ಬಿಸಿಲ ಬೇಗೆಯಿಂದ ಮುಕ್ತಿ ನೀಡುತ್ತದೆ ಈ ಪೋರ್ಟಬಲ್ ಎಸಿ !ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ ಎನ್ನುವ ಭಯವೂ ಇಲ್ಲ !
Portable AC:ಪೋರ್ಟಬಲ್ ಎಸಿಯನ್ನು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ತೆಗೆದುಕೊಂಡು ಹೋಗಬಹುದು.ಹಲವಾರು ಕಂಪನಿಗಳ ಪೋರ್ಟಬಲ್ ಎಸಿ ಮಾರುಕಟ್ಟೆಗೆ ಕಾಲಿಟ್ಟಿವೆ.
Portable AC: ಬೇಸಿಗೆ ಆರಂಭವಾಗಿದೆ. ಮಾರ್ಚ್ ತಿಂಗಳಲ್ಲಿಯೇ ಬಿಸಿಲು ನೆತ್ತಿ ಸುಡುತ್ತಿದೆ. ಫ್ಯಾನ್ ಗಾಳಿಯೂ ಬಿಸಿ ಏರುತ್ತಿದೆ. ಹೀಗಾಗಿ ಎಸಿ ಬಳಕೆ ಅನಿವಾರ್ಯ ಎನ್ನುವಂತಾಗಿದೆ. ಆದರೆ ಫ್ಯಾನ್, ಕೂಲರ್ ಗಳಿಗೆ ಹೋಲಿಸಿದರೆ ಎಸಿ ಸ್ವಲ್ಪ ದುಬಾರಿ. ಆದರೆ ಈಗ ಎಸಿ ಖರೀದಿ ಮಾಡುವುದಾದರೆ ಲಾಭ ಜಾಸ್ತಿ. ಏಕೆಂದರೆ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ (ಅಮೆಜಾನ್, ಫ್ಲಿಪ್‌ಕಾರ್ಟ್) ಎಸಿಗಳ ಮೇಲೆ ರಿಯಾಯಿತಿ ಲಭ್ಯವಿರುತ್ತವೆ.ಇನ್ನು ಇತ್ತೀಚಿನ ದಿನಗಳಲ್ಲಿ ಪೋರ್ಟಬಲ್ ಎಸಿ ಕ್ರೇಜ್ ತುಂಬಾ ಹೆಚ್ಚುತ್ತಿದೆ. ಪೋರ್ಟಬಲ್ ಎಸಿ ಅಳವಡಿಸುವುದರಿಂದ ಗೋಡೆಗಳಿಗೆ ಹಾನಿಯಾಗುವುದಿಲ್ಲ. ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ತೆಗೆದುಕೊಂಡು ಹೋಗಬಹುದು.ಹಲವಾರು ಕಂಪನಿಗಳ ಪೋರ್ಟಬಲ್ ಎಸಿ ಮಾರುಕಟ್ಟೆಗೆ ಕಾಲಿಟ್ಟಿವೆ.
ಬ್ಲೂ ಸ್ಟಾರ್ 1 ಟನ್ ಪೋರ್ಟಬಲ್ ಎಸಿ :
ಕೊಠಡಿ ಚಿಕ್ಕದಾಗಿದ್ದು, 1 ಟನ್ AC ಸಾಕು ಎಂದಿದ್ದರೆ ಬ್ಲೂ ಸ್ಟಾರ್‌ನ 1 ಟನ್ ಪೋರ್ಟಬಲ್ ಎಸಿ ಉತ್ತಮ ಆಯ್ಕೆ. ಇದರ ಪ್ರಾರಂಭಿಕ ಬೆಲೆ 39,000 ರೂ. ಆದರೆ, ಇದು ಅಮೆಜಾನ್‌ನಲ್ಲಿ 12% ರಿಯಾಯಿತಿಯೊಂದಿಗೆ 34,490 ರೂಪಾಯಿಗೆ ಲಭ್ಯವಿದೆ. ಇದು ಪವರ್ ಎಫಿಷಿಯೆಂಟ್ ಎಂದು ಕಂಪನಿ ಹೇಳಿಕೊಂಡಿದೆ. ಈ AC ಖರೀದಿ ಮೇಲೆ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಕೂಡಾ ಲಭ್ಯವಿದೆ. ಇದರಿಂದಾಗಿ ಈ ಎಸಿಯ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ.
ಇದನ್ನೂ ಓದಿ : Wifi Router Install Tips: ಮರೆತೂ ಈ ಐದು ಸ್ಥಳಗಳಲ್ಲಿ ವೈಫೈ ರೌಟರ್ ಇನ್ಸ್ಟಾಲ್ ಮಾಡ್ಬೇಡಿ, ಇಲ್ದಿದ್ರೆ!
ಬ್ಲೂ ಸ್ಟಾರ್ 1 ಟನ್ ಪೋರ್ಟಬಲ್ ಎಸಿ ವಿನ್ಯಾಸ :
ಈ ಎಸಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಪೋರ್ಟಬಲ್ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ. ದೂರದಿಂದ ನೋಡಿದಾಗ ಅದು ವಾಷಿಂಗ್ ಮೆಷಿನ್‌ನಂತೆ ಕಂಡು ಬರುತ್ತದೆ. ಈ AC ಹಲವು ವಿಧಾನಗಳಲ್ಲಿ ಲಭ್ಯವಿದ್ದು, ಅನುಕೂಲಕ್ಕೆ ತಕ್ಕಂತೆ ಅದನ್ನು ಸರಿಹೊಂದಿಸಬಹುದು.
ಮಿನಿ ಎಸಿ :
ಇದಲ್ಲದೆ, ಅಮೆಜಾನ್ ಮಿನಿ ಪೋರ್ಟಬಲ್ ಎಸಿಗಳನ್ನು ಕೂಡಾ ಖರೀದಿಸಬಹುದು. ಹಲವು ಸ್ಥಳೀಯ ಕಂಪನಿಗಳು ಕೂಡಾ ಎಸಿ ಮಾರಾಟ ಮಾಡುತ್ತಿದ್ದು, ಇದರ ಬೆಲೆ 5 ಸಾವಿರಕ್ಕಿಂತ ಕಡಿಮೆ ಇರುತ್ತದೆ. ಇದು ಬಳಸುವ ವಿದ್ಯುತ್ ಕೂಡಾ ಕಡಿಮೆ. ಹಾಗಾಗಿ ನಿಮ್ಮ ಬಜೆಟ್ ಕಡಿಮೆಯಾಗಿದ್ದರೆ, ಅವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.
ಇದನ್ನೂ ಓದಿ : WhatsApp Update: ಕೋಟ್ಯಾಂತರ ಬಳಕೆದಾರರಿಗೆ ಹೊಸ ಅಪ್ಡೇಟ್ ಬಿಡುಗಡೆಗೆ ಮುಂದಾದ ವಾಟ್ಸ್ ಆಪ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ