Uber ಹೊಸ ವೈಶಿಷ್ಟ್ಯ: ಇನ್ಮುಂದೆ ಉಬರ್ ಕ್ಯಾಬ್‌ಗಳನ್ನು ಅಗ್ಗವಾಗಿ ಬುಕ್ ಮಾಡಬಹುದು

Uber New Feature: ನೀವೂ ಉಬರ್ ಗ್ರಾಹಕರಾಗಿದ್ದರೆ ಇನ್ನು ಮುಂದೆ ನೀವು ಅಗ್ಗದ ದರದಲ್ಲಿ ಉಬರ್ ಕ್ಯಾಬ್‌ಗಳನ್ನು ಆನಂದಿಸಬಹುದು. ಅದು ಹೇಗೆ ಸಾಧ್ಯ. ಉಬರ್ ಹೊಸ ವೈಶಿಷ್ಟ್ಯವೇಣು ಎಂದು ತಿಳಿಯೋಣ. 

Written by - Yashaswini V | Last Updated : Aug 23, 2023, 05:34 PM IST
  • ನೀವು ಉಬರ್ ಮೂಲಕ 'ಗ್ರೂಪ್ ರೈಡ್' ಬುಕಿಂಗ್ ಮಾಡಿದರೆ ಪಿಕಪ್ ವಿಭಿನ್ನವಾಗಿದ್ದರೂ ಆರ್ಥಿಕವಾಗಿ ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
  • ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನೀವು ಗ್ರೂಪ್ ರೈಡರ್ ಗಳ ಬಗ್ಗೆ ವಿವರಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
Uber ಹೊಸ ವೈಶಿಷ್ಟ್ಯ: ಇನ್ಮುಂದೆ ಉಬರ್ ಕ್ಯಾಬ್‌ಗಳನ್ನು ಅಗ್ಗವಾಗಿ ಬುಕ್ ಮಾಡಬಹುದು  title=

Uber New Feature: ಉಬರ್ ತನ್ನ ಗ್ರಾಹಕರ ಹಿತದೃಷ್ಟಿಯಿಂದ ಹೊಸ ವೈಶಿಷ್ಟ್ಯವನ್ನು ಆರಂಭಿಸಿದೆ. ಇದರ ಸದುಪಯೋಗಪಡಿಸಿಕೊಳ್ಳುವ ಮೂಲಕ ನೀವು ಉಬರ್ ಕ್ಯಾಬ್‌ಗಳನ್ನು ಅಗ್ಗವಾಗಿ ಬುಕ್ ಮಾಡಬಹುದು. ಯಾವುದೀ ವೈಶಿಷ್ಟ್ಯ, ಇದರ ಪ್ರಯೋಜನವೇನು ಎಂದು ತಿಳಿಯೋಣ... 

ಉಬರ್ ತನ್ನ ಗ್ರಾಹಕರಿಗಾಗಿ 'ಗ್ರೂಪ್ ರೈಡ್' ಎಂಬ ಹೊಸ ವೈಶಿಷ್ಟ್ಯವನ್ನು ಆರಂಭಿಸಿದೆ. ಈ ವೈಶಿಷ್ಟ್ಯವನ್ನು ಬಳಸಿ ಒಂದೇ ಗಮ್ಯಸ್ಥಾನಕ್ಕೆ ಮೂರು ಮಂದಿ ಬುಕ್ ಮಾಡಬಹುದು. ನೀವು ಗ್ರೂಪ್ ರೈಡ್ ನಲ್ಲಿ ಕ್ಯಾಬ್ ಬುಕ್ ಮಾಡುವುದರಿಂದ 30% ವರೆಗೆ ಹಣ ಉಳಿತಾಯ ಮಾಡಬಹುದು. ಈ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಫುಲ್ ಡೀಟೈಲ್ಸ್. 

ಇದನ್ನೂ ಓದಿ- New Electric Bike Launch: 307km ರೆಂಜ್ ಇರುವ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಬಿಡುಗಡೆ !

ಹೌದು, ನೀವು ಉಬರ್ ಮೂಲಕ 'ಗ್ರೂಪ್ ರೈಡ್' ಬುಕಿಂಗ್ ಮಾಡಿದರೆ ಪಿಕಪ್ ವಿಭಿನ್ನವಾಗಿದ್ದರೂ ಆರ್ಥಿಕವಾಗಿ ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನೀವು ಗ್ರೂಪ್ ರೈಡರ್ ಗಳ ಬಗ್ಗೆ ವಿವರಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಮಾತ್ರವಲ್ಲ, ನೀವು ಗ್ರೂಪ್ ರೈಡ್ ವೈಶಿಷ್ಟ್ಯವನ್ನು ಆರಂಭಿಸಿದ ನಂತರ ನಿಮ್ಮ ಸ್ನೇಹಿತರು ಕೂಡ ತಮ್ಮ ಪಿಕ್-ಅಪ್ ಸ್ಥಳವನ್ನು ನಮೂದಿಸಬಹುದು. 

ಇದನ್ನೂ ಓದಿ- ನೀವು ಫೋನ್ ಕವರ್‌ನಲ್ಲಿ ನೋಟ್ ಇಡ್ತೀರಾ? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ

ಉಬರ್ ನಲ್ಲಿ ಗ್ರೂಪ್ ರೈಡ್ ಬುಕ್ ಮಾಡುವುದು ಹೇಗೆ? 
* ಮೊದಲು ಉಬರ್ ಅಪ್ಲಿಕೇಷನ್ ತೆರೆಯಿರಿ, ಸರ್ವಿಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
* ಇದರಲ್ಲಿ ಗ್ರೂಪ್ ರೈಡ್ ಎಂಬ ಆಯ್ಕೆಯನ್ನು ಆರಿಸಿ ಅಲ್ಲಿ ಪಿಕ್-ಅಪ್ ಮತ್ತು ಡ್ರಾಪ್ ಸ್ಥಳವನ್ನು ನಮೂದಿಸಿ. 
* ಇದರಲ್ಲಿ ನೀವು ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡುವ ಆಯ್ಕೆಯನ್ನು ಸಹ ನೋಡಬಹುದು. 
* ನಿಗದಿತ ಸ್ಥಳದಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಗ್ರೂಪ್ ರೈಡ್ ನಲ್ಲಿ ಪ್ರಯಾಣಿಸುವವರಿಗೆ ಲಿಂಕ್ ಕಳುಹಿಸಲಾಗುತ್ತದೆ. 
* ನಿಮ್ಮ ಸ್ನೇಹಿತರು ಆ ಲಿಂಕ್ ತೆರೆದು ನಿಗದಿತ ಜಾಗದಲ್ಲಿ ತಮ್ಮ ಪಿಕ್-ಅಪ್ ಸ್ಥಳಗಳನ್ನು ನಮೂದಿಸಬೇಕು. 
* ನಂತರ ನಿಮ್ಮ ರೈಡ್ ಬುಕ್ ಆಗುತ್ತದೆ. ಜೊತೆಗೆ ಚಾಲಕನ ನಂಬರ್, ವಾಹನದ ನಂಬರ್ ನಿಮಗೆ ಲಭ್ಯವಾಗುತ್ತದೆ. 

ಉಬರ್ ಗ್ರೂಪ್ ರೈಡ್ ಬಳಕೆಯ ಪ್ರಯೋಜನಗಳೇನು? 
ಉಬರ್ ಗ್ರೂಪ್ ರೈಡ್ ಬಳಸುವುದರಿಂದ ನೀವು ನಿಮ್ಮ ಸಂಚಾರಕ್ಕಾಗಿ ಬಳಸುವ ಹಣದಲ್ಲಿ 30% ಹಣವನ್ನು ಉಳಿತಾಯ ಮಾಡಬಹುದು. ಮಾತ್ರವಲ್ಲ, ಇದು ರಸ್ತೆಯಲ್ಲಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News