ಬೆಂಗಳೂರು : ಇದೀಗ ಸ್ಮಾರ್ಟ್ ಟಿವಿಯದ್ದೇ ಜಮಾನ. ಹಳೆಯ ಟಿವಿಗಳು  ಸ್ಮಾರ್ಟ್ ಟಿವಿಯಂಥಹ ಗುಣಮಟ್ಟವನ್ನು ನೀಡಲು ಸಾಧ್ಯವಿಲ್ಲ.  ಕೆಲವು ಮನೆಗಳಲ್ಲಿ ಇನ್ನೂ ಆಂಡ್ರಾಯ್ಡ್ ಟಿವಿಯನ್ನು ಬಳಸಲಾಗುತ್ತಿದೆ. ಇವುಗಳಲ್ಲಿ, ಇಂಟರ್ನೆಟ್ ಅನ್ನು ಆಕ್ಸೆಸ್ ಮಾಡಲು ಸಾಧ್ಯವಿಲ್ಲ.  ಹೀಗಾದಾಗ OTT ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸುವುದು ಕೂಡಾ ಸಾಧ್ಯವಿಲ್ಲ. ಇಂಟರ್ನೆಟ್ ಅನ್ನು ಆಕ್ಸೆಸ್ ಮಾಡಲು,  OTT ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸಬೇಕಾದರೆ  ಸ್ಮಾರ್ಟ್ ಟಿವಿಯನ್ನು ಖರೀದಿಸಬೇಕಾಗುತ್ತದೆ. ಸ್ಮಾರ್ಟ್ ಟಿವಿ ಖರೀದಿಸಬೇಕಾದರೆ, ಇದಕ್ಕಾಗಿ 15 ಸಾವಿರದಿಂದ 20 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.  ಆದರೆ, ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಲು ಇಷ್ಟವಿಲ್ಲ ಎಂದಾದರೆ, ಹಳೆಯ ಟಿವಿಯನ್ನೇ ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಬಹುದು.  ಇದಕ್ಕಾಗಿ ಒಂದು ಸಣ್ಣ ಸಾಧನವನ್ನು ಖರೀದಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

 ಯಾವುದು ಈ ಸಾಧನ ? : 
ಈ ಸಾಧನದ ಹೆಸರು ಫೈರ್ ಸ್ಟಿಕ್. ಈ ಸಾಧನದ ಸಹಾಯದಿಂದ,  ಸಾಮಾನ್ಯ ಹಳೆಯ ಟಿವಿಯನ್ನು ಸ್ಮಾರ್ಟ್ ಟಿವಿಯನ್ನಾಗಿ ಮಾಡಬಹುದು. ಇದನ್ನು ಟಿವಿಯ ಹಿಂದೆ ಕನೆಕ್ಟ್ ಮಾಡಬೇಕಾಗುತ್ತದೆ. ಇದರೊಂದಿಗೆ ನಿಮಗೆ ರಿಮೋಟ್ ಕಂಟ್ರೋಲ್ ಕೂಡಾ ನೀಡಲಾಗುತ್ತದೆ. ಈ ಫೈರ್ ಸ್ಟಿಕ್ ಗಾತ್ರ ಕೂಡಾ ಅತ್ಯಂತ ಚಿಕ್ಕದಾಗಿರುತ್ತದೆ. ಈ ಫೈರ್ ಸ್ಟಿಕ್ ಅಳವಡಿಸುವ ಮೂಲಕ ನಾರ್ಮಲ್ ಟಿವಿಯನ್ನು ಸ್ಮಾರ್ಟ್ ಟಿವಿಯನ್ನಾಗಿ ಪರಿವರ್ತಿಸಬಹುದು.


ಇದನ್ನೂ ಓದಿ : Viral News: MRI Machine ನಲ್ಲಿ ರೋಮಾನ್ಸ್ ಮಾಡಿದ ಜೋಡಿ! ಭಾರಿ ವೈರಲ್ ಆದ ಸ್ಕ್ಯಾನ್ ಚಿತ್ರಗಳು


ಫೈರ್ ಸ್ಟಿಕ್ ಯಾವ ರೀತಿ ಕೆಲಸ ಮಾಡುತ್ತದೆ : 
ಈ ಚಿಕ್ಕ ಸಾಧನವನ್ನು ಬಳಸುವುದು ತುಂಬಾ ಸುಲಭ. ಒಮ್ಮೆ ಫೈರ್ ಸ್ಟಿಕ್ ಅನ್ನು ಸ್ಮಾರ್ಟ್ ಟಿವಿಯ ಹಿಂದಕ್ಕೆ ಕನೆಕ್ಟ್ ಮಾಡಿದರೆ, ರಿಮೋಟ್ ಸಹಾಯದಿಂದ ಬಳಸಬಹುದು. ಇದರಲ್ಲಿ, ಮೊದಲೇ  ಇನ್ಸ್ಟಾಲ್ ಮಾಡಲಾಗಿರುವ ಅಪ್ಲಿಕೇಶನ್‌ಗಳನ್ನು ವೀಕ್ಷಿಸಬಹುದು. ಅದರಲ್ಲಿ ವೀಡಿಯೊಗಳನ್ನು ಕೂಡಾ ವೀಕ್ಷಿಸಬಹುದು. ಆಟಗಳನ್ನು ಆಡಬಹುದು.  ಇದಕ್ಕಾಗಿ ರಿಮೋಟ್ ಸಹಾಯದಿಂದ ಫೈರ್ ಸ್ಟಿಕ್ ಅನ್ನು  ಅಕ್ಸೆಸ್ ಮಾಡಿ, ಇಂಟರ್ನೆಟ್ ಕನೆಕ್ಷನ್ ಮೂಲಕ ವೀಡಿಯೊಗಳನ್ನು ವೀಕ್ಷಿಸಬಹುದು. ಅಂದ ಹಾಗೆ ಮಾರುಕಟ್ಟೆಯಲ್ಲಿ ಈ ಫೈರ್ ಸ್ಟಿಕ್ ಬೆಲೆ 3999 ರೂಪಾಯಿ. 


ಇದನ್ನೂ ಓದಿ : BSNL: ಮುಂದಿನ 24 ಗಂಟೆಗಳಲ್ಲಿ ನಿಷ್ಕ್ರೀಯಗೊಳ್ಳಲಿವೆಯಂತೆ ಬಿಎಸ್ಎನ್ಎಲ್ ಸಿಮ್ ಗಳು! ನಿಜಾನಾ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.