ಈ ಖಾತೆಗಳನ್ನು ಡಿಲೀಟ್ ಮಾಡಲಿದೆ ಗೂಗಲ್ ! ನಿಮ್ಮ ಅಕೌಂಟ್ ಅದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ

Google ಖಾತೆಯನ್ನು ಕನಿಷ್ಠ 2 ವರ್ಷಗಳವರೆಗೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ, ಈ ವರ್ಷದ ಅಂತ್ಯದ ವೇಳೆಗೆ, ಖಾತೆ ಮತ್ತು ಅದರಲ್ಲಿರುವ ಎಲ್ಲಾ ವಿಷಯವನ್ನು ಡಿಲೀಟ್ ಮಾಡಬಹುದು ಎಂದು Google ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದೆ.

Written by - Ranjitha R K | Last Updated : May 17, 2023, 03:06 PM IST
  • ಎರಡು ವರ್ಷಗಳಿಂದ ಗೂಗಲ್ ಖಾತೆ ಬಳಸದೇ ಇದ್ದರೆ ಡಿಲೀಟ್ ಆಗುತ್ತದೆ
  • ಬ್ಲಾಗ್ ಪೋಸ್ಟ್ ನಲ್ಲಿ ಏನು ಬರೆಯಲಾಗಿದೆ?
  • ಯಾವ ಅಕೌಂಟ್ ಡಿಲೀಟ್ ಆಗಲಿದೆ
ಈ ಖಾತೆಗಳನ್ನು ಡಿಲೀಟ್ ಮಾಡಲಿದೆ ಗೂಗಲ್ ! ನಿಮ್ಮ ಅಕೌಂಟ್ ಅದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ title=

ಬೆಂಗಳೂರು : ನೀವು Gmail ಖಾತೆಯನ್ನು ಹೊಂದಿದ್ದು, ಅದನ್ನು ಎರಡು ವರ್ಷಗಳಿಂದ ಬಳಸದೇ ಇದ್ದರೆ, Google ನಿಮ್ಮ ಖಾತೆಯನ್ನು  ಡಿಲೀಟ್ ಮಾಡುತ್ತದೆ. ಕಂಪನಿಯು ತನ್ನ ನೀತಿಗಳನ್ನು ಅಪ್ಡೇಟ್ ಮಾಡಿದೆ. 24 ತಿಂಗಳ ಮಧ್ಯಂತರದಲ್ಲಿ ತಮ್ಮ ಖಾತೆಗೆ ಲಾಗಿನ್ ಮಾಡುವಂತೆ ಮತ್ತು ಅವರ ಹಳೆಯ Google ಖಾತೆಯನ್ನು ಪರಿಶೀಲಿಸುವಂತೆ Google ತನ್ನ ಬಳಕೆದಾರರನ್ನು ವಿನಂತಿಸಿದೆ. ಈ ಹಿಂದೆ, ಖಾತೆಯಲ್ಲಿನ ಡೇಟಾವನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸದಿದ್ದರೆ, ಅವುಗಳನ್ನು  ಡಿಲೀಟ್ ಮಾಡಬಹುದು ಎನ್ನುವುದು Googleನ ನೀತಿಯಾಗಿತ್ತು. ಆದರೆ ಈಗ, Google ಮಾಡರೇಟ್ ಮಾಡದ ಖಾತೆಗಳನ್ನು ಸಹ ತೆಗೆದುಹಾಕುತ್ತದೆ. ಇದರೊಂದಿಗೆ, ಗೂಗಲ್ ತನ್ನ ಸೇವೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದೆ. 

ಬ್ಲಾಗ್ ಪೋಸ್ಟ್ ನಲ್ಲಿ ಏನು ಬರೆಯಲಾಗಿದೆ? :
Google ಖಾತೆಯನ್ನು ಕನಿಷ್ಠ 2 ವರ್ಷಗಳವರೆಗೆ ಬಳಸದಿದ್ದರೆ ಅಥವಾ ಸೈನ್ ಇನ್ ಮಾಡದಿದ್ದರೆ, ಈ ವರ್ಷದ ಅಂತ್ಯದ ವೇಳೆಗೆ, ಖಾತೆ ಮತ್ತು ಅದರಲ್ಲಿರುವ ಎಲ್ಲಾ ವಿಷಯವನ್ನು ಡಿಲೀಟ್ ಮಾಡಬಹುದು ಎಂದು Google ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದೆ. ಇದು Google Workspace (ಉದಾಹರಣೆಗೆ Gmail, ಡಾಕ್ಸ್, ಡ್ರೈವ್, Meet, ಕ್ಯಾಲೆಂಡರ್), Google ಫೋಟೋಗಳು, YouTube ಹೀಗೆ ಎಲ್ಲವನ್ನೂ   ಒಳಗೊಂಡಿರಬಹುದು.'

ಇದನ್ನೂ ಓದಿ : ಈ ನಾಲ್ಕು ವೈಶಿಷ್ಟ್ಯ ಯಾವ ಕಾರಿನಲ್ಲಿರುತ್ತದೆಯೋ ಅದೇ ಕಾರನ್ನು ಜನ ಇಷ್ಟಪಡುತ್ತಿರುವುದು !

ಹೊಸ ನೀತಿಯನ್ನು ಡಿಸೆಂಬರ್‌ವರೆಗೆ ಕಾರ್ಯಗತಗೊಳಿಸಲಾಗುವುದಿಲ್ಲ. ಅಂದರೆ Gmailನಲ್ಲಿ ಇನ್ನೂ ಸಕ್ರಿಯವಾಗಿಲ್ಲದ ಬಳಕೆದಾರರು ತಮ್ಮ ಹಳೆಯ ಖಾತೆಗಳನ್ನು ಮರಳಿ ಪಡೆಯಲು ಡಿಸೆಂಬರ್ ವರೆಗೆ ಸಮಯಾವಕಾಶವಿದೆ. ಹೀಗಾಗಿ ಈ ಅವಧಿಯೊಳಗೆ ತಮ್ಮ ಖಾತೆಯಲ್ಲಿರುವ ಸಬ್ಜೆಕ್ಟ್ ಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡಲು ಅವರ ಹಳೆಯ ಲಾಗಿನ್ ಮಾಹಿತಿಯನ್ನು ಮತ್ತೆ ಪಡೆಯುವಂತೆ ಕೋರಲಾಗಿದೆ. 

ಖಾತೆಯ ಚಟುವಟಿಕೆಯನ್ನು ಹೇಗೆ ಅಳೆಯಲಾಗುತ್ತದೆ?:
ಇಮೇಲ್ ಅನ್ನು ಓದುವುದು ಅಥವಾ ಕಳುಹಿಸುವುದು, Google ಡ್ರೈವ್ ಬಳಸುವುದು, YouTube ವೀಡಿಯೊಗಳನ್ನು ವೀಕ್ಷಿಸುವುದು, Google Play Store ನಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು, ಸರ್ಚ್ ಮಾಡುವುದು, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಅಥವಾ ಸೇವೆಗಳಿಗಾಗಿ Google ನೊಂದಿಗೆ ಸೈನ್ ಇನ್ ಮಾಡುವಂತಹ ಹಲವಾರು ಕ್ರಿಯೆಗಳ ಆಧಾರದ ಮೇಲೆ Google ಖಾತೆಯ ಚಟುವಟಿಕೆಯನ್ನು ಅಳೆಯಲಾಗುತ್ತದೆ. 

ಇದನ್ನೂ ಓದಿ : Honda City ಅನುಭವವನ್ನೇ ನೀಡಲಿದೆ ಈ ಅಗ್ಗದ ಸೆಡನ್ ! ಬೆಲೆ 4.5 ಲಕ್ಷದಷ್ಟು ಕಡಿಮೆ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News