ಇದುವೇ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್.! ಭಾರತೀಯ ಇವಿ ಖರೀದಿಗೆ ಮುಗಿ ಬಿದ್ದ ಗ್ರಾಹಕರು
ಹೊಸ TVS iQubeನ ಮಾರಾಟವು ಮೇ 2022 ರಿಂದ ಡಿಸೆಂಬರ್ 2022 ರವರೆಗೆ ಅಂದರೆ ಎಂಟು ತಿಂಗಳೊಳಗೆ 50,000 ಯುನಿಟ್‌ಗಳನ್ನು ದಾಟಿದೆ.
ನವದೆಹಲಿ : TVS ಮೋಟಾರ್ ಕಂಪನಿಯು iQube ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಜನವರಿ 2020 ರಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ವಿಭಾಗಕ್ಕೆ ಕಾಲಿಟ್ಟಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಸ್ಕೂಟರ್ ಅನ್ನು ಅಪ್ಡೇಟ್ ಮಾಡಲಾಯಿತು. ಅಪ್ಡೇಟ್ ನಂತರ ಹೆಚ್ಚು ಆಕರ್ಷಕ ವಿನ್ಯಾಸದೊಂದಿಗೆ ಬೇಡಿಕೆಯನ್ನು ಹೆಚ್ಚಿಸಿಕೊಂಡಿತು. ಹೊಸ TVS iQubeನ ಮಾರಾಟವು ಮೇ 2022 ರಿಂದ ಡಿಸೆಂಬರ್ 2022 ರವರೆಗೆ ಅಂದರೆ ಎಂಟು ತಿಂಗಳೊಳಗೆ 50,000 ಯುನಿಟ್‌ಗಳನ್ನು ದಾಟಿದೆ. ಕಳೆದ ಡಿಸೆಂಬರ್ ನಲ್ಲಿ ಸ್ಕೂಟರ್‌ನ 11 ಸಾವಿರಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟವಾಗಿವೆ.
TVS iQube ಮಾರಾಟ :
ಜನವರಿ 2022 ರಲ್ಲಿ TVS iQube 1,529 ಯೂನಿಟ್‌ಗಳು ಮಾರಾಟವಾಗಿದೆ. ಇನ್ನು ಫೆಬ್ರವರಿ 2022 ರಲ್ಲಿ 2,238 ಯುನಿಟ್‌ಗಳು, ಮಾರ್ಚ್ 2022 ರಲ್ಲಿ 1,799 ಯುನಿಟ್‌ಗಳು , ಏಪ್ರಿಲ್ 2022 ರಲ್ಲಿ 1,420 ಯೂನಿಟ್‌ಗಳು, ಮೇ 2022 ರಲ್ಲಿ 2,637 ಯೂನಿ ಟ್‌ಗಳು, ಜೂನ್ 2022 ರಲ್ಲಿ 4,668 ಯೂನಿ ಟ್‌ಗಳು, ಜುಲೈ 2022 ರಲ್ಲಿ 6,304 ಯೂನಿ ಟ್‌ಗಳು, ಆಗಸ್ಟ್ 2022 ರಲ್ಲಿ 4,418 ಯೂನಿ ಟ್‌ಗಳು, ಸೆಪ್ಟೆಂಬರ್ 2022 ರಲ್ಲಿ 4,923 ಯೂನಿ ಟ್‌ಗಳು, ಅಕ್ಟೋಬರ್ 2022 ರಲ್ಲಿ 8,103 ಯೂನಿ ಟ್‌ಗಳು, ನವೆಂಬರ್ 2022 ರಲ್ಲಿ 10,056 ಯೂನಿ ಟ್‌ಗಳು, ಡಿಸೆಂಬರ್ 2022 ರಲ್ಲಿ 11,071 ಯೂನಿ ಟ್‌ಗಳು ಮಾರಾಟವಾಗಿವೆ.
ಇದನ್ನೂ ಓದಿ : ದೊಡ್ಡ ಬದಲಾವಣೆಗೆ ಮುಂದಾದ ನೆಟ್‌ಫ್ಲಿಕ್ಸ್ , ಇನ್ಮುಂದೆ ಈ ಕೆಲಸ ಮಾಡುವ ಮುನ್ನ ಹುಷಾರಾಗಿರಿ
ಇಡೀ ವರ್ಷದಲ್ಲಿ ಸುಮಾರು 60,000 TVS iQube ಯುನಿಟ್‌ಗಳು ಮಾರಾಟವಾಗಿವೆ. TVS iQube ಇ-ಸ್ಕೂಟರ್ ಅನ್ನು ಸ್ಟ್ಯಾಂಡರ್ಡ್, S ಮತ್ತು ST ಎಂಬ ಮೂರು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಸ್ಟ್ಯಾಂಡರ್ಡ್ ಮತ್ತು S ರೂಪಾಂತರಗಳು 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುತ್ತವೆ. ಆದರೆ ಟಾಪ್-ಸ್ಪೆಕ್ ST ಮಾದರಿಯು ದೊಡ್ಡ 4.56 kWh ಬ್ಯಾಟರಿ ಯೂನಿಟ್ ಅನ್ನು ಪಡೆಯುತ್ತದೆ. ಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 100 ಕಿಮೀ, 100 ಕಿಮೀ ಮತ್ತು 145 ಕಿಮೀ ಗರಿಷ್ಠ ವ್ಯಾಪ್ತಿಯನ್ನು ನೀಡಬಲ್ಲದು ಎಂದು ಹೇಳಲಾಗಿದೆ.
ಟಿವಿಎಸ್ ಐಕ್ಯೂಬ್‌ನ ಸ್ಟ್ಯಾಂಡರ್ಡ್ ರೂಪಾಂತರವು ಪ್ರಸ್ತುತ 99,130 ರೂಪಾಯಿ ಆಗಿದ್ದು, 'ಎಸ್' ರೂಪಾಂತರದ ಬೆಲೆ 1.04 ಲಕ್ಷ ರೂ. ಆಗಿದೆ. iQube ST ಬೆಲೆಗಳು ಇನ್ನೂ ಬಹಿರಂಗವಾಗಿಲ್ಲ. ಈ ವೆರಿಯೇಂಟ್ ಮುಂದಿನ ತಿಂಗಳು ಲಾಂಚ್ ಆಗುವ ಸಾಧ್ಯತೆ ಇದೆ. TVS iQube Ola S1, Ather 450X, Bajaj Chetak, Hero Vida V1 ಇತ್ಯಾದಿಗಳೊಂದಿಗೆ ಸ್ಪರ್ಧಿಸುತ್ತದೆ.
ಇದನ್ನೂ ಓದಿ : ಎರಡು ಬಂಬಾಟ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.