ನಿಮಗೇ ಗೊತ್ತಿಲ್ಲದಂತೆ ನಿಮ್ಮ ಪತ್ತೇದಾರಿ ಮಾಡುತ್ತಿರಬಹುದು ಈ app , ಫೋನ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ

ಗೂಗಲ್ ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಫಿನ್‌ಟೆಕ್ ಕಂಪನಿ ಸ್ಲೈಸ್ ಆಪ್ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಜೂನ್ 24 ರಂದು, Google Play Protect ಒಂದು ಅಧಿಸೂಚನೆಯನ್ನು ಕಳುಹಿಸಿದೆ.   

Written by - Ranjitha R K | Last Updated : Jun 27, 2022, 10:53 AM IST
  • ಸ್ಮಾರ್ಟ್‌ಫೋನ್‌ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ.
  • ಸ್ಲೈಸ್ ಆ್ಯಪ್‌ ಹಾನಿಕಾರಕ ಅಪ್ಲಿಕೇಶನ್ ?
  • ಈ ಬಗ್ಗೆ ಕಂಪನಿ ನೀಡಿರುವ ಸ್ಪಷ್ಟೀಕರಣ ಏನು ?
 ನಿಮಗೇ ಗೊತ್ತಿಲ್ಲದಂತೆ ನಿಮ್ಮ ಪತ್ತೇದಾರಿ ಮಾಡುತ್ತಿರಬಹುದು ಈ app , ಫೋನ್ ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ  title=
Google alert (file photo)

ಬೆಂಗಳೂರು : ಸ್ಮಾರ್ಟ್‌ಫೋನ್‌ಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆಗಳು ವಿವಿಧ ಆಪ್‌ಗಳ ಮೂಲಕ ಬಳಕೆದಾರರ ವೈಯಕ್ತಿಕ ವಿವರಗಳು ಮತ್ತು ಡೇಟಾವನ್ನು ಕದಿಯುವ ಬಗ್ಗೆ ವರದಿಯಾಗಿದೆ. ಗೂಗಲ್ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ ಫಿನ್‌ಟೆಕ್ ಕಂಪನಿ ಸ್ಲೈಸ್ ಆಪ್,  ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಬಳಕೆದಾರರ ಡೇಟಾವನ್ನು ಕದಿಯಲು ಪ್ರಯತ್ನಿಸುತ್ತಿರುವ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ಗುರುತಿಸಲು Google Play Protect ನಿಯಮಿತವಾಗಿ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡುತ್ತಿರುತ್ತದೆ.  'ಸ್ಲೈಸ್ ನಿಮ್ಮ ಸಾಧನವನ್ನು ಅಪಾಯಕ್ಕೆ ತಳ್ಳುತ್ತದೆ' ಎಂಬ ನೋಟಿಫಿಕೇಶನ್ ಅನ್ನು ಜೂನ್ 24 ರಂದು, Google Play Protect ಕಳುಹಿಸಿದೆ.

ಸ್ಲೈಸ್ ಆ್ಯಪ್‌ ಹಾನಿಕಾರಕ ಅಪ್ಲಿಕೇಶನ್ ? : 
ಬಳಕೆದಾರರು ಸ್ಲೈಸ್ ಅಪ್ಲಿಕೇಶನ್ ನೋಟಿಫಿಕೇಶನ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಸ್ಲೈಸ್ ಅಪ್ಲಿಕೇಶನ್ ನಿಮ್ಮ ವೈಯಕ್ತಿಕ ಡೇಟಾಗಳಾದ ಸಂದೇಶಗಳು, ಫೋಟೋಗಳು, ಆಡಿಯೊಗಳ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸುವ ಪ್ಲೇ ಪ್ರೊಟೆಕ್ಟ್ ಪುಟಕ್ಕೆ ಕರೆದೊಯ್ಯುತ್ತದೆ. Google Play Protect ಸಹ ಬಳಕೆದಾರರಿಗೆ ತಮ್ಮ ಸಾಧನದಿಂದ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಲು ಶಿಫಾರಸು ಮಾಡಿದೆ.

ಇದನ್ನೂ ಓದಿ : Shocking: ಕೇವಲ 3x4 ಸೆಂ.ಮಿ ಗಾತ್ರದ ಈ ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಉರಿಸಬಹುದಂತೆ

 ಸ್ಪಷ್ಟೀಕರಣ ನೀಡಿರುವ ಆಪ್ :
ಈ ಕುರಿತು ಪ್ರತಿಕ್ರಿಯಿಸಿರುವ ಸ್ಲೈಸ್ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಹೇಳಿಕೊಂಡಿದೆ. ಸ್ಲೈಸ್ ಜೂನ್ 24 ರಂದು ಈ ಬಗ್ಗೆ ಟ್ವೀಟ್ ಮಾಡಿದೆ. 'ನಿನ್ನೆ ಸಂಜೆ - ನಮ್ಮ Android ಅಪ್‌ಡೇಟ್ ಪ್ಲೇಸ್ಟೋರ್‌ನಿಂದ ದುರ್ಬಲತೆಯ ಸಂದೇಶ ಬಂದಿದೆ.  ಈ ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಮಾತ್ರವಲ್ಲ ಕೇವಲ  4 ಗಂಟೆಗಳಲ್ಲಿ ಸಮಸ್ಯೆಯನ್ನು ಪರಿಹರಿಸಿದ್ದೇವೆ.  1% ಅಪ್ಲಿಕೇಶನ್ ಬಳಕೆದಾರರು ಇನ್ನೂ ಹಿಂದಿನ ಆವೃತ್ತಿಯನ್ನು ಬಳಸುತ್ತಿದ್ದಾರೆ. ಇನ್ನು ಕೂಡಾ ಈ ಸಮಸ್ಯೆ ಎದುರಾಗುತ್ತಿದ್ದರೆ, ಸಾಧ್ಯವಾದಷ್ಟು ಬೇಗ ನಿಮ್ಮ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತೆ ಇನ್ ಸ್ಟಾಲ್ ಮಾಡುವಂತೆ ವಿನಂತಿಸಿದೆ. 

ಕ್ಷಮೆಯಾಚಿಸಿದ ಸ್ಲೈಸ್ ಅಪ್ಲಿಕೇಶನ್ :
ಜೂನ್ 25 ರಂದು, ಸ್ಲೈಸ್ ಮತ್ತೊಮ್ಮೆ ತನ್ನ ಹೇಳಿಕೆಯನ್ನು ನೀಡಿದೆ. "ಸ್ಲೈಸ್  ಎಂದಿಗೂ ನಿಮ್ಮ ಡೇಟಾ ಮತ್ತು ಗೌಪ್ಯತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದೆ. ಅಲ್ಲದೆ, ನಮ್ಮ ಅಪ್ಲಿಕೇಶನ್‌ನಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ಕೂಡಾ ಹೇಳಿದೆ.  ಇದು ತಾಂತ್ರಿಕ ದೋಷದ ಒಂದು ಪ್ರತ್ಯೇಕ ಪ್ರಕರಣವಾಗಿದ್ದು, ಅದನ್ನು ಪರಿಹರಿಸಲಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿದೆ. ಉಂಟಾದ ಅನಾನುಕೂಲತೆಗಾಗಿ ಅದು ಕ್ಷಮೆಯಾಚಿಸಿದೆ. 

ಇದನ್ನೂ ಓದಿ : Oukitel WP19- ಫುಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಕಾರ್ಯನಿರ್ವಹಿಸುತ್ತಂತೆ ಈ ಸ್ಮಾರ್ಟ್‌ಫೋನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News