ಮಾರುಕಟ್ಟೆಗೆ ಕಾಲಿಟ್ಟಿದೆ ಕೇವಲ 8 ಸಾವಿರ ರೂಪಾಯಿ ಮೌಲ್ಯದ Waterproof Smartphone
Hotwav W10 Smartphone : 15,000mAh ಬ್ಯಾಟರಿಯನ್ನು ಒಳಗೊಂಡಿರುವ ಕೇವಲ 8 ಸಾವಿರ ರೂಪಾಯಿ ಮೌಲ್ಯದ Hotwav ಸ್ಮಾರ್ಟ್ಫೋನ್ ಇಂದಿನಿಂದ ಮಾರಾಟವಾಗಲಿದೆ. ಇದು 1,200 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿದೆ ಎಂದು ಹೇಳಲಾಗಿದೆ.
Hotwav W10 Smartphone : ಮಿಲಿಟರಿ ಗ್ರೇಡ್ ಬಾಳಿಕೆ ಮತ್ತುವಾಟರ್ ರೆಸಿಸ್ಟೆನ್ಸ್ ವಿನ್ಯಾಸದೊಂದಿಗೆ Hotwav W10 ಸ್ಮಾರ್ಟ್‌ಫೋನ್ ಅನ್ನು ಜೂನ್ 24 ರಂದು ಬಿಡುಗಡೆ ಮಾಡಲಾಗಿದೆ. ಇದು 15,000mAh ಬ್ಯಾಟರಿಯನ್ನು ಒಳಗೊಂಡಿದೆ. ಅಲ್ಲದೆ ಇದು 1,200 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಈ ಸ್ಮಾರ್ಟ್‌ಫೋನ್ 6.53-ಇಂಚಿನ HD + ಡಿಸ್‌ಪ್ಲೇಯನ್ನು ಹೊಂದಿದ್ದು, ಸೆಲ್ಫಿ ಕ್ಯಾಮೆರಾವನ್ನು ಇರಿಸಲು ವಾಟರ್‌ಡ್ರಾಪ್ ನಾಚ್ ಹೊಂದಿದೆ. ಇಂದಿನಿಂದ ಅಂದರೆ ಜೂನ್ 27 ರಿಂದ ಹ್ಯಾಂಡ್‌ಸೆಟ್ ಮಾರಾಟ ಆರಂಭವಾಗಲಿದೆ.
Hotwav W10 ಬೆಲೆ :
Hotwav W10 ಜೂನ್ 27 ರಿಂದ ಅಲಿ ಎಕ್ಸ್ ಪ್ರೆಸ್ ನಲ್ಲಿ 8,000 ರೂಪಾಯಿಗೆ ಮಾರಾಟವಾಗುತ್ತಿದೆ. ಇಂದಿನಿಂದ ಜುಲೈ 1 ರವರೆಗೆ ಇಲ್ಲಿ ಈ ಫೋನ್ ಅನ್ನು ಖರೀದಿಸಬಹುದು. ಆರಂಭಿಕ ಪ್ರೋಮೋ ನಂತರ, ಅದರ ಬೆಲೆ 11,000 ರೂಪಾಯಿಗೆ ಹೆಚ್ಚಾಗುತ್ತದೆ. ಇದು ಗ್ರೇ ಮತ್ತು ಆರೆಂಜ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಇದನ್ನೂ ಓದಿ : BSNL: ಬಿಎಸ್ಎನ್ಎಲ್ ಭರ್ಜರಿ ಕೊಡುಗೆ
Hotwav W10 ವಿಶೇಷಣಗಳು :
Hotwav W10 HD+ (720x1,600 ಪಿಕ್ಸೆಲ್‌ಗಳು) ರೆಸಲ್ಯೂಶನ್‌ನೊಂದಿಗೆ 6.53-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. Hotwav W10 ಅನ್ನು Mediatek Helio A22 SoC ಜೊತೆಗೆ 4GB RAM ಮತ್ತು 32GB ಆನ್‌ಬೋರ್ಡ್ ಸ್ಟೋರೇಜ್ ಹೊಂದಿದೆ. ಇದು ಸ್ಟೋರೇಜ್ ವಿಸ್ತರಣೆಗಾಗಿ 512 GB ವರೆಗಿನ ಮೈಕ್ರೋ SD ಕಾರ್ಡ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್ 13MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 5MP ಸೆಲ್ಫಿ ಶೂಟರ್ ಅನ್ನು ಹೊಂದಿದೆ.
Hotwav W10 ಬ್ಯಾಟರಿ ಮತ್ತು ಇತರ ವೈಶಿಷ್ಟ್ಯಗಳು :
Hotwav W10 15,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 28 ಗಂಟೆಗಳ ನೋನ್ ಸ್ಟಾಪ್ ವೀಡಿಯೊ ಪ್ಲೇಟೈಮ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಬ್ಯಾಟರಿಯು 18W ವೈರ್ಡ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಮಿಲಿಟರಿ ಗ್ರೇಡೆಡ್ ಬಾಳಿಕೆಯನ್ನು ಒದಗಿಸಲು MIL-STD810H-ಪ್ರಮಾಣೀಕೃತವಾಗಿದೆ. ವಾಟರ್ ರೆಸಿಸ್ಟೆನ್ಸ್ ವಿನ್ಯಾಸಕ್ಕಾಗಿ ಹ್ಯಾಂಡ್‌ಸೆಟ್‌ಗೆ IP68 ಮತ್ತು IP69K-ರೇಟ್ ನೀಡಲಾಗಿದೆ. ಇದು ಜಿಪಿಎಸ್, ಗ್ಲೋನಾಸ್, ಬೀಡೌ ಮತ್ತು ಗೆಲಿಲಿಯೋ ಎಂಬ ನಾಲ್ಕು ಸ್ಯಾಟಲೈಟ್ ನ್ಯಾವಿಗೇಶನ್ ಸಿಸ್ಟಮ್ ಅನ್ನು ಒಳಗೊಂಡಿದೆ. ಭದ್ರತೆಗಾಗಿ, ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಅಳವಡಿಸಲಾಗಿದೆ. ಫೇಸ್ ಅನ್ಲಾಕ್ ತಂತ್ರಜ್ಞಾನವನ್ನು ಕೂಡಾ ಇದು ಹೊಂದಿದೆ.
ಇದನ್ನೂ ಓದಿ : ನಿಮಗೇ ಗೊತ್ತಿಲ್ಲದಂತೆ ನಿಮ್ಮ ಪತ್ತೇದಾರಿ ಮಾಡುತ್ತಿರಬಹುದು ಈ app , ಫೋನ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.