Second Hand Automatic Cars : ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕಾರನ್ನು ಖರೀದಿಸುವ ಯೋಚನೆಯಿದ್ದರೆ, ಅಂತಹ ಕೆಲವು ವಾಹನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್ಸೈಟ್ನಲ್ಲಿ ಕೆಲವು ಅಗ್ಗದ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕಾರುಗಳನ್ನು ಲಿಸ್ಟ್ ಮಾಡಲಾಗಿದೆ. ಈ ಕಾರುಗಳ ಬೆಲೆ ನಾಲ್ಕು ಲಕ್ಷ ರೂಪಾಯಿಗಿಂತಲೂ ಕಡಿಮೆಯಾಗಿದೆ. ಕಾರು ಖರೀದಿಗೆ ನೀವು ನಿಗದಿ ಮಾಡಿರುವ ಬಜೆಟ್ 4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಈ ಕಾರುಗಳನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಬಹುದು.
ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಹೊಂದಿರುವ ಮಾರುತಿ ಆಲ್ಟೊ K10 VXI ಇಲ್ಲಿ ಲಿಸ್ಟ್ ಮಾಡಿರುವ ಕಾರಿನಲ್ಲಿ ಒಂದು. ಇದು 2019 ರ ಮಾಡೆಲ್ ಆಗಿದ್ದು, ಇದುವರೆಗೆ 16446 ಕಿಮೀ ಕ್ರಮಿಸಿದೆ. ಪೆಟ್ರೋಲ್ ಇಂಜಿನ್ ಚಾಲಿತ ಕಾರು ಇದಾಗಿದೆ. ಅಲ್ಲದೆ, ಇದು ಫಸ್ಟ್ ಓನರ್ ಕಾರು. ಈ ಕಾರಿನ ಮೇಲೆ ಒಂದು ವರ್ಷದ ವಾರಂಟಿ ಮತ್ತು ಮೂರು ಸರ್ವಿಸ್ ನೀಡಲಾಗುತ್ತಿದೆ. ಈ ಕಾರಿಗೆ ಇಲ್ಲಿ ನಿಗದಿ ಮಾಡಿಸಿರುವ ಬೆಲೆ 360,000 ರೂಪಾಯಿ.
ಇದನ್ನೂ ಓದಿ : Christmas Day Offer: ಬರೀ ಒಂದು ಟ್ವೀಟ್ ಮಾಡಿದರೆ ಸಾಕು ಕಂಪನಿ ಉಚಿತವಾಗಿ ನೀಡುತ್ತಿದೆ Nothing Phone 1.!
ಮತ್ತೊಂದು ಮಾರುತಿ ಆಲ್ಟೊ K10 VXI ಅನ್ನು ಸಹ ಇಲ್ಲಿ ಲಿಸ್ಟ್ ಮಾಡಲಾಗಿದೆ. ಇದಕ್ಕೆ ಮೇಲಿನ ಕಾರಿಗಿಂತ 10,000 ರೂ. ಜಾಸ್ತಿ ಪಾವತಿಸಬೇಕಾಗುತ್ತದೆ. ಅಂದರೆ ಈ ಕಾರನ್ನು 3,70,000 ರೂ.ಗಳಿಗೆ ಮಾರಾಟಕ್ಕೆ ಇಡಲಾಗಿದೆ. 2018 ರ ಮಾದರಿಯ ಫಸ್ಟ್ ಓನರ್ ಕಾರು ಇದಾಗಿದ್ದು, ಇಲ್ಲಿಯವರೆಗೆ 41421 ಕಿಮೀ ಓಡಿದೆ. ಇದು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರ ಮೇಲೆ ಆರು ತಿಂಗಳ ವಾರಂಟಿ ಮತ್ತು ಮೂರು ಫ್ರೀ ನೀಡಲಾಗುತ್ತಿದೆ.
ವ್ಯಾಗನ್ R VXI AMT ಅನ್ನು ಸಹಾ ಇಲ್ಲಿ ಮಾರಾಟಕ್ಕೆ ಇಡಲಾಗಿದೆ. ಈ ಕಾರಿಗೆ ನಿಗದಿ ಪಡಿಸಿರುವ ಬೆಲೆ 360,000 ರೂಪಾಯಿ. 2017 ರ ಮಾದರಿಯ ಫಸ್ಟ್ ಓನರ್ ಕಾರು ಇದಾಗಿದ್ದು, 70851 ಕಿಮೀ ಓಡಿದೆ. ಇದು ಕೂಡಾ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರಿನ ಮೇಲೆ ಆರು ತಿಂಗಳ ವಾರಂಟಿ ಮತ್ತು ಮೂರು ಫ್ರೀ ಸರ್ವಿಸ್ ನೀಡಲಾಗುತ್ತದೆ.
ಇದನ್ನೂ ಓದಿ : ಅನಗತ್ಯ ಕರೆಗಳನ್ನು ತಪ್ಪಿಸಲು ಈ ಸಣ್ಣ ಕೆಲಸ ಮಾಡಿ
ಇಲ್ಲಿ ಪಟ್ಟಿ ಮಾಡಲಾದ ಮಾರುತಿ ಸೆಲೆರಿಯೊ ZXI ಅನ್ನು ಸಹಾ 3,60,000 ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ. ಈ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕಾರು, 2017ರ ಮಾಡೆಲ್ ಆಗಿದ್ದು, 196858 ಕಿ.ಮೀ. ವರೆಗೆ ಕ್ರಮಿಸಿದೆ.
ಮೇಲೆ ಹೇಳಿದ ಎಲ್ಲಾ ಕಾರುಗಳು ಕ್ರಮವಾಗಿ ಲಕ್ನೋ, ಜೈಪುರ, ರಾಂಚಿ ಮತ್ತು ಗೋವಾದಲ್ಲಿ ಮಾರಾಟಕ್ಕೆ ಲಭ್ಯವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.