Cheapest Electric Scooters : ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ. ಜನ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ನತ್ತ ವಾಲುತ್ತಿರುವಂತೆ ಮಾರುಕಟ್ಟೆಗೆ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳು ಲಗ್ಗೆ ಇಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವೂ  ಜೋರಾಗಿದೆ.  ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳು ತುಂಬಾ ದುಬಾರಿಯಾಗಿವೆ. ಇವುಗಳ ಮಧ್ಯೆ ಅಗ್ಗದ ಬೆಲೆಯ ಎಲೆಕ್ಟ್ರಿಕ್ ವಾಹಗಳು ಕೂಡಾ ತಮ್ಮ ಸ್ಥಾನವನ್ನು ಭದ್ರಪಡಿಸುತ್ತಿವೆ. 


COMMERCIAL BREAK
SCROLL TO CONTINUE READING

ಏವನ್ ಇ ಸ್ಕೂಟ್ :
ಏವನ್ ಇ ಸ್ಕೂಟ್ ಬೆಲೆ ಸುಮಾರು 45,000 ರೂ. ಇದು 65 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಗರಿಷ್ಠ ವೇಗ 24KMPH. ಸ್ಕೂಟರ್ 215W BLDC ಮೋಟಾರ್ ಮತ್ತು 48V/20AH ಬ್ಯಾಟರಿಯೊಂದಿಗೆ ಬರುತ್ತದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 6 ರಿಂದ 8 ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ : ಮಾರುಕಟ್ಟೆಗೆ ಕಾಲಿಟ್ಟಿದೆ 7 ಸಾವಿರ ರೂಪಾಯಿ ಬೆಲೆಯ ವಾಷಿಂಗ್ ಮೆಷಿನ್ .! ವೈಶಿಷ್ಟ್ಯಗಳು ಕೂಡಾ ಸೂಪರ್ !


ಬೌನ್ಸ್ ಇನ್ಫಿನಿಟಿ E1 :
ಇದರ ಬೆಲೆ  45,099 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಬ್ಯಾಟರಿ ಪ್ಯಾಕ್ ವೆರಿಯೇಂಟ್ ನ ಬೆಲೆ 68,999 ರೂ. ಇದು 2kWh/48V ಬ್ಯಾಟರಿಯೊಂದಿಗೆ ಬರುತ್ತದೆ. ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 65 ಕಿಮೀ ಮತ್ತು  ರೇಂಜ್ 85 ಕಿಮೀ ಎಂದು ಕಂಪನಿ ಹೇಳಿಕೊಂಡಿದೆ.


ಹೀರೋ ಎಲೆಕ್ಟ್ರಿಕ್ ಆಪ್ಟಿಮಾ CX :
ಹೀರೋ ಎಲೆಕ್ಟ್ರಿಕ್ ಆಪ್ಟಿಮಾ CX ಸಿಂಗಲ್ ಬ್ಯಾಟರಿ  ವೆರಿಯೇಂಟ್ ಬೆಲೆ 62,190 ರೂ. ಸ್ಕೂಟರ್‌ನ ಗರಿಷ್ಠ ವೇಗವು 45 KM/ಮತ್ತು ರೇಂಜ್ 82KM ಎಂದು ಕಂಪನಿ ಹೇಳಿಕೊಂಡಿದೆ. ಇದು ಮೂರು ಬಣ್ಣದ ಆಯ್ಕೆಗಳನ್ನು ನೀಡುತ್ತದೆ.  51.2V/30Ah ಬ್ಯಾಟರಿಯೊಂದಿಗೆ ಬರುವ ಈ ಎಲೆಕ್ಟ್ರಿಕ್ ಸ್ಕೂಟರ್ , ಸಂಪೂರ್ಣವಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 


ಇದನ್ನೂ ಓದಿ : Jio Cheapest Plan: 90 ದಿನಗಳ ವ್ಯಾಲಿಡಿಟಿ ಇರುವ ಅಗ್ಗದ 5ಜಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ!


ಆಂಪಿಯರ್ ಮ್ಯಾಗ್ನಸ್ EX :
ಇದು LCD ಸ್ಕ್ರೀನ್, ಇಂಟಿಗ್ರೇಟೆಡ್ ಯುಎಸ್‌ಬಿ ಪೋರ್ಟ್, ಕೀಲೆಸ್ ಎಂಟ್ರಿ ಮತ್ತು ಆಂಟಿ-ಥೆಫ್ಟ್ ಅಲಾರ್ಮ್ ನೊಂದಿಗೆ ಬರುತ್ತದೆ. ಇದು 1.2 kW ಮೋಟಾರ್‌ನೊಂದಿಗೆ ಬರುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 55 ಕಿ.ಮೀ. ಇದು 60V, 30Ah ಬ್ಯಾಟರಿಯೊಂದಿಗೆ ಬರುತ್ತದೆ. ಇದು 121 ಕಿಮೀ ರೇಂಜ್  ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ 73,999 ರೂಪಾಯಿ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.