಬ್ರೈಟ್ ನೆಸ್  ಹೊಳಪನ್ನು ಮ್ಯಾನ್ಯುವೆಲ್ ಆಗಿ ಇಟ್ಟುಕೊಂಡರೆ ಬ್ಯಾಟರಿಯನ್ನು ಸೇವ್ ಮಾಡಬಹುದು. 

ಇದನ್ನೂ ಓದಿ : 3 ಸಾವಿರಕ್ಕಿಂತಲೂ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಜಿಯೋ ! ಮಾರುಕಟ್ಟೆಯಲ್ಲಿ ಮೂಡಿಸಿದೆ ಸಂಚಲನ

ಹೆಚ್ಚಿನ ರಿಫ್ರೆಶ್  ರೇಟ್ :
ಹೆಚ್ಚಿನ ರಿಫ್ರೆಶ್ ರೇಟ್ ಅನಿಮೇಷನ್ ಮತ್ತು ಪರದೆಯ ಮೇಲೆ ಸ್ಕ್ರೋಲಿಂಗ್ ಅನ್ನು ತುಂಬಾ ಮೃದುಗೊಳಿಸುತ್ತದೆ.ಇದನ್ನು ಸಕ್ರಿಯಗೊಳಿಸುವ ಮೂಲಕ, ಫೋನ್  ಬಳಸುವುದು ಸುಲಭವಾಗುತ್ತದೆ. ಆದರೆ ಈ ವೈಶಿಷ್ಟ್ಯವು ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ.

 ಲೋಕೇಶನ್ ಸರ್ವಿಸ್  : 
 ಲೋಕೇಶನ್ ಸರ್ವಿಸ್ ಆನ್ ಮಾಡಿದಾಗ, ನಿಮ್ಮ ಸ್ಮಾರ್ಟ್‌ಫೋನ್ ನಿಮ್ಮ ಸ್ಥಳವನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತದೆ.ಇದಕ್ಕಾಗಿ ಬ್ಯಾಟರಿಯನ್ನು ಹೆಚ್ಚು  ಬಳಸುತ್ತದೆ.ಆದ್ದರಿಂದ ಲೋಕೇಶನ್ ಸರ್ವಿಸ್ ನಿಮಗೆ ಅಗತ್ಯವಿಲ್ಲದಿದ್ದಾಗ ಅದನ್ನು ಆಫ್ ಮಾಡಿ.

 ವೈಬ್ರೇಶನ್ ಕಡಿಮೆ ಮಾಡಿ :
 ನೋಟಿಫಿಕೆಶನ್ ಅಥವಾ ಕರೆ ಬಂದಾಗಲೆಲ್ಲಾ ವೈಬ್ರೇಟ್ ಆಗುವುದರಿಂದ ಹೆಚ್ಚು ಬ್ಯಾಟರಿ ಬಳಕೆಯಾಗುತ್ತದೆ. ಅಗತ್ಯ ಇಲ್ಲ ಎಂದಾಗ ಈ ಒಪ್ಶನ್ ಅನ್ನು ಆಫ್ ಮಾಡಿ. ಸೌಂಡ್ ಅಂಡ್ ವೈಬ್ರೇಶನ್ ಸೆಟ್ಟಿಂಗ್ ಗೆ ಹೋಗುವ ಮೂಲಕ  ವೈಬ್ರೇಶನ್ ಆಫ್ ಮಾಡಬಹುದು.

ಇದನ್ನೂ ಓದಿ :  13 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 16! ಇಷ್ಟೊಂದು ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ ಜಗತ್ತಿನ ದುಬಾರಿ ಮೊಬೈಲ್‌...

ಬ್ಲೂಟೂತ್ ಮತ್ತು ವೈ-ಫೈ :
ಬ್ಲೂಟೂತ್ ಮತ್ತು ವೈ-ಫೈ ಬಳಸದೇ ಇದ್ದಾಗ,ಅವುಗಳನ್ನು ಆಫ್ ಮಾಡಿ ಈ ವೈಶಿಷ್ಟ್ಯಗಳು ಬ್ಯಾಕ್‌ಗ್ರೌಂಡ್‌ನಲ್ಲಿಯೂ ಬ್ಯಾಟರಿಯನ್ನು ಬಳಸುತ್ತಲೇ ಇರುತ್ತದೆ. ಹಾಗಾಗಿ ಅಗತ್ಯವಿರುವಾಗ ಮಾತ್ರ ಈ ವೈಶಿಷ್ಟ್ಯಗಳನ್ನು ಆನ್ ಮಾಡಿ, ಇಲ್ಲವಾದರೆ ಆಫ್ ಮಾಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News