ನವದೆಹಲಿ : ಚೀನಾದ ಸ್ಮಾರ್ಟ್‌ಫೋನ್ ತಯಾರಕ Xiaomi ಈ ವರ್ಷ Mi 11X 5G ಎಂಬ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ. ಈ ಫೋನ್ ಅದ್ಭುತ ಡಿಸ್ಪ್ಲೇ ಮತ್ತು ಉತ್ತಮ ಕ್ಯಾಮೆರಾ ಸೆಟಪ್‌ನೊಂದಿಗೆ ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಉತ್ತಮ 5G Smartphone ಖರೀದಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಈ ಫೋನ್ ಅನ್ನು Mi ವೆಬ್‌ಸೈಟ್‌ನಿಂದ ಕಡಿಮೆ ಬೆಲೆಗೆ ಖರೀದಿಸಬಹುದು.  


COMMERCIAL BREAK
SCROLL TO CONTINUE READING

Mi 11X 5G ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ :  
Mi Smartphone ಅನ್ನು ಬಹಳ ಕಡಿಮೆ ಬೆಲೆಗೆ ಖರೀದಿಸಬಹುದು. Mi ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ,ಈ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು. ನೀವು ಈ ಫೋನ್ (Phone) ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಿದರೆ, ಹಲವಾರು ಆಫರ್ ಗಳ ಲಾಭವನ್ನು ಕೂಡಾ ಪಡೆಯಬಹುದು. ವೆಬ್‌ಸೈಟ್‌ (website) ಮೂಲಕ  ಖರೀದಿಸುವುದಾದರೆ, 34,999 ರೂ ಬೆಲೆಯ ಈ ಫೋನ್‌ ಅನ್ನು 29,999 ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು. 


ಇದನ್ನೂ ಓದಿ : Whatsappನಲ್ಲಿ Block ಮಾಡಲೇ ಬೇಕೆಂದಿಲ್ಲ, ಹೀಗೆ ಮಾಡಿದರೂ ಮೆಸೇಜ್ ಮಾಡಿ ಕಿರಿ ಕಿರಿ ಉಂಟು ಮಾಡುವವರಿಂದ ತಪ್ಪಿಸಿಕೊಳ್ಳಬಹುದು


ಈ ರೀತಿ ಮಾಡಿದರೆ 5 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗಲಿದೆ: 
ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ (Smartphone) ಬದಲಾಗಿ ನೀವು ಇದನ್ನು ಖರೀದಿಸಿದರೆ,  ಈ ಫೋನ್ ಮೇಲೆ 21,600 ವರೆಗೆ ಉಳಿಸಬಹುದು. ಅಲ್ಲದೆ, ಎಕ್ಸ್‌ಚೇಂಜ್ ಆಫರ್‌ನಲ್ಲಿ (exchange offer) ನಿಮಗೆ  3 ಸಾವಿರ ಹೆಚ್ಚುವರಿ ರಿಯಾಯಿತಿಯನ್ನು ಕೂಡಾ ಸಿಗಲಿದೆ. ಇದರೊಂದಿಗೆ, Mi ರಿವಾರ್ಡ್ ಕೂಪನ್‌ನೊಂದಿಗೆ  500 ರೂ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಇದೆಲ್ಲಾ ಸೇರಿದರೆ ಈ ಸ್ಮಾರ್ಟ್‌ಫೋನ್ ಅನ್ನು 4,800 ರೂಪಾಯಿಗೆ ಮನೆಗೆ ತೆಗೆದುಕೊಂಡು ಹೋಗುವ ಅವಕಾಶವನ್ನು ಪಡೆಯಬಹುದು.


ಇಷ್ಟೇ ಅಲ್ಲ, ನೀವು ಈ ಫೋನ್‌ಗೆ MobiKwik ಮೂಲಕ ಪಾವತಿಸಿದರೆ, ಈ ಫೋನ್‌ನ ಬಿಡಿಭಾಗಗಳನ್ನು ಖರೀದಿಸಲು 600 ರೂಪಾಯಿಗಳ ಕ್ಯಾಶ್‌ಬ್ಯಾಕ್ ಮತ್ತು 1,500 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. 


ಇದನ್ನೂ ಓದಿ : Google Chrome ಬಳಕೆದಾರರೇ ಎಚ್ಚರ! ಈ ರೀತಿ ನಿಮ್ಮ ಡೇಟಾ ಖರ್ಚಾಗುತ್ತಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.