Distance From Fridge To Stove : ಕಾಲ ಕಳೆಯುತ್ತಿದ್ದಂತೆಯೇ ನಮ್ಮ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳಾಗುತ್ತವೆ. ಜನರ ಅಗತ್ಯತೆ - ಅವಶ್ಯಕತೆಗಳು ಕೂಡಾ ಬದಲಾಗುತ್ತಿವೆ. ಗೃಹೋಪಯೋಗಿ ವಸ್ತುಗಳ ಸಂಖ್ಯೆಯೂ ಹೆಚ್ಚುತ್ತಿದೆ.   ಮನೆಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಗ್ಯಾಜೆಟ್‌ಗಳ ಬಳಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.  ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಕಾಳಜಿ ವಹಿಸುವುದು ಸಹ ಅಗತ್ಯವಾಗಿದೆ. ಇವುಗಳಲ್ಲಿ ಅವೆಷ್ಟೋ ವಸ್ತುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅವುಗಳು ಇಲ್ಲ ಎಂದಾದರೆ ಕೆಲಸ ಮುಂದೆ ಸಾಗುವುದೇ ಇಲ್ಲ. ಎಲೆಕ್ಟ್ರಾನಿಕ್ ವಸ್ತುಗಳು  ನಮ್ಮ ಜೀವನದಲ್ಲಿ ಅಷ್ಟು ಮುಖಿ ಎಂದಾಗುವಾಗ ಅವುಗಳನ್ನು ಸರಿಯಾಗಿ ಬಳಸುವುದು ಕೂಡಾ ಮುಖ್ಯವಾಗಿರುತ್ತದೆ. ಇಲ್ಲವಾದರೆ ಸಮಯಕ್ಕೆ ಮುಂಚೆಯೇ ಅದು ಹಾಳಾಗುತ್ತದೆ. ಇನ್ನು ಫ್ರಿಜ್ ವಿಚಾರಕ್ಕೆ ಬಂದರೆ ಅದರ ಬಗ್ಗೆ  ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. 


COMMERCIAL BREAK
SCROLL TO CONTINUE READING

ಫ್ರಿಡ್ಜ್ ಅನ್ನು ಒಲೆಯ ಬಳಿ ಇಡಬಹುದೇ ? : 
ಅನೇಕ ಜನರು ಫ್ರಿಡ್ಜ್  ಅನ್ನು ಅಡುಗೆಮನೆಯಲ್ಲಿಯೇ ಇಡುತ್ತಾರೆ. ಅಡುಗೆ ಮನೆಯಲ್ಲಿ ಫ್ರಿಡ್ಜ್ ಇಡುವುದು ತಪ್ಪಲ್ಲ. ಆದರೆ ಫ್ರಿಡ್ಜ್ ಸುತ್ತ ಮುತ್ತ ಬೇರೆ ಯಾವ ವಸ್ತುವನ್ನು ಇರಿಸಲಾಗಿದೆ ಎನ್ನುವುದು ಕೂಡಾ ಇಲ್ಲಿ ಮುಖ್ಯ. ಅಡುಗೆ ಮನೆಯಲ್ಲಿ ಫ್ರಿಡ್ಜ್ ಇಡುವಾಗ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಅನ್ನು ಕೂಡಾ ಇರಿಸಲಾಗುತ್ತದೆ. ಗ್ಯಾಸ್ ಸ್ಟೌವ್ ಅನ್ನು ಅಡುಗೆ ಮನೆಯಲ್ಲಿಯೇ ಇರಿಸಬೇಕು. ಗ್ಯಾಸ್ ಸ್ಟೌವ್ ಮಟ್ಟಿ ಫ್ರಿಡ್ಜ್ ಎರಡನ್ನೂ ಅಡುಗೆ ಮನೆಯಲ್ಲಿಯೇ ಇಡಬೇಕಾದ ಸ್ಥಿತಿ ಎದುರಾದಾಗ ಒಲೆಯಿಂದ ಎಷ್ಟು ದೂರ ಫ್ರಿಡ್ಜ್ ಇಡಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. 


ಇದನ್ನೂ ಓದಿ : ಕೈಗೆಟಕುವ ಬೆಲೆಯ Realme 11 ಮತ್ತು Realme 11x ಬಿಡುಗಡೆ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ


ಕೂಲಿಂಗ್ ಸಾಧ್ಯವಾಗುವುದಿಲ್ಲ : 
ಫ್ರಿಡ್ಜ್ ಬಳಿ ಸ್ಟೌವ್  ಇಡುವುದು ಸರಿಯಲ್ಲ. ಸ್ಟೌವ್ ನಿಂದ ಹೊರಬರುವ ಶಾಖವು ಫ್ರಿಡ್ಜ್‌ನ ಒಳಗಿನ ತಂಪಾಗಿಸುವಿಕೆಯ ಪ್ರಕ್ರಿಯೆ ಮೇಲೆ  ಅಡಚಣೆಯನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಫ್ರಿಡ್ಜ್ ನ ಸೆನ್ಸಾರ್ ಒಳಗೆ ಕೂಲಿಂಗ್ ಮಾಡಲು ಎರಡು ಪಟ್ಟು ಕೆಲಸ ಮಾಡಬೇಕಾಗುತ್ತದೆ.


ಏನು ಹೇಳುತ್ತಾರೆ ತಜ್ಞರು : 
ತಜ್ಞರ ಪ್ರಕಾರ, ಫ್ರಿಡ್ಜ್ ಮತ್ತು ಸ್ಟೌವ್  ನಡುವೆ 20-ಇಂಚಿನ ಅಂತರವಿರಬೇಕು. ಫ್ರಿಡ್ಜ್ ಮತ್ತು ಸ್ಟೌವ್  ನಡುವೆ ಅಷ್ಟು ಅಂತರವಿದ್ದರೆ ಮಾತ್ರ ಸ್ಟೌವ್ ನಿಮ್ಮ ಫ್ರಿಜ್ ಅನ್ನು ಹಾಳುಮಾಡುವುದಿಲ್ಲ.  ಇಲ್ಲವಾದರೆ ಫ್ರಿಡ್ಜ್‌ನ  ನಾವು ಅಂದುಕೊಂಡಷ್ಟು ದಿನ ಬಾಳಿಕೆ ಬಾರದೆ ಇರಬಹುದು. 


ಇದನ್ನೂ ಓದಿ :  Chandrayaan 3 ಯಶಸ್ಸಿನ ನಡುವೆಯೇ ಚಂದ್ರನ ಮೇಲ್ಮೈ ವೀಕ್ಷಣೆಗೆ ಮನೆಗೆ ತನ್ನಿ ಈ ಪವರ್ಫುಲ್ ಟೆಲಿಸ್ಕೋಪ್!


ಹತ್ತಿರ ಇಟ್ಟುಕೊಂಡರೆ ಏನಾಗಬಹುದು?
ಫ್ರಿಜ್ ಅನ್ನು ಒಲೆಯ ಬಳಿ ಇರಿಸಿದರೆ, ನಂತರ ಸ್ಟೌವ್ ಶಾಖವನ್ನು ಫ್ರಿಡ್ಜ್ ನ ಹೊರಭಾಗಕ್ಕೆ ವರ್ಗಾಯಿಸಬಹುದು. ಇದು ಫ್ರಿಜ್‌ನ ಕಂಪ್ರೆಸರ್ ಮೇಲೆ ಶಾಖದ ಪರಿಣಾಮವನ್ನು ಬೀರಬಹುದು. ಇದು  ಇಂಟರ್ನಲ್ ಕಾಯಿಲ್ ಮೇಲೆ ಪರಿಣಾಮ ಬೀರುತ್ತದೆ ಆಗ ಫ್ರಿಡ್ಜ್ ಹಾಳಾಗುತ್ತದೆ. 


ಹಾಗೆಯೇ ಇನ್ನೊಂದು ಮುಖ್ಯವಾದ ವಿಷಯ ಎಂದರೆ ಫ್ರಿಜ್‌ನ ಹಿಂದಿನ ಗಾತ್ರವು ಗೋಡೆಯಿಂದ ಕನಿಷ್ಠ 2 ಇಂಚುಗಳಷ್ಟು ದೂರದಲ್ಲಿರಬೇಕು ಎನ್ನುತ್ತಾರೆ ತಜ್ಞರು. ಅದೇ ಸಮಯದಲ್ಲಿ, ಮೇಲ್ಭಾಗ ಮತ್ತು ಬದಿಗಳಲ್ಲಿ 1-ಇಂಚಿನ ಅಂತರವನ್ನು ಹೊಂದಿರುವುದು ಕೂಡಾ ಅವಶ್ಯಕ. ಫ್ರಿಜ್ ಅನ್ನು ಹೀಗೆ ಇಟ್ಟರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.