Chandra Grahan 2022: ಚಂದ್ರ ಗ್ರಹಣದ ದಿನ ರಕ್ತ ರಂಗಿನಲ್ಲಿ ಚಂದ್ರನ ಗೋಚರ, ಇಲ್ಲಿದೆ ಬ್ಲಡ್ ಮೂನ್ ಗೋಚರದ ಸಮಯ

Blood Moon 2022: ವರ್ಷದ ಮೊದಲ ಚಂದ್ರ ಗ್ರಹಣಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಚಂದ್ರಗ್ರಹಣದ ಅವಧಿಯಲ್ಲಿ ಚಂದ್ರ ರಕ್ತ ರಂಗಿನಲ್ಲಿ ಕಂಗೊಳಿಸಲಿದ್ದಾನೆ. ಇದನ್ನು ಬ್ಲಡ್ ಮೂನ್ ಎಂದೂ ಕೂಡ ಕರೆಯಲಾಗುತ್ತದೆ. ಹಾಗಾದರೆ ಬನ್ನಿ ಈ ಬ್ಲಡ್ ಮೂನ್ ಯಾವ ಸಮಯದಲ್ಲಿ ಹಾಗೂ ಹೇಗೆ ಕಾಣಿಸಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : May 15, 2022, 07:11 PM IST

    ನಾಳೆ ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ

    ಗ್ರಹಣದ ಅವಧಿಯಲ್ಲಿ ಬ್ಲಡ್ ಮೂನ್ ಕೂಡ ಗೋಚರಿಸಲಿದೆ

    ಈ ಕೆಂಪು ಚಂದ್ರನನ್ನು ಯಾವಾಗ ಮತ್ತು ಎಲ್ಲಿ ನೋಡಬಹುದು ತಿಳಿಯೊಣ ಬನ್ನಿ

Chandra Grahan 2022: ಚಂದ್ರ ಗ್ರಹಣದ ದಿನ ರಕ್ತ ರಂಗಿನಲ್ಲಿ ಚಂದ್ರನ ಗೋಚರ, ಇಲ್ಲಿದೆ ಬ್ಲಡ್ ಮೂನ್ ಗೋಚರದ ಸಮಯ title=
Chandra Grahan 2022

Chandra Grahan 2022 Date Time in India: ನಾಳೆ ಮೇ 16. ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ಚಂದ್ರ ಗ್ರಹಣ ಪೂರ್ಣ ಚಂದ್ರ ಗ್ರಹಣವಾಗಿರಲಿದ್ದು, ವಿಶ್ವದ ಹಲವು ಭಾಗಗಳಲ್ಲಿ ಗೋಚರಿಸಲಿದೆ. ಆದರೆ, ಈ ಖಗ್ರಾಸ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯ, ಭೂಮಿ ಮತ್ತು ಚಂದ್ರ ಮೂರು ಸರಳ ರೇಖೆಯಲ್ಲಿ ಬಂದರೆ, ಖಗೋಳದ ಈ ಘಟನೆಯಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಮತ್ತು ಈ ಸ್ಥಿತಿಯನ್ನು ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. 

ಭಾರತದಲ್ಲಿ ಈ ಚಂದ್ರ ಗ್ರಹಣದ ಸಮಯ
ಭಾರತೀಯ ಕಾಲಮಾನದ ಪ್ರಕಾರ ವರ್ಷದ ಈ ಮೊದಲ ಚಂದ್ರ ಗ್ರಹಣ ಮೇ 16ರಂದು ಬೆಳಗ್ಗೆ 07:57 ಕ್ಕೆ ಆರಂಭವಾಗಲಿದೆ. ಈ ಚಂದ್ರ ಗ್ರಹಣದ ಕಾಲಾವಧಿ ಮಧ್ಯಾಹ್ನ 12.20 ರವರೆಗೆ ಇರಲಿದೆ. ಅಂದರೆ, ಈ ಚಂದ್ರಗ್ರಹಣದ ಗ್ರಹಣ ಕಾಲ 5 ಗಂಟೆ ಇರಲಿದೆ. ಆದರೆ, ಭಾರತದಲ್ಲಿ ಇದು ಗೋಚರಿಸದೆ ಇರುವ ಕಾರಣ ಇದರ ಸೂತಕ ಕಾಲಕ್ಕೆ ಮಾನ್ಯತೆ ಇರುವುದಿಲ್ಲ. 

ಬ್ಲಡ್ ಮೂನ್ ಗೋಚರಕ್ಕೆ ಕಾರಣ
ಚಂದ್ರ ಗ್ರಹಣದ ದಿನ ಚಂದ್ರನ ಬಣ್ಣ ಕೆಂಪು ಬಣ್ಣಕ್ಕೆ ತಿರುಗಲಿದೆ. ಇದೇ ಕಾರಣದಿಂದ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಈ ಗ್ರಹಣ ಕಾಲದಲ್ಲಿ ಸೂರ್ಯನ ಬೆಳಗು ಭೂಮಿಯ ಮೂಲಕ ಹಾಯ್ದು ಚಂದ್ರನ ಮೇಲೆ ಬೀಳುವುದೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೀಗಾಗಿ ಗ್ರಹದ ನೆರಳು ಬೀಳುವ ಕಾರಣ ಚಂದ್ರನ ಬಣ್ಣ ಗ್ರಹಣ ಕಾಲದಲ್ಲಿ ಬದಲಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರನ ಬಣ್ಣ ಕೆಂಪು ಅಥವಾ ತಾಮ್ರದ ಬಣ್ಣಕ್ಕೆ ತಿರುಗುತ್ತದೆ. ನಾಳೆ ಸಂಭವಿಸಲಿರುವ ಬ್ಲಡ್ ಮೂನ್ ಗೋಚರವನ್ನು ನೋಡಲು ಬಯಸುವವರು ನಾಸಾದ ಟ್ವಿಟ್ಟರ್ ಖಾತೆ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ. ನಾಸಾ ಈ ಗ್ರಹಣದ ಲೈವ್ ಸ್ಟ್ರೀಮ್ ಕೈಗೊಳ್ಳುತ್ತಿದೆ.  ಬೆಳಗ್ಗೆ 8.33 ರಿಂದ ಈ ಲೈವ್ ಸ್ಟ್ರೀಮ್ ಅನ್ನು ನೀವು ವೀಕ್ಷಿಸಬಹುದು. 

ಇದನ್ನೂ ಓದಿ-Chandra Grahan 2022 : ಚಂದ್ರಗ್ರಹಣ ಈ 5 ರಾಶಿಯವರ ಮೇಲೆ ಬೀರಲಿದೆ ಅದೃಷ್ಟ ಪರಿಣಾಮ!

ವೃಶ್ಚಿಕ ರಾಶಿಯಲ್ಲಿ ಈ ಗ್ರಹಣ ಸಂಭವಿಸುತ್ತಿದೆ
ಚಂದ್ರ ಗ್ರಹಣ ಒಂದು ಖಗೋಳ ಘಟನೆಯಾಗಿದೆ. ಆದರೆ, ಗ್ರಹಣಕ್ಕೆ ಧಾರ್ಮಿಕ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ವಿಶೇಷ ಮಹತ್ವ ನೀಡಲಾಗಿದೆ. ಈ ಗ್ರಹಣ ವೃಶ್ಚಿಕ ರಾಶಿಯಲ್ಲಿ ಸಂಭವಿಸುತ್ತಿದೆ. ಇದಾದ ಬಳಿಕ ನವೆಂಬರ್ 8 ರಂದು ವರ್ಷದ ಕೊನೆಯ ಚಂದ್ರ ಗ್ರಹಣ ಸಂಭವಿಸಲಿದೆ. ಈ ಚಂದ್ರ ಗ್ರಹಣ ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸುತ್ತಿರುವುದು ವಿಶೇಷ ಕಾಕತಾಳೀಯವಾಗಿದೆ. ಈ ದಿನವನ್ನು ಬುದ್ಧ ಪೌರ್ಣಿಮೆ ಎಂದೂ ಕೂಡ ಕರೆಯಲಾಗುತ್ತದೆ ಮತ್ತು ಈ ದಿನ ಗೌತಮ ಬುದ್ಧ ಜನಿಸಿದ್ದ. 

ಇದನ್ನೂ ಓದಿ-Chandra Grahan 2022: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಚಂದ್ರಗ್ರಹಣ ಪ್ರಾರಂಭವಾದ ಕೂಡಲೇ ಈ ಕ್ರಮಗಳನ್ನು ಕೈಗೊಳ್ಳಿ

(Disclaimer  -  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ) 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News