ಬೆಂಗಳೂರು :ಲಾವಾ ತನ್ನ ಹೊಸ ಫೋನ್ ಲಾವಾ ಬ್ಲೇಜ್ 3 5ಜಿ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 5G ಯೊಂದಿಗೆ ಕಾರ್ಯನಿರ್ವಹಿಸುತ್ತದೆ.ವೈಬ್ ಲೈಟ್ ವೈಶಿಷ್ಟ್ಯ, ಮೀಡಿಯಾ ಟೆಕ್ D6300 5G ಪ್ರೊಸೆಸರ್, ಗ್ಲಾಸ್ ಬ್ಯಾಕ್ ಫಿನಿಶ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳಂತಹ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.ಇದರ ಬೆಲೆಯೂ 10 ಸಾವಿರ ರೂ.ಗಿಂತ ಕಡಿಮೆ. 


COMMERCIAL BREAK
SCROLL TO CONTINUE READING

Lava Blaze 3 5G ಬೆಲೆ : 
Lava Blaze 3 5G ಎರಡು ಬಣ್ಣಗಳಲ್ಲಿ ಲಭ್ಯವಿದೆ. ಗ್ಲಾಸ್ ಗೋಲ್ಡ್ ಮತ್ತು ಗ್ಲಾಸ್ ಬ್ಲೂ ಎನುವ ಎರಡು ಬಣ್ಣಗಳಲ್ಲಿ ಈ ಫೋನ್ ಬರುತ್ತದೆ. ಇದರ ಬೆಲೆ 9,999 ರೂ.  ಈ ಫೋನ್ ಅನ್ನು ಸೆಪ್ಟೆಂಬರ್ 18 ರಿಂದ ಲಾವಾದ ಇ-ಸ್ಟೋರ್ ಮತ್ತು ಅಮೆಜಾನ್‌ ನಲ್ಲಿ ಖರೀದಿಸಬಹುದು. 


ಇದನ್ನೂ ಓದಿ : ಭೂಮಿಯ ಸುತ್ತಲೂ ಅಸ್ತಿತ್ವದಲ್ಲಿರುವ ಶನಿಯಂತಹ ಉಂಗುರ! ಭೂಮಿಯ ಮೇಲಿನ ಗುಪ್ತ ಹೊಂಡಗಳಲ್ಲಿ ಕಂಡುಬಂದ ಪುರಾವೆಗಳು!


ಲಾವಾ ಬ್ಲೇಜ್ 3 5G ವೈಶಿಷ್ಟ್ಯಗಳು : 
Lava Blaze 3 5G 6.5 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರ ಗುಣಮಟ್ಟ ಉತ್ತಮವಾಗಿದೆ.ಇದು 90 Hz ನ ರಿಫ್ರೆಶ್ ರೇಟ್ ಮತ್ತು 180 Hz ನ  ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಹೊಂದಿದೆ.ಈ ಫೋನ್‌ನ ಹಿಂಭಾಗದ ಫಲಕವು ಗಾಜಿನಿಂದ ಮಾಡಲ್ಪಟ್ಟಿದ್ದು ಆಕರ್ಷಕವಾಗಿ ಕಾಣಿಸುತ್ತದೆ. ಇದು ವೈಬ್ ಲೈಟ್ ಎಂದು ಕರೆಯಲ್ಪಡುವ ವಿಶೇಷ ವೈಶಿಷ್ಟ್ಯವನ್ನು ಹೊಂದಿದೆ.


ಈ ವೈಶಿಷ್ಟ್ಯದೊಂದಿಗೆ ನೀವು ಉತ್ತಮ ಫೋಟೋ ಮತ್ತು ವೀಡಿಯೊಗಳನ್ನು ಮಾಡಬಹುದು. ಈ ವೈಶಿಷ್ಟ್ಯವು ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋ  ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.ವೀಡಿಯೊ ರೆಕಾರ್ಡಿಂಗ್‌ಗೆ ಈ ವೈಶಿಷ್ಟ್ಯವು ತುಂಬಾ ಒಳ್ಳೆಯದು. 


ಲಾವಾ ಬ್ಲೇಜ್ 3 5G ಕ್ಯಾಮೆರಾ : 
ವೈಬ್ ಲೈಟ್ ವೈಶಿಷ್ಟ್ಯದೊಂದಿಗೆ ನೀವು ಉತ್ತಮ ಭಾವಚಿತ್ರ ಛಾಯಾಗ್ರಹಣವನ್ನು ಮಾಡಬಹುದು.ಇದರಲ್ಲಿ ಕಾಂಟ್ರಾಸ್ಟ್ ತುಂಬಾ ಚೆನ್ನಾಗಿದೆ ಮತ್ತು ಶೇಡ್ ಗಳು ಕೂಡಾ ಉತ್ತಮವಾಗಿದೆ. ವೈಬ್ ಲೈಟ್ ಸೆಟ್ಟಿಂಗ್‌ಗಳಲ್ಲಿ ಕಲರ್ ಟೆಂಪರೇಚರ್ ಅನ್ನು ಬದಲಾಯಿಸಬಹುದು. ಇದು 50 MP ಡ್ಯುಯಲ್ AI ಹಿಂಭಾಗದ ಕ್ಯಾಮರಾ ಮತ್ತು 8MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.


ಇದನ್ನೂ ಓದಿ :ಬಿಎಸ್‌ಎನ್‌ಎಲ್‌ಗೆ ಸಾಥ್ ನೀಡಿದ ಟಾಟಾ ಕಂಪನಿ: ಗ್ರಾಹಕರಿಗೆ ಸಿಗಲಿದೆ ಈ ಪ್ರಯೋಜನ


ಲಾವಾ ಬ್ಲೇಜ್ 3 5G ಬ್ಯಾಟರಿ : 
Lava Blaze 3 5G ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ತುಂಬಾ ವೇಗವಾಗಿದೆ.ಇದು 6GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ.ಈ ಸ್ಟೋರೇಜ್ ಅನ್ನು 1TBವರೆಗೆ ಹೆಚ್ಚಿಸಬಹುದು. ಇದು 5000mAh ಬ್ಯಾಟರಿಯನ್ನು ಹೊಂದಿದೆ.Lava Blaze 3 5G ಸರಳವಾದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ.ಇದು ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ.ಇದು ಅಪ್ಲಿಕೇಶನ್ ಲಾಕ್, ಅನೋನಿಮಸ್ ಕಾಲ್ ರೆಕಾರ್ಡಿಂಗ್, ಡ್ಯುಯಲ್ ಅಪ್ಲಿಕೇಶನ್ ಸಪೋರ್ಟ್, ಆಂಟಿ-ಪೀಪಿಂಗ್ ವೈಶಿಷ್ಟ್ಯ ಮತ್ತು ಸೆಕ್ಯೂರಿಟಿ ಅಪ್ಡೇಟ್ ಗಳನ್ನೂ ನೀಡಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.