ಬೆಂಗಳೂರು : ಈಗ ಏನೇ ಕೆಲಸ ಮಾಡುವುದಾದರೂ ಎಲ್ಲವೂ ಆನ್ಲೈನ್ . ಹೀಗಿರುವಾಗ ಅದಕ್ಕೆ ಇಂಟರ್ ನೆಟ್ ಬೇಕೇ ಬೇಕು. ಟಿ ವಿ ಕೂಡಾ ಇಂಟರ್ನೆಟ್ ಮೂಲಕ ನಡೆಯುತ್ತದೆ. ಹೀಗಿರುವಾಗ ಯಾವ ಬ್ರಾಡ್‌ಬ್ಯಾಂಡ್ ಯೋಜನೆ ಮನೆಗೆ ಸೂಕ್ತ ಎಂಬ ಪ್ರಶ್ನೆ ಸಾಮಾನ್ಯವಾಗಿ ಎದುರಾಗುತ್ತದೆ.  ಮನೆಯಲ್ಲಿ ಸ್ಮಾರ್ಟ್ ಟಿವಿ, ಎರಡು ಲ್ಯಾಪ್‌ಟಾಪ್‌ಗಳು ಮತ್ತು ಎರಡು ಅಥವಾ 3 ಮೊಬೈಲ್‌ಗಳನ್ನು ಚಲಾಯಿಸಬೇಕಾದರೆ ಅದಕ್ಕೆ  ತಗಲುವ ಖರ್ಚು 500 ರೂಪಾಯಿಗಳಿಗಿಂತ ಕಡಿಮೆ.  ಈ ಕೆಲಸಕ್ಕೆ ಹೆಚ್ಚು ಎಂಬಿಪಿಎಸ್ ಇರುವ ಪ್ಲಾನ್ ಹಾಕಿಸುವ ಅಗತ್ಯವಿಲ್ಲ. 30 ರಿಂದ 40 ಎಂಬಿಪಿಎಸ್  ಸ್ಪೀಡ್ ಇದ್ದರೆ ಸಾಕು. 


COMMERCIAL BREAK
SCROLL TO CONTINUE READING

ಜಿಯೋ ಫೈಬರ್ 399 ಪ್ಲಾನ್  :
ಜಿಯೋ ಫೈಬರ್‌ನ  399 ರೂ.  ಪ್ಲಾನ್ ಸಾಕಷ್ಟು ಜನಪ್ರಿಯವಾಗಿದೆ. ಈ  ಪ್ಲಾನ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮನೆಯಲ್ಲಿ ಇಬ್ಬರು ಅಥವಾ ಮೂವರು ಇಂಟರ್ನೆಟ್ ಬಳಸುವವರಿದ್ದರೆ ಈ ಪ್ಲಾನ್ ಅತ್ಯುತ್ತಮವಾಗಿದೆ. ಈ ಯೋಜನೆಯಲ್ಲಿ 30Mbps ಸ್ಪೀಡ್  ಲಭ್ಯವಿದೆ. ಅಂದರೆ, ಈ ಯೋಜನೆಯಲ್ಲಿ ಸ್ಮಾರ್ಟ್ ಟಿವಿ, 2 ಲ್ಯಾಪ್‌ಟಾಪ್‌ಗಳು ಮತ್ತು 3 ಫೋನ್‌ಗಳು ಉತ್ತಮ ವೇಗದಲ್ಲಿ ಆರಾಮವಾಗಿ ಕಾರ್ಯನಿರ್ವಹಿಸುತ್ತವೆ. ಈ ಯೋಜನೆಯ ಮಾನ್ಯತೆಯು 30 ದಿನಗಳವರೆಗೆ ಇರುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಲಭ್ಯವಿದೆ. 


ಇದನ್ನೂ ಓದಿ ಒಂದು ವರ್ಷದ ಕೂಲ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್! 5 ರೂ.ಗಿಂತ ಕಡಿಮೆ ಬೆಲೆಯಲ್ಲಿ ಹಲವು ಲಾಭ


ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 499 ಪ್ಲಾನ್  :  
ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ನ  499 ರೂ. ಬೇಸಿಕ್ ಪ್ಲಾನ್ ಆಗಿದೆ. ಇದರಲ್ಲಿ  40Mbps ಸ್ಪೀಡ್ ಲಭ್ಯವಿದೆ. ಏರ್‌ಟೆಲ್ ಅನ್ನು ಆಯ್ಕೆ ಮಾಡುವುದಾದರೆ,  ಈ ಯೋಜನೆಯು ಉತ್ತಮವಾಗಿದೆ . ಇದು ಕೂಡಾ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿಯೂ ಅನಿಯಮಿತ ಡೇಟಾವನ್ನು ನೀಡಲಾಗುತ್ತದೆ.


BSNL ಭಾರತ್ ಫೈಬರ್ 449 ಪ್ಲಾನ್ : 
BSNL ಭಾರತ್ ಫೈಬರ್ ಕಡಿಮೆ ವೆಚ್ಚದ ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಹೊಂದಿದ್ದು, ಇದು ಸಾಕಷ್ಟು ಜನಪ್ರಿಯವಾಗಿದೆ. ಇದರಲ್ಲಿ, ಬಳಕೆದಾರರಿಗೆ 30Mbps ವೇಗ ಸಿಗುತ್ತದೆ. 30 ದಿನಗಳವರೆಗೆ ಮಾನ್ಯತೆ ಹೊಂದಿರುವ ಈ ಪ್ಲಾನ್ ನಲ್ಲಿಯೂ ಅನಿಯಮಿತ ಡೇಟಾ ಲಭ್ಯವಿದೆ.


ಇದನ್ನೂ ಓದಿ : ಭಾರತದಲ್ಲಿ Nokia 2660 Flip 4G ಫೀಚರ್ ಫೋನ್ ಬಿಡುಗಡೆ-ಬೆಲೆ, ವೈಶಿಷ್ಟ್ಯ ತಿಳಿಯಿರಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.