Chandra Grahan 2022 : ಬ್ಲಡ್ ಮೂನ್‌ನ LIVE ರೋಮಾಂಚಕಾರಿ ನೋಟವನ್ನು ಇಲ್ಲಿ ವೀಕ್ಷಿಸಿ ..!
How to watch Blood Moon Live: ವರ್ಷದ ಮೊದಲ ಚಂದ್ರಗ್ರಹಣ ಪ್ರಾರಂಭವಾಗಿದೆ. ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ರಕ್ತದಂತೆ ಕೆಂಪಾಗಿ ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಅದನ್ನು ಬ್ಲಡ್ ಮೂನ್ ಎಂದು ಕರೆಯುತ್ತಾರೆ. ನಾಸಾದ ಲೈವ್ ಸ್ಟ್ರೀಮ್ ಮೂಲಕ ಭಾರತೀಯರು ಬ್ಲಡ್ ಮೂನ್ ನೋಡುವುದು ಸಾಧ್ಯವಾಗುತ್ತದೆ.
How to watch Blood Moon Live: ವರ್ಷದ ಮೊದಲ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 07:57 ಕ್ಕೆ ಪ್ರಾರಂಭವಾಗಿದೆ. ಮಧ್ಯಾಹ್ನ 12:20 ರವರೆಗೆ ಚಂದ್ರಗ್ರಹಣ ಮುಂದುವರೆಯಲಿದೆ. ಅಂದರೆ, ಸುಮಾರು 5 ಗಂಟೆಗಳ ಕಾಲ ಚಂದ್ರಗ್ರಹಣವು ಇರುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಹುಣ್ಣಿಮೆಯ ಚಂದ್ರನು ಕೆಂಪು ಗೋಳದಂತೆ ಕಾಣಿಸುತ್ತಾನೆ. ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿದ್ದರೂ, ಭಾರತೀಯರು ಬ್ಲಡ್ ಮೂನ್ ವೀಕ್ಷಿಸುವುದು ಸಾಧ್ಯವಾಗುತ್ತದೆ.
ಬ್ಲಡ್ ಮೂನ್ ನೇರ ಪ್ರಸಾರ ಮಾಡುತ್ತಿದೆ ನಾಸಾ :
ಬಾಹ್ಯಾಕಾಶ ಸಂಸ್ಥೆ ನಾಸಾ ವರ್ಷದ ಮೊದಲ ಚಂದ್ರಗ್ರಹಣವನ್ನು ನೇರ ಪ್ರಸಾರ ಮಾಡುತ್ತಿದೆ. ಈ ಲೈವ್ ಸ್ಟ್ರೀಮ್ ಮೂಲಕ, ಜನರು ಬ್ಲಡ್ ಮೂನ್‌ನ ಸುಂದರವಾದ ಮತ್ತು ರೋಮಾಂಚಕಾರಿ ದೃಶ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ನಾಸಾ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. ನಾಸಾದ ಸೈಟ್ ಮತ್ತು ಟ್ವಿಟರ್ ಮೂಲಕ ಜನರು ಬ್ಲಡ್ ಮೂನ್ ನೇರ ಪ್ರಸಾರವನ್ನು ವೀಕ್ಷಿಸಬಹುದು.
Chandra Grahan 2022 : ಚಂದ್ರಗ್ರಹಣ ಮುಗಿಯುತ್ತಿದ್ದಂತೆಯೇ ನಿಮ್ಮ ರಾಶಿಯ ಪ್ರಕಾರ ಈ ವಸ್ತುಗಳನ್ನು ದಾನ ಮಾಡಿದರೆ ಆಗುವುದು ಲಾಭ
ಬ್ಲಡ್ ಮೂನ್ ಗೋಚರಿಸುವುದು ಯಾಕೆ ?
ಚಂದ್ರಗ್ರಹಣದ ದಿನದಂದು ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಅದಕ್ಕಾಗಿಯೇ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಚಂದ್ರಗ್ರಹಣದ ಸಮಯದಲ್ಲಿ ಚಂದ್ರನ ಬಣ್ಣ ಬದಲಾವಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಈ ಸಮಯದಲ್ಲಿ ಸೂರ್ಯನ ಬೆಳಕು ಭೂಮಿಯ ಮೂಲಕ ಹಾದು ಚಂದ್ರನ ಮೇಲೆ ಬೀಳುತ್ತದೆ. ಈ ನೆರಳಿನಿಂದಾಗಿ ಚಂದ್ರನ ಬಣ್ಣವು ಗ್ರಹಣದ ಸಮಯದಲ್ಲಿ ಕೆಂಪು, ತಾಮ್ರದಂತೆ ಕಾಣುತ್ತದೆ. ಚಂದ್ರಗ್ರಹಣದ ಸಮಯದಲ್ಲಿ ಬ್ಲಡ್ ಮೂನ್ ನೋಡಲು ಬಯಸುವವರು ನಾಸಾದ ಸೈಟ್ ಅಥವಾ ಟ್ವಿಟರ್ ಖಾತೆಗೆ ಭೇಟಿ ನೀಡುವ ಮೂಲಕ ಅದರ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಇದನ್ನೂ ಓದಿ : Chandra Grahan 2022: ಈ ರಾಶಿಯವರಿಗೆ ಅದೃಷ್ಟ, ವೃತ್ತಿ ಜೀವನದಲ್ಲಿ ಪ್ರಗತಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.