WhatsApp app lock feature : WhatsAppನಲ್ಲಿ ಈಗಾಗಲೇ ಚಾಟ್ ಲಾಕ್ ವೈಶಿಷ್ಟ್ಯವಿದೆ. ಇದರ ಸಹಾಯದಿಂದ ಪ್ರಮುಖ ಚಾಟ್ಗಳನ್ನು ಲಾಕ್ ಮಾಡಬಹುದು.ಇದೀಗ ವಾಟ್ಸಾಪ್ ಸಂಪೂರ್ಣ ಆಪ್ ಅನ್ನು ಲಾಕ್ ಮಾಡುವ ಫೀಚರ್ ಅನ್ನು ತರುತ್ತಿದೆ ಎನ್ನುವ ಮಾಹಿತಿ ಇದೆ. ಈ ವೈಶಿಷ್ಟ್ಯವು ಪ್ರಸ್ತುತ Android ಫೋನ್ಗಳನ್ನು ಬಳಸುವವರಿಗೆ ಮಾತ್ರ ಟೆಸ್ಟಿಂಗ್ ಹಂತದಲ್ಲಿದೆ. ಈ ವೈಶಿಷ್ಟ್ಯವನ್ನು ಬಳಸಲು, WhatsAppನ ಇತ್ತೀಚಿನ ಅಪ್ಡೇಟ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
ಬಳಕೆದಾರರಿಗೆ ಸಿಗುವುದು ಅನೇಕ ಆಯ್ಕೆ :
ಫಿಂಗರ್ಪ್ರಿಂಟ್, ಫೇಸ್ ಲಾಕ್ ಅಥವಾ ನಿಮ್ಮ ಫೋನ್ನಲ್ಲಿ ನೀವು ಹೊಂದಿಸಿರುವ ಯಾವುದೇ ಪಾಸ್ವರ್ಡ್ ಹೀಗೆ ವಿಭಿನ್ನ ವಿಧಾನಗಳನ್ನು ಬಳಸಿ ಅಪ್ಲಿಕೇಶನ್ ಅನ್ನು ಓಪನ್ ಮಾಡಬಹುದು. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ, WhatsApp ಅನ್ನು ತೆರೆಯಬೇಕಾದರೆ ಈ ವಿಧಾನಗಳಲ್ಲಿ ಯಾವುದಾದರು ಒಂದನ್ನು ಬಳಸಬೇಕಾಗುತ್ತದೆ.
ಇದನ್ನೂ ಓದಿ : Samsung Galaxy A54 ಬೆಲೆಯಲ್ಲಿ ಭಾರೀ ಕಡಿತ ! ಅಗ್ಗದ ಬೆಲೆಯಲ್ಲಿ ಖರೀದಿಸಬಹುದು ಈ ಫೋನ್ !
ಮೊದಲು ಎರಡೇ ಆಯ್ಕೆಗಳು ಲಭ್ಯವಿದ್ದವು :
ಈ ಹಿಂದೆ ಫಿಂಗರ್ ಪ್ರಿಂಟ್ ಅಥವಾ ಫೇಸ್ ಲಾಕ್ ಮೂಲಕವಷ್ಟೇ ವಾಟ್ಸಾಪ್ ಅನ್ನು ಓಪನ್ ಮಾಡಬಹುದಾಗಿತ್ತು. ಈಗ ನಿಮ್ಮ ಫೋನ್ನ ಪಾಸ್ವರ್ಡ್ ಅಥವಾ ಪ್ಯಾಟರ್ನ್ ಅನ್ನು ಬಳಸಿಕೊಂಡು WhatsApp ಅನ್ನು ಲಾಕ್ ಮತ್ತು ಅನ್ಲಾಕ್ ಮಾಡಬಹುದು.
WhatsApp ಹೊರ ತಂದಿರುವ ಮತ್ತೊಂದು ಹೊಸ ವೈಶಿಷ್ಟ್ವೆಂದರೆ ಈಗ ಬೇರೆಯವರ ಪ್ರೊಫೈಲ್ ಫೋಟೋದ ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗೆ ಮಾಡಲು ಪ್ರಯತ್ನಿಸಿದರೆ, ಎರರ್ ಮೆಸೇಜ್ ಬರುತ್ತದೆ. ಈ ವೈಶಿಷ್ಟ್ಯದ ಮೂಲಕ ಪ್ರೊಫೈಲ್ ಫೋಟೋವನ್ನು ಇನ್ನಷ್ಟು ವೈಯಕ್ತಿಕಗೊಳಿಸುತ್ತದೆ.
ಇದನ್ನೂ ಓದಿ : 2 ಪ್ರಿಪೇಯ್ಡ್ ಯೋಜನೆಗಳ ವ್ಯಾಲಿಡಿಟಿ ಹೆಚ್ಚಿಸಿದ BSNL
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.