ನವದೆಹಲಿ: ಹಬ್ಬದ ಅವಧಿಯಲ್ಲಿ ಫೋನ್‌ನ ಆರಂಭಿಕ ಬೆಲೆಯನ್ನು ನೀವು ಎಷ್ಟೆಂದು ಊಹಿಸಬಹುದು. ದೇಶದಲ್ಲಿ ಇಲ್ಲಿಯವರೆಗಿನ ಅತ್ಯಂತ ಅಗ್ಗದ ಫೋನ್ (Cheapest Phone) ಬಿಡುಗಡೆಯಾಗಿದೆ. ಆದಾಗ್ಯೂ ಇದನ್ನು ಕೇಳಿದೊಡನೆ ಇದು ಸ್ಮಾರ್ಟ್‌ಫೋನ್ (Smartphone) ಎಂದು ಭಾವಿಸಿದ್ದರೆ ಮೊದಲು ಅದನ್ನು ಮನಸ್ಸಿನಿಂದ ತೆಗೆಯಿರಿ. ಇದು ಸ್ಮಾರ್ಟ್‌ಫೋನ್ ಅಲ್ಲ, ಆದರೆ ಇದು ಫೀಚರ್ ಫೋನ್ ಆಗಿದ್ದು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವ ಡೆಟೆಲ್ ಈ ಫೋನ್ ಅನ್ನು ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಫೋನ್ ಹೆಸರು, ಬೆಲೆ ಮತ್ತು ವಿವರಣೆ:-
ಡಿ 1 ಗುರು ಹೆಸರಿನಲ್ಲಿ ಬಿಡುಗಡೆ ಮಾಡಿದ ಈ ಫೋನ್‌ನ ಬೆಲೆ ಕೇವಲ 699 ರೂಪಾಯಿಗಳು. ಫೋನ್ 16 ಜಿಬಿ ಮೆಮೊರಿಯನ್ನು ಹೊಂದಿದ್ದು ಅದನ್ನು ವಿಸ್ತರಿಸಬಹುದು. ಅಲ್ಲದೆ ಇದರಲ್ಲಿ ಫ್ಲ್ಯಾಷ್‌ಲೈಟ್, ಜಿಪಿಆರ್ಎಸ್ ಮತ್ತು ಬಿಟಿ ಡಯಲರ್‌ನಂತಹ ಸ್ಮಾರ್ಟ್ ವೈಶಿಷ್ಟ್ಯಗಳಿವೆ. ನೇವಿ ಬ್ಲೂ ಮತ್ತು ಬ್ಲ್ಯಾಕ್ ಎರಡು ಹೊಸ ಬಣ್ಣಗಳಲ್ಲಿ ಕಂಪನಿಯು ಈ ಫೋನ್ ಅನ್ನು ಪರಿಚಯಿಸಿದೆ.


LG ಕೂಡ ತರುತ್ತಿದೆ ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್ಫೋನ್


ಫೋನ್ 1.8 '' ಎಲ್ಸಿಡಿ ಡಿಸ್ಪ್ಲೇ, ಡ್ಯುಯಲ್ ಫ್ಲ್ಯಾಷ್ಲೈಟ್, ಆಡಿಯೋ ಮತ್ತು ವಿಡಿಯೋ ಪ್ಲೇಯರ್, ಡಿಜಿಟಲ್ ಕ್ಯಾಮೆರಾ, ವೈರ್ಲೆಸ್ ಎಫ್ಎಂ, ಪವರ್ ಸೇವಿಂಗ್ ಮೋಡ್, ಎಸ್ಒಎಸ್ ಮತ್ತು 1000 ಎಮ್ಎಹೆಚ್ ಬ್ಯಾಟರಿ ಸಾಮರ್ಥ್ಯದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


4 ರಿಯರ್ ಕ್ಯಾಮರಾದೊಂದಿಗೆ ಬರಲಿದೆ Samsung Galaxy A42 5G ಫೋನ್, ಅದರ ವೈಶಿಷ್ಟ್ಯಗಳಿವು


ಸ್ಮಾರ್ಟ್‌ಫೋನ್‌ಗೆ ಸಂದೇಶಗಳು ಮತ್ತು ಚಿತ್ರಗಳನ್ನು ಕಳುಹಿಸಬಹುದು:
ಈ ಫೋನ್ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಜಡ್-ಟಾಕ್ ಅನ್ನು ಹೊಂದಿದೆ, ಇದರ ಸಹಾಯದಿಂದ ಜನರು ಯಾವುದೇ ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಉತ್ತಮ ಕ್ವಾಲಿಟಿಯ ಹೊಸ ಡಿ 1 ಗುರು ಧ್ವನಿ ಮತ್ತು ಸಂಗೀತದ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಜೊತೆಗೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.