BSNL: ಮುಂದಿನ 24 ಗಂಟೆಗಳಲ್ಲಿ ನಿಷ್ಕ್ರೀಯಗೊಳ್ಳಲಿವೆಯಂತೆ ಬಿಎಸ್ಎನ್ಎಲ್ ಸಿಮ್ ಗಳು! ನಿಜಾನಾ?

BSNL Recharge: BSNL ಸಿಮ್ ಹೊಂದಿರುವವರಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನಿಮ್ಮ ಬಳಿಯೂ BSNL ಸಿಮ್ ಇದ್ದರೆ 'ಮುಂದಿನ 24 ಗಂಟೆಗಳಲ್ಲಿ ನಿಮ್ಮ ಸಿಮ್ ಸ್ಥಗಿತಗೊಳ್ಳಲಿದೆ...?' ಎಂದು ಸಂಸ್ಥೆಯ ಪರವಾಗಿ ಈ ಕುರಿತು ಅಧಿಸೂಚನೆ ಹೊರಡಿಸಿ ಮಾಹಿತಿಯನ್ನು ನೀಡಲಾಗುತ್ತಿದೆ.  

Written by - Nitin Tabib | Last Updated : Dec 26, 2022, 06:20 PM IST
  • ಪಿಐಬಿ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಈ ಸಂದೇಶದ ಹಿಂದಿನ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ನೀಡಿದೆ.
  • ಗ್ರಾಹಕರ KYC ಅನ್ನು TRAI ಅಮಾನತುಗೊಳಿಸಿದೆ ಮತ್ತು ಮುಂದಿನ
  • 24 ಗಂಟೆಗಳಲ್ಲಿ ಗ್ರಾಹಕರ ಸಿಮ್ ಅನ್ನು ನಿರ್ಬಂಧಿಸಲಾಗುವುದು ಎಂದು ಈ ವೈರಲ್ ಸಂದೇಶದಲ್ಲಿ ಹೇಳಲಾಗಿದೆ.
BSNL: ಮುಂದಿನ 24 ಗಂಟೆಗಳಲ್ಲಿ ನಿಷ್ಕ್ರೀಯಗೊಳ್ಳಲಿವೆಯಂತೆ ಬಿಎಸ್ಎನ್ಎಲ್ ಸಿಮ್ ಗಳು! ನಿಜಾನಾ? title=
BSNL Update

BSNL Recharge: BSNL ಸಿಮ್ ಹೊಂದಿರುವವರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನಿಮ್ಮ ಬಳಿಯೂ BSNL ಸಿಮ್ ಇದ್ದರೆ, ಮುಂದಿನ 24 ಗಂಟೆಗಳಲ್ಲಿ ನಿಮ್ಮ ಸಿಮ್ ಸ್ಥಗಿತಗೊಳ್ಳಲಿದೆ!  ಸಂಸ್ಥೆಯ ಪರವಾಗಿ ಈ ಕುರಿತು ಅಧಿಸೂಚನೆ ಹೊರಡಿಸಿ ಮಾಹಿತಿ ನೀಡಲಾಗುತ್ತಿದೆ. ನಿಜವಾಗಿಯೂ ಈ ರೀತಿ ಆಗುತ್ತಿದೆಯಾ? ಏನಿದು ಸಂಪೂರ್ಣ ವಿಷಯ ತಿಳಿದುಕೊಳ್ಳೋಣ ಬನ್ನಿ,

24 ಗಂಟೆಗಳಲ್ಲಿ ಸಿಮ್ ಗಳು ಬಂದ್ ಆಗಲಿವೆ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿಗಳು ವೈರಲ್ ಆಗುತ್ತಿವೆ. ಇದೇ ರೀತಿಯ ಒಂದು ಪೋಸ್ಟ್ ಕೂಡ ವೈರಲ್ ಆಗುತ್ತಿದೆ, ಇದರಲ್ಲಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ಸಿಮ್‌ಗಳು ಮುಂದಿನ 24 ಗಂಟೆಗಳಲ್ಲಿ ಸ್ಥಗಿತಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅದನ್ನು ಸತ್ಯ-ಪರಿಶೀಲನೆಗೆ ಒಳಪಡಿಸಲಾಗಿದ್ದು, ಅದರ ಹಿಂದಿನ ಸತ್ಯಾಸತ್ಯತೆ ಇದೀಗ ತಿಳಿದುಬಂದಿದೆ. 

ಇದನ್ನೂ ಓದಿ-WhatsApp New Feature: ಇನ್ಮುಂದೆ ಈ ಕೆಲ್ಸಾ ಮಾಡಿದ್ರೆ ನಿಮ್ಮ ವಾಟ್ಸ್ ಆಪ್ ಖಾತೆ ಬ್ಲಾಕ್

ಪಿಐಬಿ ಈ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ
ಪಿಐಬಿ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಈ ಸಂದೇಶದ ಹಿಂದಿನ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ನೀಡಿದೆ. ಗ್ರಾಹಕರ KYC ಅನ್ನು TRAI ಅಮಾನತುಗೊಳಿಸಿದೆ ಮತ್ತು ಮುಂದಿನ 24 ಗಂಟೆಗಳಲ್ಲಿ ಗ್ರಾಹಕರ ಸಿಮ್ ಅನ್ನು ನಿರ್ಬಂಧಿಸಲಾಗುವುದು ಎಂದು ಈ ವೈರಲ್ ಸಂದೇಶದಲ್ಲಿ ಹೇಳಲಾಗಿದೆ. ಇದರ ಹಿಂದಿನ ವಾಸ್ತವಿಕತೆಯನ್ನು ಪರಿಶೀಲಿಸಿದ ನಂತರ, ಈ ಪೋಸ್ಟ್ ಸಂಪೂರ್ಣವಾಗಿ ನಕಲಿಯಾಗಿದೆ ಎಂದು ತಿಳಿದು ಬಂದಿದೆ ಮತ್ತು ಪಿಐಬಿ ಈ ರೀತಿಯ ಹಕ್ಕುಮಂಡನೆಯ ಸಂದೇಶವನ್ನು ತಿರಸ್ಕರಿಸಿದೆ.

ಇದನ್ನೂ ಓದಿ-Cheapest Broadband Plan: 14 OTT ಆಪ್ ಗಳ ಚಂದಾದಾರಿಕೆ, ಹೈಸ್ಪೀಡ್ ಇಂಟರ್ನೆಟ್, 330ಜಿಬಿ ಡೇಟಾ, ಬೆಲೆ ಕೇವಲ...?

ವೈರಲ್ ಸುದ್ದಿ ಸತ್ಯವನ್ನು ಈ ರೀತಿ ಪರಿಶೀಲಿಸಿ
ಮೊದಲನೆಯದಾಗಿ ಇಂತಹ ಸುಳ್ಳು ಸುದ್ದಿಗಳಿಂದ ದೂರವಿರಿ ಮತ್ತು ಈ ಸುದ್ದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯಕ್ಕೆ ಇಂತಹ ಸುದ್ದಿಗಳನ್ನು ಫಾರ್ವರ್ಡ್ ಮಾಡಬೇಡಿ. ನೀವು ಯಾವುದೇ ವೈರಲ್ ಸಂದೇಶದ ಸತ್ಯವನ್ನು ತಿಳಿದುಕೊಳ್ಳಲು ನೀವು ಬಯಸಿದರೆ, ನೀವು ಈ ಮೊಬೈಲ್ ಸಂಖ್ಯೆ 918799711259 ಅಥವಾ socialmedia@pib.gov.in ಗೆ ಮೇಲ್ ಮಾಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News