Sun Image: ಸೂರ್ಯನ ಇಷ್ಟೊಂದು ಸ್ಪಷ್ಟ ಫೋಟೋಗ್ರಾಫ್ ಯಾವತ್ತಾದರೂ ನೋಡಿದ್ದೀರಾ?

Sun Image: ಯುಎಸ್ ಮೂಲದ ಬಾಹ್ಯಾಕಾಶ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ ಅವರು ಸೂರ್ಯನ ಅತ್ಯಂತ ಸ್ಪಷ್ಟವಾದ ಚಿತ್ರವನ್ನು ಸೆರೆಹಿಡಿದಿದ್ದಾರೆ ಎಂದು ಹೇಳಿದ್ದಾರೆ.

Written by - Nitin Tabib | Last Updated : Dec 7, 2021, 06:27 PM IST
  • ಚಿತ್ರವು ಸಾಮಾನ್ಯ 10 ಮೆಗಾಪಿಕ್ಸೆಲ್ ಕ್ಯಾಮೆರಾದ ಚಿತ್ರಕ್ಕಿಂತ 30 ಪಟ್ಟು ದೊಡ್ಡದಾಗಿದೆ.
  • ನಿಗೂಢವಾದ ಡಾರ್ಕ್ ಸನ್ ಸ್ಪಾಟ್ ಅನ್ನು ಕ್ಲೋಸ್ ಅಪ್ ವ್ಯೂನಲ್ಲಿ ಕಾಣಬಹುದು.
  • ಸೂರ್ಯನ ಮೇಲ್ಮೈಯಲ್ಲಿ ಕಂಡುಬರುವ ಈ ಕಪ್ಪು ಕಲೆಗಳು ವಾಸ್ತವದಲ್ಲಿ ಕಪ್ಪು ಕಲೆಗಳಲ್ಲ.
Sun Image: ಸೂರ್ಯನ ಇಷ್ಟೊಂದು ಸ್ಪಷ್ಟ ಫೋಟೋಗ್ರಾಫ್ ಯಾವತ್ತಾದರೂ ನೋಡಿದ್ದೀರಾ? title=
Andrew McCarthy Sun Picture (File Photo)

ಕ್ಯಾಲಿಫೋರ್ನಿಯಾ: ನೀವು ಎಂದಾದರೂ ಸೂರ್ಯನ (Sun) ಸ್ಪಷ್ಟ ಚಿತ್ರವನ್ನು ನೋಡಿದ್ದೀರಾ? ಯುಎಸ್ ಮೂಲದ ಬಾಹ್ಯಾಕಾಶ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ (Andrew McCarthy Sun Picture) ಅವರು ಸೂರ್ಯನ ಅತ್ಯಂತ ಸ್ಪಷ್ಟವಾದ ಚಿತ್ರವನ್ನು ಸೆರೆಹಿಡಿದಿದ್ದಾರೆ ಎಂದು ಹೇಳಿದ್ದಾರೆ. ಆಂಡ್ರ್ಯೂ ಇದನ್ನು ಮಾಡಲು 150,000 ಕ್ಕೂ ಹೆಚ್ಚು ವಿಭಿನ್ನ ಛಾಯಾಚಿತ್ರಗಳನ್ನು ಬಳಸಿದ್ದಾರೆ. ಈ ಎಲ್ಲ ಚಿತ್ರಗಳನ್ನು ಸೇರಿಸಿ 300 ಮೆಗಾಪಿಕ್ಸೆಲ್‌ನ ಅಂತಿಮ ಚಿತ್ರವನ್ನು ಸಿದ್ಧಪಡಿಸಲಾಗಿದೆ.

ಅತ್ಯಂತ ಕ್ಲೋಸಪ್ ವೀಕ್ಷಣೆಯಲ್ಲಿ ಕಂಡ ನಿಗೂಢ ಸನ್‌ಸ್ಪಾಟ್ (Black Spot)
ಈ ಚಿತ್ರವು ಸಾಮಾನ್ಯ 10 ಮೆಗಾಪಿಕ್ಸೆಲ್ ಕ್ಯಾಮೆರಾದ ಚಿತ್ರಕ್ಕಿಂತ 30 ಪಟ್ಟು ದೊಡ್ಡದಾಗಿದೆ. ನಿಗೂಢವಾದ ಸನ್ ಸ್ಪಾಟ್ (Sun black Spots) ಅನ್ನು ಅದರ ಅತ್ಯಂತ ಸಮೀಪ ನೋಟದಲ್ಲಿ ಕಾಣಬಹುದು. ಇಲ್ಲಿಯವರೆಗೆ ಸೂರ್ಯನ ಮೇಲ್ಮೈಯಲ್ಲಿ ಕಪ್ಪು ಕಲೆಗಳು ಮತ್ತು ಜ್ವಾಲೆಗಳು ಕಂಡುಬರುವ ಕೆಲವು ಚಿತ್ರಗಳು ಮಾತ್ರ ಇವೆ.

ಸೂರ್ಯನ ಮೇಲ್ಮೈಯಲ್ಲಿ ಗೋಚರಿಸುವ ಈ ಕಪ್ಪು ಕಲೆಗಳು ವಾಸ್ತವದಲ್ಲಿ ಕಪ್ಪು ಕಲೆಗಳಾಗಿಲ್ಲ. ಈ ಸ್ಥಳಗಳಿಂದ ಅತ್ಯಂತ ಶಕ್ತಿಯುತ ಕಿರಣಗಳು ಹೊರಹೊಮ್ಮುತ್ತವೆ, ಛಾಯಾಗ್ರಹಣದ ಪ್ರಕ್ರಿಯೆಯಿಂದಾಗಿ ಈ ಕಲೆಗಳು ಕಪ್ಪು ಬಣ್ಣದಲ್ಲಿ (Black Spots) ಕಾಣಿಸಿಕೊಳ್ಳುತ್ತವೆ. ಸೂರ್ಯನ ಇಂತಹ ಚಿತ್ರವನ್ನು ಕ್ಲಿಕ್ಕಿಸುವ ಪ್ರಕ್ರಿಯೆ ತುಂಬಾ ಕ್ಲಿಷ್ಟಕರವಾಗಿದೆ. ಇದರಲ್ಲಿ ಸೂರ್ಯನಿಂದ ಹೊರಸೂಸುವ ಬಲವಾದ ಕಿರಣಗಳಿಂದ ಕುರುಡುತನ ಸಂಭವಿಸುವ ಅಪಾಯವಿರುತ್ತದೆ. ಇದರಿಂದ ಛಾಯಾಗ್ರಾಹಕನನ್ನು ರಕ್ಷಿಸಲು ಎರಡು ಫಿಲ್ಟರ್‌ಗಳಿರುವ ವಿಶೇಷ ದೂರದರ್ಶಕವನ್ನು ಬಳಸಲಾಗುತ್ತದೆ. 

ಇದನ್ನೂ ಓದಿ-Mystery House On Moon:ಚಂದ್ರನ ಮೇಲೆ "ಮಿಸ್ಟರಿ ಹೌಸ್".! ಅಚ್ಚರಿ ತಂದ ಚೈನೀಸ್ ರೋವರ್ ಸೆರೆಹಿಡಿದ ಚಿತ್ರ

ಸೂರ್ಯನಿಂದ ಹೊರಹೊಮ್ಮುವ ಸೌರ ಕಾಸ್ಮಿಕ್ ಕಿರಣಗಳು
ಸೂರ್ಯನಿಂದ ಹೊರಹೊಮ್ಮುವ ಸೌರ ಕಾಸ್ಮಿಕ್ ಕಿರಣಗಳು  ಅಪಾರ ಶಕ್ತಿಯೊಂದಿಗೆ ಕಣಗಳನ್ನು ಒಳಗೊಂಡಿದೆ. ಈ ಕಿರಣಗಳು ಸುಮಾರು 90 ಪ್ರತಿಶತ ಪ್ರೋಟಾನ್‌ಗಳು ಮತ್ತು 10 ಪ್ರತಿಶತ ಹೀಲಿಯಂನ ನ್ಯೂಕ್ಲಿಯಸ್‌ಗಳನ್ನು ಒಳಗೊಂಡಿರುತ್ತವೆ. ಸೌರ ಚಂಡಮಾರುತವು (Solar Flare) ಭೂಮಿಯ ವಾತಾವರಣದೊಂದಿಗೆ ಡಿಕ್ಕಿ ಹೊಡೆದಾಗ ಇದು ಸಂಭವಿಸುತ್ತದೆ.

ಇದನ್ನೂ ಓದಿ-Knowledge Story: ಭೂಮಿಯ ಮೇಲೆ ನೀರು ಎಲ್ಲಿಂದ ಬಂತು ನಿಮಗೆ ಗೊತ್ತಾ? ಇಲ್ಲಿದೆ ವಿಜ್ಞಾನಿಗಳ ಉತ್ತರ

ಆಂಡ್ರ್ಯೂ ಮೆಕಾರ್ಥಿ ಅವರು Instagram ನಲ್ಲಿ @cosmic-background ಹೆಸರಿನ ಖಾತೆಯನ್ನು ಹೊಂದಿದ್ದಾರೆ. ಡೈಲಿ ಮೇಲ್ ಜೊತೆ ಮಾತನಾಡಿದ ಆಂಡ್ರ್ಯೂ, 'ಸೂರ್ಯನ ಇಂತಹ ಚಿತ್ರಗಳನ್ನು (Sun Images) ಸೆರೆಹಿಡಿಯಲು ನಾನು ಯಾವಾಗಲೂ ತುಂಬಾ ಉತ್ಸುಕನಾಗಿದ್ದೇನೆ, ಇದು ನಿಜವಾಗಿಯೂ ಆಸಕ್ತಿದಾಯಕವಾಗಿದೆ ಏಕೆಂದರೆ, ಇದು ಯಾವಾಗಲೂ ಮೊದಲಿಗಿಂತ ವಿಭಿನ್ನವಾಗಿರುತ್ತದೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ-Earth's Atmosphere: ನಿತ್ಯ ಒಮ್ಮೆಯಾದರು ಪರಸ್ಪರ ಎದುರಾಗುತ್ತಿವೆ ಭೂಮಿ ಮತ್ತು ಬಾಹ್ಯಾಕಾಶ, ಈ ವಿಚಿತ್ರ ಘಟನೆಗೆ NASA ಕೂಡ ದಿಗ್ಭ್ರಮೆ ವ್ಯಕ್ತಪಡಸಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News