WhatsApp New Privacy Policy ಹಿಂಪಡೆಯಲು ಕೇಂದ್ರದಿಂದ ಪತ್ರ
WhatsApp New Privacy Policy Updates - WhatsApp CEO ಗೆ ಈ ಕುರಿತು ಪತ್ರ ಬರೆದಿರುವ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಸೇವಾ ನಿಯಮಗಳು ಹಾಗೂ ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿದೆ.
Center On WhatsApp New Privacy Policy - ನವದೆಹಲಿ: WhatsApp ನೂತನ ಗೌಪ್ಯತಾ ನೀತಿಯ ಬಗ್ಗೆ ಕೇಂದ್ರದ ಮೋದಿ ನೇತೃತ್ವದ ಸರ್ಕಾರ (Modi Government) ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯನ್ನು ವಾಟ್ಸ್ ಆಪ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿರುವ ಸರ್ಕಾರ, ನೂತನ ಗೌಪ್ಯತಾ ನೀತಿಗೆ (WhatsApp New Privacy Policy) ಸಂಬಂಧಿಸಿದಂತೆ 10 ಪ್ರಶ್ನೆಗಳನ್ನು ಕೇಳಿದೆ.
ಇದನ್ನು ಓದಿ- ಏಪ್ರಿಲ್ 1 ರಿಂದ ನೌಕರಿ, PF ಹಾಗೂ Retirement ನಿಯಮಗಳಲ್ಲಿ ಭಾರಿ ಬದಲಾವಣೆ ಸಾಧ್ಯತೆ
ನೂತನ ಗೌಪ್ಯತಾ ನೀತಿ ಹಿಂಪಡೆಯಲು ಆಗ್ರಹ
ಮೂಲಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology), ವಾಟ್ಸಾಪ್ ಸಿಇಒಗೆ ಪತ್ರ ಬರೆದಿದ್ದು, ಭಾರತೀಯ ಬಳಕೆದಾರರಿಗಾಗಿ ಹೊಸ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಹಿಂಪಡೆಯಬೇಕೆಂದು ಕೋರಿದೆ. ಗ್ರಾಹಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಚಿವಾಲಯವು ವಾಟ್ಸಾಪ್‌ನ ಜಾಗತಿಕ ಸಿಇಒ ವಿಲ್ ಕ್ಯಾಥರ್ಟ್‌ಗೆ ಪತ್ರ ಬರೆದಿದೆ. ಸಚಿವಾಲಯವು ಬಳಕೆದಾರರ ಮಾಹಿತಿ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ ಮತ್ತು ಚಾಟ್ ಡೇಟಾವನ್ನು ವ್ಯವಹಾರ ಖಾತೆಯೊಂದಿಗೆ ಹಂಚಿಕೊಳ್ಳುವ ಮೂಲಕ, ಫೇಸ್‌ಬುಕ್‌ನ ಇತರ ಕಂಪನಿಗಳು ಬಳಕೆದಾರರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಲಿವೆ ಮತ್ತು, ಇದರಿಂದ ಬಳಕೆದಾರರ ಸುರಕ್ಷತೆಗೆ ಧಕ್ಕೆ ಉಂಟಾಗಲಿದೆ ಎಂದು ಸಚಿವಾಲಯ ಹೇಳಿದೆ.
ಇದನ್ನು ಓದಿ- Modi ಸರ್ಕಾರದ ಮಹತ್ವಾಕಾಂಕ್ಷೆಯ Central Vista Redevelopment Planಗೆ SC ಹಸಿರು ನಿಶಾನೆ
ನೂತನ ಪಾಲಸಿ ಒಪ್ಪಿಕೊಳ್ಳಲು ಬಲವಂತ ಬೇಡ
WhatsApp 'ಒಪ್ಪಿಕೊಳ್ಳಿ ಇಲ್ಲದೆ ವೇದಿಕೆ ಬಿಡಿ' ಎಂಬ ನೀತಿಯಡಿ ವಾಟ್ಸ್ ಆಪ್ ಬಳಕೆದಾರರಿಗೆ ಬಲವಂತ ಮಾಡುತ್ತಿದೆ. ಇದರಲ್ಲಿ ಬಳಕೆದಾರರು ನೂತನ ಪಾಲಸಿ ತಿರಸ್ಕರಿಸುವ ಹಾಗಿಲ್ಲ ಎಂದಿದೆ. ಈ ಸಂದರ್ಭದಲ್ಲಿ ಸರ್ಕಾರ (Central Government) 2017ರ ಸುಪ್ರೀಂ ಕೋರ್ಟ್ (Supreme Court) ತೀರ್ಮಾದಲ್ಲಿ ಉಲ್ಲೇಖವಾದ ನಿಯಮಗಳ ಕಡೆಗೂ ಕೂಡ ಸಚಿವಾಲಯ ವಾಟ್ಸ್ ಆಪ್ ಗಮನ ಸೆಳೆದಿದೆ. ಭಾರತೀಯ ಸಂಸತ್ತಿನಲ್ಲಿ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಚರ್ಚಿಸಲಾಗುತ್ತಿರುವ ಸಮಯದಲ್ಲಿ, ವಾಟ್ಸಾಪ್ ಈ ನೀತಿಯನ್ನು ಏಕೆ ತಂದಿದೆ ಎಂದು ಸಚಿವಾಲಯ ಪ್ರಶ್ನಿಸಿದೆ. ಈ ಮಸೂದೆ ಜಂಟಿ ಸಂಸದೀಯ ಸಮಿತಿಯೊಂದಿಗೆ ಪರಿಗಣನೆಯಲ್ಲಿದೆ. ಡೇಟಾ ಬಳಕೆಯ ಮಿತಿಗೆ ಇದರಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಅಂದರೆ, ಕಂಪನಿಯು ಬಳಕೆದಾರರ ಮಾಹಿತಿಯನ್ನು ಯಾವ ಉದ್ದೇಶ ತೆಗೆದುಕೊಳ್ಳುತ್ತಿವೆಯೋ , ಆ ಉದ್ದೇಶಕ್ಕೆ ಮಾತ್ರ ಮಾಹಿತಿಯನ್ನು ಬಳಸಿಕೊಳ್ಳಬೇಕು ಎಂಬುದರ ಉಲ್ಲೇಖವಿದೆ ಮತ್ತು ಇದಕ್ಕಾಗಿ ಬಳಕೆದಾರರ ಅನುಮತಿ ಕೂಡ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಸಚಿವಾಲಯ ಹೇಳಿದೆ.
ಇದನ್ನು ಓದಿ-Farmers ಆದಾಯ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.