Whatsappನಲ್ಲಿ Block ಮಾಡಲೇ ಬೇಕೆಂದಿಲ್ಲ, ಹೀಗೆ ಮಾಡಿದರೂ ಮೆಸೇಜ್ ಮಾಡಿ ಕಿರಿ ಕಿರಿ ಉಂಟು ಮಾಡುವವರಿಂದ ತಪ್ಪಿಸಿಕೊಳ್ಳಬಹುದು

ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ಪ್ಲಾಟ್ ಫಾರಂ, ಇತ್ತೀಚೆಗೆ ಆರ್ಕೈವ್ ಮಾಡಿದ ಚಾಟ್ ಫೀಚರ್ ನ ರೀಪ್ಯಾಕೆಚ್ದ್ ಆವೃತ್ತಿಯನ್ನು ಪರಿಚಯಿಸಿದೆ. 

Written by - Ranjitha R K | Last Updated : Nov 8, 2021, 03:40 PM IST
  • ಯಾವುದೇ ಬಳಕೆದಾರರನ್ನು ನಿರ್ಬಂಧಿಸದೆ ಸುಲಭವಾಗಿ ನಿರ್ಲಕ್ಷಿಸಬಹುದು.
  • ವಾಟ್ಸಾಪ್‌ನಲ್ಲಿ ಕಾಂಟಾಕ್ಟ್ ಅನ್ನು ಶಾಶ್ವತವಾಗಿ ಮ್ಯೂಟ್ ಮಾಡುವುದು ಹೇಗೆ?
  • ಆರ್ಕೈವ್ ಮಾಡಿದ ಕಾಂಟಾಕ್ಟ್ ಗಳನ್ನು ಕಂಡುಹಿಡಿಯುವುದು ಹೇಗೆ ?
Whatsappನಲ್ಲಿ Block ಮಾಡಲೇ ಬೇಕೆಂದಿಲ್ಲ, ಹೀಗೆ ಮಾಡಿದರೂ ಮೆಸೇಜ್ ಮಾಡಿ ಕಿರಿ ಕಿರಿ ಉಂಟು ಮಾಡುವವರಿಂದ ತಪ್ಪಿಸಿಕೊಳ್ಳಬಹುದು   title=
ವಾಟ್ಸಾಪ್‌ನಲ್ಲಿ ಕಾಂಟಾಕ್ಟ್ ಅನ್ನು ಶಾಶ್ವತವಾಗಿ ಮ್ಯೂಟ್ ಮಾಡುವುದು ಹೇಗೆ? (file photo)

ನವದೆಹಲಿ : ಕೆಲವರಿಗೆ ವಾಟ್ಸಾಪ್‌ನಲ್ಲಿ (whatsapp)  ಪ್ರತಿ ದಿನ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಮಾಡುವ ಅಭ್ಯಾಸವಿರುತ್ತದೆ. ಕೆಲವೊಮ್ಮೆ ಇಂಥಹ ಮೆಸೇಜ್ ಗಳಿಂದಲೇ ಫೋನ್ ತುಂಬಿ ಹೋಗುತ್ತದೆ.  ಹೀಗಾಗುವಾಗ ಇಂಥ  ಸ್ನೇಹಿತರಿಂದ ವಾಟ್ಸಾಪ್‌ನಲ್ಲಿ ಅಂತರ ಕಾಯ್ದುಕೊಳ್ಳುವುದು ಹೇಗೆ? ಇವರನ್ನು ಬ್ಲಾಕ್ ಮಾಡಲೇಬೇಕೆಂದಿಲ್ಲ.   ಇದಕ್ಕಾಗಿ ಕೇವಲ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ಪ್ಲಾಟ್ ಫಾರಂ, ಇತ್ತೀಚೆಗೆ ಆರ್ಕೈವ್ ಮಾಡಿದ ಚಾಟ್ ಫೀಚರ್ ನ (Chat features) ರೀಪ್ಯಾಕೆಚ್ದ್ ಆವೃತ್ತಿಯನ್ನು ಪರಿಚಯಿಸಿದೆ. ಈ ಮೆಸೇಜಿಂಗ್ ಫೀಚರ್ ಮೂಲಕ ಈಗ ಬಳಕೆದಾರರೂ, ಯಾವುದೇ ಕಾಂಟಾಕ್ಟ್ ಅನ್ನು ಶಾಶ್ವತವಾಗಿ ಮ್ಯೂಟ್ ಮಾಡುವುದು ಸಾಧ್ಯವಾಗುತ್ತದೆ. 

ವಾಟ್ಸಾಪ್‌ನಲ್ಲಿ ಯಾರನ್ನಾದರೂ ಶಾಶ್ವತವಾಗಿ ಮ್ಯೂಟ್ ಮಾಡುವುದು ಹೇಗೆ:
ಹಂತ 1: WhatsApp ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿ. 
ಹಂತ 2: ಸಂದೇಶ ಕಳುಹಿಸುವ ಪ್ಲಾಟ್ಫಾರ್ಮ್ ಒಪನ್ ಮಾಡಿ .
ಹಂತ 3: ಕಿರುಕುಳ ನೀಡುವ ಸಂಪರ್ಕವನ್ನು ಆಯ್ಕೆಮಾಡಿ. (ನೀವು ಯಾವುದೇ ಸಂಖ್ಯೆಯ ಸಂಪರ್ಕಗಳನ್ನು ಆಯ್ಕೆ ಮಾಡಬಹುದು.)
ಹಂತ 4: Android ಬಳಕೆದಾರರು, ಕಾಂಟಾಕ್ಟ್ ಲಾಂಗ್ ಪ್ರೆಸ್ ಮಾಡಿ. IOS ಬಳಕೆದಾರರು ಕೂಡಾ ಅದೇ ರೀತಿ ಮಾಡಿ. 
ಹಂತ 5: iOS ಮತ್ತು Android ಎರಡರಲ್ಲೂ, ಕಾಂಟಾಕ್ಟ್  ಅನ್ನು ಆರ್ಕೈವ್ ಮಾಡಬಹುದು.

ಇದನ್ನೂ ಓದಿ : Realme Smartphone: ಕೇವಲ 2 ಸಾವಿರ ರೂ.ಗೆ ಖರೀದಿಸಿ Realme 5G ಸ್ಮಾರ್ಟ್‌ಫೋನ್..!

Whatsapp ನಲ್ಲಿ ಆರ್ಕೈವ್ ಮಾಡಿದ ಸಂಪರ್ಕಗಳನ್ನು ಕಂಡುಹಿಡಿಯುವುದು ಹೇಗೆ ?
ಹಂತ 1: WhatsApp ತೆರೆಯಿರಿ.
ಹಂತ 2: iOS ಮತ್ತು Android ಗಾಗಿ WhatsApp ಹೋಮ್ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಆರ್ಕೈವ್ ಚಾಟ್ ವಿಭಾಗವನ್ನು ತೋರಿಸುತ್ತದೆ. 
ಹಂತ 3: ಆರ್ಕೈವ್ ಮಾಡಿದ ಚಾಟ್ ಅನ್ನು ಸರ್ಚ್ (Search) ಮಾಡಲು ಅಲ್ಲಿರುವ ಆಯ್ಕೆಯನ್ನು ಕ್ಲಿಕ್ ಮಾಡಿ. 

Whatsapp ನಲ್ಲಿ ಸಂಪರ್ಕಗಳನ್ನು ಅನ್‌ಆರ್ಕೈವ್ ಮಾಡುವುದು ಹೇಗೆ ?
ಹಂತ 1: ನಿಮ್ಮ Android ಫೋನ್, iPhone ನಲ್ಲಿ WhatsApp ಅಪ್ಲಿಕೇಶನ್ ತೆರೆಯಿರಿ.
ಹಂತ 2: ಹೋಮ್‌ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಆರ್ಕೈವ್ ವಿಭಾಗಕ್ಕೆ ಹೋಗಿ.
ಹಂತ 3: ನೀವು ಅನ್‌ಆರ್ಕೈವ್ ಮಾಡಲು ಬಯಸುವ ಸಂಪರ್ಕದ ಮೇಲೆ ಲಾಂಗ್ ಒತ್ತಿ ಮತ್ತು ಅಲ್ಲಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ : Malware Alert! ಈಗಲೇ 151 ಆಂಡ್ರಾಯ್ಡ್ ಅಪ್ಲಿಕೇಶನ್‌ ಗಳನ್ನು ನಿಮ್ಮ ಪೋನ್ ನಿಂದ ಡಿಲಿಟ್ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News