ಫ್ರೀಜರ್ ತುಂಬಾ ಐಸ್ ಪದರಗಟ್ಟುತ್ತಿದೆಯೇ ? ಇದೊಂದು ಬಟನ್ ಪ್ರೆಸ್ ಮಾಡಿದರೆ ಈ ಸಮಸ್ಯೆ ಬರುವುದೇ ಇಲ್ಲ

ಫ್ರಿಜ್ ನ ಒಳಗೆ ಇರುವ ಈ ಬಟನ್ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರುವುದಿಲ್ಲ. ಈ ಬಟನ್ ಪ್ರೆಸ್ ಮಾಡಿದೆ ಫ್ರಿಜ್ ಲೈಫ್ 10 ವರ್ಷಗಳವರೆಗೆ ಹೆಚ್ಚುತ್ತದೆ.   

Written by - Ranjitha R K | Last Updated : Sep 16, 2024, 12:31 PM IST
  • ಫ್ರಿಜ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.
  • ಬಹುತೇಕ ಮನೆಗಳಲ್ಲಿ ಸಿಂಗಲ್ ಡೋರ್ ಫ್ರಿಡ್ಜ್ ಗಳಿರುತ್ತವೆ.
  • ಈ ಬಟನ್ ಯಾಕೆ ಇದೆ ಎನ್ನುವ ಮಾಹಿತಿ ಅನೇಕರಿಗೆ ತಿಳಿದೇ ಇರುವುದಿಲ್ಲ
ಫ್ರೀಜರ್ ತುಂಬಾ ಐಸ್ ಪದರಗಟ್ಟುತ್ತಿದೆಯೇ ? ಇದೊಂದು ಬಟನ್ ಪ್ರೆಸ್ ಮಾಡಿದರೆ  ಈ ಸಮಸ್ಯೆ ಬರುವುದೇ ಇಲ್ಲ  title=

ಬೆಂಗಳೂರು :ಇತ್ತೀಚಿನ ದಿನಗಳಲ್ಲಿ, ನಗರವಾಗಲೀ ಹಳ್ಳಿಯಾಗಲಿ ಪ್ರತಿ ಮನೆಯಲ್ಲಿಯೂ ಫ್ರಿಜ್ ಸಾಮಾನ್ಯವಾಗಿದೆ.ಅದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ.ಫ್ರಿಜ್ ಆಹಾರವನ್ನು ತಾಜಾವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮನೆಗಳಲ್ಲಿ ಸಿಂಗಲ್ ಡೋರ್ ಫ್ರಿಡ್ಜ್ ಗಳಿರುತ್ತವೆ.ಈ ಫ್ರಿಡ್ಜ್ ಗಳಲ್ಲಿ ವಿಶೇಷವಾದ ಬಟನ್ ಒಂದಿದೆ. ಈ ಬಟನ್ ಸಾಕಷ್ಟು ಉಪಯುಕ್ತವಾಗಿದೆ. ಆದರೆ, ಈ ಬಟನ್ ಯಾಕೆ ಇದೆ ಎನ್ನುವ ಮಾಹಿತಿ ಅನೇಕರಿಗೆ ತಿಳಿದೇ ಇರುವುದಿಲ್ಲ. 

ವಿದ್ಯುತ್ ಉಳಿಸುತ್ತದೆ : 
ಫ್ರೀಜರ್‌ನಲ್ಲಿ ಮಂಜುಗಡ್ಡೆಯು ಸಂಗ್ರಹವಾದಾಗ, ತಂಪಾಗಿಸಲು ಹೆಚ್ಚು ಕೆಲಸ ಮಾಡುತ್ತದೆ. ಇದು insulator ರೀತಿ ಕೆಲಸ ಮಾಡುತ್ತದೆ. ಇದರಿಂದಾಗಿ ಫ್ರೀಜರ್ ಅನ್ನು ತಂಪಾಗಿರಿಸಲು ಹೆಚ್ಚು ವಿದ್ಯುತ್ ಬಳಸಲಾಗುತ್ತದೆ.ಡಿಫ್ರಾಸ್ಟಿಂಗ್ ಈ ಹೆಚ್ಚುವರಿ ಮಂಜುಗಡ್ಡೆಯನ್ನು ತೆಗೆದುಹಾಕುತ್ತದೆ. ಇದು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. 

ಇದನ್ನೂ ಓದಿ : ಸರ್ಕಾರ ಬದಲಾಯಿಸಿದೆ ಹೊಸ ಸಿಮ್ ಕಾರ್ಡ್ ಪಡೆಯುವ ನಿಯಮ!ಇನ್ನು ಸಿಮ್ ಖರೀದಿ ಮಾಡಬೇಕಾದರೆ ಹೀಗೆ ಮಾಡಬೇಕು

ರೆಫ್ರಿಜರೇಟರ್ ಲೈಫ್ ಹೆಚ್ಚಾಗುತ್ತದೆ : 
ಮಂಜುಗಡ್ಡೆಯ ದಟ್ಟವಾದ ಪದರವು ಫ್ರೀಜರ್ ಮೋಟಾರ್ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.ಇದು ಮೋಟಾರನ್ನು ಹಾನಿಗೊಳಿಸಬಹುದು.  ಡಿಫ್ರಾಸ್ಟಿಂಗ್ ಫ್ರೀಜರ್ ಮೋಟರ್ ಮೇಲೆ ಕಡಿಮೆ ಒತ್ತಡವನ್ನು ಬೀರುತ್ತದೆ. ಅದು ರೆಫ್ರಿಜರೇಟರ್ ಲೈಫ್ ಅನ್ನು ಹೆಚ್ಚಿಸುತ್ತದೆ.

ಹೊಸ ಫ್ರಿಜ್ ನಂತೆ ಕಾರ್ಯ ನಿರ್ವಹಿಸುತ್ತದೆ : 
ಮಂಜುಗಡ್ಡೆಯ ಪದರವನ್ನು ತೆಗೆದುಹಾಕುವುದರಿಂದ ಫ್ರೀಜರ್ ತಂಪಾದ ಗಾಳಿಯನ್ನು ಹೆಚ್ಚು ಸಮವಾಗಿ ವಿತರಿಸಲು ಅನುವು ಮಾಡಿಕೊಡುತ್ತದೆ.ಇದು ನಿಮ್ಮ ಆಹಾರವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.ಮಂಜುಗಡ್ಡೆಯ ಪದರದಿಂದಾಗಿ ತಂಪಾದ ಗಾಳಿಯು ಸರಿಯಾಗಿ ಪರಿಚಲನೆಯಾಗುವುದಿಲ್ಲ. ಇದರಿಂದ ಫ್ರೀಜ್ ನ ಕೆಲವು ಭಾಗಗಳು ತಂಪಾಗಿರುತ್ತದೆ ಮತ್ತು ಕೆಲವು ಭಾಗಗಳು ಬೆಚ್ಚಗಿರುತ್ತದೆ.

ಜಾಗ ಹೆಚ್ಚು ಸಿಗುತ್ತದೆ : 
ಮಂಜುಗಡ್ಡೆಯ ಪದರವನ್ನು ತೆಗೆದುಹಾಕುವುದರಿಂದ ಫ್ರೀಜ್ನಲ್ಲಿ ಹೆಚ್ಚು ಜಾಗ ಸೃಷ್ಟಿಯಾಗುತ್ತದೆ. ಹೀಗಾಗಿ ಹೆಚ್ಚಿನ ವಸ್ತುಗಳನ್ನು ಫ್ರೀಜರ್‌ನಲ್ಲಿ ಇರಿಸಬಹುದು.

ಇದನ್ನೂ ಓದಿ : iPhone 16 Plus VS Samsung Galaxy S24 Plus: ಯಾವ ಸ್ಮಾರ್ಟ್‌ಫೋನ್ ಉತ್ತಮವಾಗಿದೆ?

ಸ್ವಚ್ಛವಾಗಿರುತ್ತದೆ : 
ಸ್ಟಿಂಗ್ ಮಾಡುವಾಗ ಫ್ರೀಜರ್ ಒಳಭಾಗವನ್ನು ಸ್ವಚ್ಛಗೊಳಿಸಬಹುದು.ಕರಗಿದ ನೀರನ್ನು ತೆಗೆಯುವಾಗ,ಫ್ರೀಜರ್ ಒಳಗೆ ಸಂಗ್ರಹವಾದ ಕೊಳೆಯನ್ನು ಸಹ ಸ್ವಚ್ಛಗೊಳಿಸಬಹುದು.ಇದು ಫ್ರೀಜರ್ ಅನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ನಿಮ್ಮ ಆಹಾರದ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News