Corona Vaccine: ಲಸಿಕೆ ಹಾಕಿಸಿಕೊಳ್ಳಬೇಕೇ? Co-WIN App ಮೂಲಕ ಮೊದಲು ಹೆಸರು ನೊಂದಾಯಿಸಿ
Corona Vaccine - ಆರೋಗ್ಯ ಕಾರ್ಯಕರ್ತರಲ್ಲದ ದೇಶದ ನಾಗರಿಕರು ಕೋವಿನ್ ಅಪ್ಲಿಕೇಶನ್ನಲ್ಲಿ ಲಸಿಕೆಗಾಗಿ ಸ್ವಯಂ ನೋಂದಾಯಿಸಿಕೊಳ್ಳಬಹುದು, ಇದಕ್ಕಾಗಿ ಅವರು ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.
ನವದೆಹಲಿ: Corona Vaccine - ಕೇಂದ್ರ ಸರ್ಕಾರದ ತಜ್ಞರ ಸಮಿತಿ ಬ್ರಿಟನ್ ಹಾಗೂ ಸ್ವದೇಶಿ ಕೊರೊನಾ ಲಸಿಕೆಗಳ ತುರ್ತು ಬಳಕೆಗೆ DCGIಗೆ ಶಿಫಾರಸ್ಸು ಮಾಡಿದ ಬಳಿಕ ಇಂದು DCGI ಕೂಡ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ನ ಪ್ರತಿಬಂಧಿತ ತುರ್ತು ಬಳಕೆಗೆ ಹಸಿರು ನಿಶಾನೆ ನೀಡಿದೆ. ಆದರೆ, ಈ ಲಸಿಕೆಯನ್ನು ಹಾಕಿಸಿಕೊಳ್ಳಲು ಆರೋಗ್ಯ ಕಾರ್ಯಕರ್ತರಲ್ಲದ ದೇಶದ ನಾಗರಿಕರು Co-WIN ಆಪ್ ನಲ್ಲಿ ಲಸಿಕೆಗಾಗಿ ಸ್ವಯಂ ಹೆಸರು ನೊಂದಾಯಿಸಿಕೊಲ್ಲಬೇಕು. ಇದಕ್ಕಾಗಿ ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ನಿಂದ ಆಪ್ ಅನ್ನು ತಮ್ಮ ಮೊಬೈಲ್ ನಲ್ಲಿ ಸ್ಥಾಪಿಸಿಕೊಳ್ಳಬೇಕು. ವ್ಯಾಕ್ಸಿನ್ ವಿತರಣೆ ಕಾರ್ಯ ಆರಂಭವಾಗುತ್ತಿದ್ದಂತೆ, ಈ ಆಪ್ ನಲ್ಲಿ ಹೆಸರು ನೊಂದಾಯಿಸಿಕೊಂಡವರಿಗೆ ಆದಷ್ಟು ಬೇಗ ವ್ಯಾಕ್ಸಿನ್ ಸಿಗಲಿದೆ.
ಏನಿದು ಕೊವಿನ್ ಆಪ್?
Co-WIN (COVID-19 Vaccine Intelligence Network), eVIN (Electronic Vaccine Intelligence Network) ಅಪ್ಲಿಕೇಶನ್ ನ ಸುಧಾರಿತ ಆವ್ರುತ್ತಿಯಾಗಿದ್ದು, ಇದನ್ನು ಪ್ಲೇ ಸ್ಟೋರ್ ನಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ ಒತ್ತು ಮೂರು ಹಂತಗಳಲ್ಲಿ ವ್ಯಾಕ್ಸಿನೆಶನ್ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದೆ.
ಇದನ್ನು ಓದಿ- Good News: ಕೋವಿಡ್ ವ್ಯಾಕ್ಸಿನ್ ಹೇಗೆ ವಿತರಣೆ ಮಾಡ್ತಾರೆ ಗೊತ್ತಾ? ಇಂದಿನಿಂದ ಡ್ರೈ ರನ್!
Coronavirus Vaccine) ಸಿಗಲಿದೆ. ರಾಜ್ಯ ಸರ್ಕಾರಗಳು ಈ ಜನರ ಡೇಟಾವನ್ನು ಸಂಗ್ರಹಿಸುತ್ತಿವೆ. ಇದರ ನಂತರ, ಮೂರನೇ ಹಂತದಲ್ಲಿ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ, ಕೋ-ವಿನ್ ಆ್ಯಪ್ ಮೂಲಕ ಸ್ವಯಂ ನೋಂದಣಿ ಪ್ರಕ್ರಿಯೆಯ ನಡೆಸುವ ಅಗತ್ಯತೆ ಇದೆ.
ಇದನ್ನು ಓದಿ- Corona Vaccineಗೆ ಸಂಬಂಧಿಸಿದಂತೆ ಇಂದು ದೊಡ್ಡ ಘೋಷಣೆ ಸಾಧ್ಯತೆ
COVID-19 ಲಸಿಕೆಯ ಸುಲಭ ಟ್ರ್ಯಾಕಿಂಗ್ ಮತ್ತು ನೋಂದಣಿ ಖಚಿತಪಡಿಸಿಕೊಳ್ಳಲು, ಕೋ-ವಿನ್ ಅಪ್ಲಿಕೇಶನ್ ಅನ್ನು ಒಟ್ಟು 5 ಮಾಡ್ಯೂಲ್‌ಗಳಾಗಿ ವಿಂಗಡಿಸಲಾಗಿದೆ, ಮೊದಲನೆಯದು ಆಡಳಿತಾತ್ಮಕ ಮಾಡ್ಯೂಲ್, ಎರಡನೇ ನೋಂದಣಿ ಮಾಡ್ಯೂಲ್, ಮೂರನೇ ವ್ಯಾಕ್ಸಿನೇಷನ್ ಮಾಡ್ಯೂಲ್, ನಾಲ್ಕನೇ ಫಲಾನುಭವಿ ಸ್ವೀಕಾರ ಮಾಡ್ಯೂಲ್ ಮತ್ತು ಐದನೇ ರಿಪೋರ್ಟ್ ಮಾಡ್ಯೂಲ್. ಲಸಿಕೆ ಪಡೆಯಲು ಬಯಸುವವರು ನೋಂದಣಿ ಮಾಡ್ಯೂಲ್ ಅಡಿಯಲ್ಲಿ ವಿವರಗಳನ್ನು ಒದಗಿಸಿ ಸಬ್ಮಿಟ್ ಮಾಡಬೇಕು. ವ್ಯಾಕ್ಸಿನೇಷನ್ ಮಾಡ್ಯೂಲ್ನಲ್ಲಿ, ಅವರ ವಿವರಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಫಲಾನುಭವಿ ಸ್ವೀಕಾರ ಮಾಡ್ಯೂಲ್ ಅವರ ವ್ಯಾಕ್ಸಿನೇಷನ್ ಬಗ್ಗೆ ಪ್ರಮಾಣಪತ್ರವನ್ನು ಕಳುಹಿಸಲಾಗುವುದು.
Co-WIN ನಲ್ಲಿ ಸ್ವಯಂ ಹೆಸರು ನೋಂದಣಿ ಮಾಡುವುದು ಹೇಗೆ?
- ಆರೋಗ್ಯ ಕಾರ್ಯಕರ್ತರಲ್ಲದ ನಾಗರಿಕರು CoWIN ಆಪ್ ನ ನೋಂದಣಿ ವಿಭಾಗಕ್ಕೆ ಭೇಟಿ ನೀಡುವ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. CoWIN ಆಪ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ಈ ಅಪ್ಲಿಕೇಶನ್ ಇನ್ನು ಬಿಡುಗಡೆ ಮಾಡಲಾಗಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನು ಓದಿ- BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO
- ಕೊವಿನ್ ವೆಬ್ ಸೈಟ್ ನಲ್ಲಿ ಸೆಲ್ಫ್ ರಜಿಸ್ಟ್ರೆಶನ್ ಗಾಗಿ ಒಟ್ಟು 12 ಫೋಟೋ ಐಡೆಂಟಿಟಿ ದಾಖಲೆ (Voter ID, Aadhar card, driving license, passport ಹಾಗೂ Pension document)ಗಳಲ್ಲಿ ಒಂದರ ಅವಶ್ಯಕತೆ ಇದೆ.
- ಆನ್ಲೈನ್ ನಲ್ಲಿ ಹೆಸರು ನೊಂದಾಯಿಸಿದ ಬಳಿಕ ಲಾಭಾರ್ಥಿಗಳ ಅಧಿಕೃತ ಮೊಬೈಲ್ ಸಂಖ್ಯೆಗೆ ಕಿರುಸಂದೇಶವೊಂದು ಬರಲಿದೆ. ಈ ಸಂದೇಶದಲ್ಲಿ ದಿನಾಂಕ, ವ್ಯಾಕ್ಸಿನೆಶನ್ ಸಮಯ ಹಾಗೂ ಕೇಂದ್ರದ ಮಾಹಿತಿ ಇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.