Tata Nexon Safety & Features and Details: ಜನರು ಯಾವುದೇ ವಾಹನವನ್ನು ಖರೀದಿಸುವಾಗಲೂ ಅದರ ಸೇಫ್ಟಿ ಫೀಚರ್ ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಾರೆ. ಕಾರನ್ನು ಖರೀದಿಸುವಾಗ, ಗ್ರಾಹಕರು ಅದರ  ಸೇಫ್ಟಿ  ರೇಟಿಂಗ್ ಅನ್ನು ಸಹ ಪರಿಶೀಲಿಸುತ್ತಾರೆ. ಸೇಫ್ಟಿ  ರೇಟಿಂಗ್ ಅನ್ನು  ಗಮನದಲ್ಲಿಟ್ಟುಕೊಂಡು ಜನರು ಈಗ SUVಗಳನ್ನು ಖರೀದಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಎಸ್‌ಯುವಿ ವಿಭಾಗದಲ್ಲಿಯೂ ಸಹ, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ಹ್ಯುಂಡೈ ವೆನ್ಯೂ ಇತ್ಯಾದಿಗಳು ಹೆಚ್ಚು ಮಾರಾಟವಾಗುವ ಸಬ್-4 ಮೀಟರ್ ಎಸ್‌ಯುವಿಗಳಾಗಿವೆ. 


COMMERCIAL BREAK
SCROLL TO CONTINUE READING

ಈ ಕಾರುಗಳ ಪೈಕಿ ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಝಾ ಹೆಚ್ಚು ಮಾರಾಟವಾಗುವ ಕಾರುಗಳಾಗಿವೆ. ಆದರೆ, ಸುರಕ್ಷತೆಯ ರೇಟಿಂಗ್‌ಗಳ ವಿಷಯಕ್ಕೆ ಬಂದಾಗ, ಟಾಟಾ ನೆಕ್ಸಾನ್ ಈ ಕಾರುಗಳನ್ನು ಹಿಂದಿಕ್ಕುತ್ತದೆ. ಟಾಟಾ ನೆಕ್ಸಾನ್‌ಗೆ ಗ್ಲೋಬಲ್ ಎನ್‌ಸಿಎಪಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ನೀಡಿದೆ. ಆದರೆ ಹೊಸ ಮಾರುತಿ ಬ್ರೆಝಾ (2022 ರಲ್ಲಿ ಬಂದ ಫೇಸ್‌ಲಿಫ್ಟ್ ಆವೃತ್ತಿ) ಇನ್ನೂ ಕ್ರ್ಯಾಶ್ ಪರೀಕ್ಷೆಗೆ ಒಳಪಟ್ಟಿಲ್ಲ. ಆದಾಗ್ಯೂ, ಹಳೆಯ ಬ್ರೆಝಾಕ್ಕೆ 4 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಲಾಗಿದೆ. ಬ್ರೆಝಾ ಬೆಲೆ 8.29 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.


ಇದನ್ನೂ ಓದಿ : iPhone 14 Discount Offer: ಅತ್ಯಂತ ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿರಿ!


ಟಾಟಾ ನೆಕ್ಸಾನ್ ಬೆಲೆ, ಇಂಜಿನ್ ಮತ್ತು ವೈಶಿಷ್ಟ್ಯಗಳು :
ಟಾಟಾ ನೆಕ್ಸಾನ್ ಬೆಲೆ ಶ್ರೇಣಿ 7.80 ಲಕ್ಷದಿಂದ 14.35 ಲಕ್ಷದವರೆಗೆ (ಎಕ್ಸ್ ಶೋ ರೂಂ). ಏರುತ್ತದೆ. ಅಂದರೆ, ಅದರ ಆರಂಭಿಕ ಬೆಲೆ ಬ್ರೆಝಾಕ್ಕಿಂತ ಕಡಿಮೆಯಾಗಿದೆ. ಇದು 5 ಆಸನಗಳ ಎಸ್‌ಯುವಿ. ಇದು 350 ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ಬರುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. ಇದರ 1.2-ಲೀಟರ್, 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 120PS/170Nm ಜನರೇಟ್ ಮಾಡುತ್ತದೆ. ಆದರೆ, ಅದರ 1.5-ಲೀಟರ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 115PS/260Nm ಔಟ್ ಪುಟ್ ಜನರೇಟ್ ಮಾಡುತ್ತದೆ. 


ಇದು 5-ಸ್ಪೀಡ್ ಮ್ಯಾನುವಲ್/AMT ಗೇರ್‌ಬಾಕ್ಸ್‌ಗೆ ಕನೆಕ್ಟ್ ಮಾಡಲಾಗಿರುತ್ತದೆ. ನೆಕ್ಸಾನ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿ, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಸನ್‌ರೂಫ್, ಆಟೋ ಎಸಿ, ರಿಯರ್ ಎಸಿ ವೆಂಟ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್‌ಗಳು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ಅನ್ನು ಹೊಂದಿರುತ್ತದೆ. ABS ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳಂತಹ ವೈಶಿಷ್ಟ್ಯಗಳು EBD ಯೊಂದಿಗೆ ಬರುತ್ತವೆ.


ಇದನ್ನೂ ಓದಿ : ವಿಶ್ವ ದೂರಸಂಪರ್ಕ ದಿನದ ಕುರಿತು ತಿಳಿದಿರಬೇಕಾದ ವಿಚಾರಗಳಿವು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.