ವಾಷಿಂಗ್ಟನ್: Brightest Comet Leonard - ವರ್ಷದ ಪ್ರಕಾಶಮಾನವಾದ ಧೂಮಕೇತು (Leonard) ಭೂಮಿಯ ಸಮೀಪ ಹಾದು ಹೋಗಲಿದೆ. ಈ ಹಸಿರು ಬಾಲದ ಧೂಮಕೇತು ಭೂಮಿಯ ಸಮೀಪ ಹಾದುಹೋಗುವ ಅಪರೂಪದ ದೃಶ್ಯವನ್ನು ಡಿಸೆಂಬರ್ 12 ರಂದು ನೀವು ಕಾಣಬಹುದು. ಧೂಮಕೇತುವಿನ ಹೆಸರು ಲಿಯೊನಾರ್ಡ್ ಮತ್ತು ಸುಮಾರು 70 ಸಾವಿರ ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಈ ಧೂಮಕೇತು ಭೂಮಿಯ ಅತ್ಯಂತ ಸನೀಹದಿಂದ  ಹಾದುಹೋಗಲಿದೆ. ಲಿಯೊನಾರ್ಡ್ ಕಾಮೆಟ್ ಅನ್ನು C/2021 A1 ಎಂದೂ ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 12 ರಂದು ಭೂಮಿಗೆ ಹತ್ತಿರದಲ್ಲಿರಲಿದೆ
ವಿಜ್ಞಾನಿಗಳ ಪ್ರಕಾರ, ಈ ಧೂಮಕೇತುವು ಡಿಸೆಂಬರ್ 12 ರಂದು ಭೂಮಿಗೆ ಅತ್ಯಂತ  ಹತ್ತಿರದಲ್ಲಿದೆ. ಈ ಸಮಯದಲ್ಲಿ, ಭೂಮಿಯಿಂದ (Earth) ಅದರ ಅಂತರವು ಸುಮಾರು 21 ಮಿಲಿಯನ್ ಮೈಲುಗಳಷ್ಟು (35 ಮಿಲಿಯನ್ ಕಿಮೀ) ಇರಲಿದೆ. ರಾತ್ರಿಯ ಆಕಾಶದಲ್ಲಿ ಇದನ್ನು ತಿಂಗಳು ಪೂರ್ತಿ ಕಾಣಬಹುದು. ಉತ್ತರ ಗೋಳಾರ್ಧದಲ್ಲಿ, ದೂರದರ್ಶಕ ಅಥವಾ ಬೈನಾಕ್ಯುಲರ್‌ಗಳ ಸಹಾಯದಿಂದ ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ಇದನ್ನು ಕಾಣಬಹುದು. ಈ ವರ್ಷದ ಜನವರಿಯಲ್ಲಿ ಖಗೋಳಶಾಸ್ತ್ರಜ್ಞ ಗ್ರೆಗೊರಿ ಜೆ ಲಿಯೊನಾರ್ಡ್ (Astronomer Gregory J Leonard) ಅವರು ಧೂಮಕೇತುವನ್ನು (Comet Leonard) ಕಂಡುಹಿಡಿದಿದ್ದರು.


ಇದನ್ನೂ ಓದಿ-ಬಾಹ್ಯಾಕಾಶದಲ್ಲಿ ದೈತ್ಯ ಗ್ರಹ ಪತ್ತೆ, ಗಾತ್ರದಲ್ಲಿ ಗುರುಗ್ರಹಕ್ಕಿಂತ 11 ಪಟ್ಟು ದೊಡ್ಡದು


ಸೂರ್ಯೋದಯಕ್ಕೆ (Sun) ಕೆಲವು ಗಂಟೆಗಳ ಮೊದಲು ನೀವು ಇದನ್ನು ನೋಡಬಹುದು
ಈ ಧೂಮಕೇತುವಿನ ಹೊಳಪು ಕ್ರಮೇಣ ಹೆಚ್ಚಾಗಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಡಿಸೆಂಬರ್ 12 ರಂದು ಇದನ್ನು ನೋಡಲು ಉತ್ತಮ ಸಮಯವೆಂದರೆ ಸೂರ್ಯೋದಯಕ್ಕೆ ಕೆಲವು ಗಂಟೆಗಳ ಮೊದಲು. ಡಿಸೆಂಬರ್ 14 ರಿಂದ ಸೂರ್ಯಾಸ್ತದ ನಂತರ ಆಕಾಶದಲ್ಲಿ ಇದು ಗೋಚರಿಸಲಿದೆ. ಡಿಸೆಂಬರ್ 17 ರಂದು, ಧೂಮಕೇತುವಿನ ಹೊಳಪು ಅತ್ಯಧಿಕವಾಗಿರುತ್ತದೆ.


ಇದನ್ನೂ ಓದಿ-Sun Image: ಸೂರ್ಯನ ಇಷ್ಟೊಂದು ಸ್ಪಷ್ಟ ಫೋಟೋಗ್ರಾಫ್ ಯಾವತ್ತಾದರೂ ನೋಡಿದ್ದೀರಾ?


ಕಾಮೆಟ್ ಡಿಸೆಂಬರ್ ಅಂತ್ಯದಲ್ಲಿ ಪ್ರಕಾಶಮಾನವಾಗಿರುತ್ತದೆ
ಈ ಧೂಮಕೇತುವಿನ ಹಸಿರು ಬಾಲವೂ ಗೋಚರಿಸುತ್ತದೆ. ಹಸಿರು ಬಾಲವನ್ನು ಹೊಂದಿರುವ ಈ ಧೂಮಕೇತು ತುಂಬಾ ಬಿಸಿಯಾಗಿದೆ. ಇದು ಬಹಳಷ್ಟು ಸೈನೈಡ್ಗಳು ಮತ್ತು ಡಯಾಟೊಮಿಕ್ ಇಂಗಾಲವನ್ನು ಹೊಂದಿದೆ ಮತ್ತು ಸಮಾನವಾಗಿ ಒಡೆಯುವ ಸಾಧ್ಯತೆಯಿದೆ. ಕ್ರಿಸ್ಮಸ್ ದಿನದಂದು ಸೂರ್ಯಾಸ್ತದ ನಂತರ ಲಿಯೊನಾರ್ಡ್ ನೈಋತ್ಯ ದಿಗಂತವನ್ನು ನೋಡಲು ಅವಕಾಶವನ್ನು ಹೊಂದಿರಬಹುದು. ಇದು ನೀವು ಜಗತ್ತಿನಲ್ಲಿ ಎಲ್ಲಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ಧೂಮಕೇತು ಡಿಸೆಂಬರ್ ಅಂತ್ಯದಲ್ಲಿ ಪ್ರಕಾಶಮಾನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ-Knowledge Story: ಭೂಮಿಯ ಮೇಲೆ ನೀರು ಎಲ್ಲಿಂದ ಬಂತು ನಿಮಗೆ ಗೊತ್ತಾ? ಇಲ್ಲಿದೆ ವಿಜ್ಞಾನಿಗಳ ಉತ್ತರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.