BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO

DCGI Approval To Corona Vaccines: ನೂತನ ವರ್ಷದ ಆರಂಭದಲ್ಲಿಯೇ ಒಂದು ಸ್ವದೇಶಿ ಹಾಗೂ ಒಂದು ವಿದೇಶಿ ವ್ಯಾಕ್ಸಿನ್ ನ ತುರ್ತು ಬಳಕೆಗೆ ಹಸಿರು ನಿಶಾನೆ ದೊರೆತಿದೆ.

Written by - Nitin Tabib | Last Updated : Jan 3, 2021, 11:56 AM IST
  • ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ.
  • ಸೀರಮ್ ಇನ್ಸ್ಟಿಟ್ಯೂಟ್ ಶ್ರಮಕ್ಕೆ ದೊರೆತ ಯಶಸ್ಸು ಎಂದ ಅದರ್ ಪೂನಾವಾಲಾ
  • ಉತ್ಸಾಹಭರಿತ ಹೋರಾಟದ ಬಲವರ್ಧನೆಗೆ ನಿರ್ಣಾಯಕ ತಿರುವು ಅಭಿನಂದನೆ ಎಂದ ಪ್ರಧಾನಿ ಮೋದಿ.
BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO  title=
DCGI Approval To Corona Vaccines

ನವದೆಹಲಿ: DCGI Approval To Corona Vaccines: ನೂತನ ವರ್ಷದ ಆರಂಭದಲ್ಲಿಯೇ ಒಂದು ಸ್ವದೇಶಿ ಹಾಗೂ ಒಂದು ವಿದೇಶಿ ವ್ಯಾಕ್ಸಿನ್ ನ ತುರ್ತು ಬಳಕೆಗೆ ಹಸಿರು ನಿಶಾನೆ ದೊರೆತಿದೆ. ಈ ಕುರಿತು ಇಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DGCI) ವಿ. ಜಿ. ಸೋಮಾನಿ, ಜನವರಿ 1 ಹಾಗೂ ಜನವರಿ 2 ರಂದು ವಿಷಯ ತಜ್ಞರ ಸಮೀತಿ ಸಭೆ ನಡೆದಿದ್ದು, ಈ ಸಭೆ ಎರಡು ವ್ಯಾಕ್ಸಿನ್ ಗಳ ತುರ್ತು ಬಳಕೆಗೆ ಅನುಮತಿ ನೀಡಲು ಶಿಫಾರಸ್ಸು ಮಾಡಿದ್ದು, ಈ ಎರಡೂ ವ್ಯಾಕ್ಸಿನ್ ಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ದೇಶದ ಜನರಿಗೆ ಹೊಸವರ್ಷದ ಶುಭಾಷಯ ಹೇಳಿದ ಅದರ್ ಪೂನಾವಾಲಾ 
ಈ ಕುರಿತು ಟ್ವೀಟ್ ಮಾಡಿರುವ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ ಪೂನಾವಾಲಾ, ವ್ಯಾಕ್ಸಿನ್ ನ ದಾಸ್ತಾನು ಪ್ರಕ್ರಿಯೆಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತೆಗೆದುಕೊಂಡ ಶ್ರಮಕ್ಕೆ ಅಂತಿಮವಾಗಿ ಯಶಸ್ಸು ಲಭಿಸಿದೆ. ಕೋವಿಶೀಲ್ಡ್ ಭಾರತದ ಮೊಟ್ಟ ಮೊದಲ ಕೊವಿಡ್-19 ಲಸಿಕೆಗೆ ಅನುಮೋದನೆ ದೊರೆತಿದೆ. ಸುರಕ್ಷಿತ, ಪರಿಣಾಮಕಾರಿ ಹಾಗೂ ಮುಂಬರುವ ವಾರಗಳಲ್ಲಿ ವಿತರಣೆಗೆ ಸಿದ್ಧ" ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?
ಕೊರೊನಾ ವಿರುದ್ಧದ ಹೋರಾಟದಲ್ಲಿ ಇಂದು ಎರಡು ಲಸಿಕೆಗಳ ಸಾರ್ವಜನಿಕ ತುರ್ತು ಬಳಕೆಗೆ DCGI ಅನುಮೋದನೆ ನೀಡಿದೆ. ಇದಕ್ಕೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, "ಉತ್ಸಾಹ ಭರಿತ ಹೋರಾಟದ ಬಲವರ್ಧನೆಗೆ ಮಹತ್ವದ ತಿರುವು ಎಲ್ಲರಿಗೂ ಅಭಿನಂದನೆಗಳು " ಎಂದಿದ್ದಾರೆ.

ಶ್ಲಾಘನೆ ವ್ಯಕ್ತಪಡಿಸಿದ WHO
ಭಾರತದಲ್ಲಿ ಎರಡು ವ್ಯಾಕ್ಸಿನ್ ಗಳ ತುರ್ತು ಬಳಕೆಗೆ ಸಿಕ್ಕಿರುವ DCGI ಅನುಮೋದನೆಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO), COVID-19 ಲಸಿಕೆಗಳಿಗೆ ನೀಡಲಾಗಿರುವ ಅನುಮೋದನೆಯನ್ನು ಸ್ವಾಗತಿಸಿದೆ.

2 ವ್ಯಾಕ್ಸಿನ್ ಗಳ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್
ಇದಕ್ಕೂ ಮೊದಲು ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿಷಯ ತಜ್ಞರ ಸಮಿತಿ ಕಳೆದ 48 ಗಂಟೆಗಳಲ್ಲಿ ಎರಡು ವ್ಯಾಕ್ಸಿನ್ ಗಳಾಗಿರುವ ಕೋವಿಶೀಲ್ಡ್ ಹಾಗೂ ಕೊವಾಕ್ಷಿನ್ ತುರ್ತು ಬಳಕೆಗೆ ಅನುಮತಿ ನೀಡಿ, DCGI ಶಿಫಾರಸ್ಸು ಮಾಡಿತ್ತು.

ಕೊವಾಕ್ಸಿನ್ ಒಂದು ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್ 
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಗೊಳಿಸಿರುವ ಕೊವಾಕ್ಸಿನ್ ಒಂದು ಸಂಪೂರ್ಣ ಸ್ವದೇಶಿ ಲಸಿಕೆಯಾಗಿದೆ. ಇನ್ನೊಂದೆಡೆ ಕೋವಿಶೀಲ್ಡ್ ಅನ್ನು ಆಕ್ಸ್ಫರ್ಡ್-ಅಸ್ಟ್ರಾಜೇನಿಕಾ ಪರಸ್ಪರ ಸಹಯೋಗದಿಂದ ತಯಾರಿಸಿವೆ. ಭಾರತದಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈ ವ್ಯಾಕ್ಸಿನ್ ಅನ್ನು ಉತ್ಪಾದಿಸುತ್ತಿದೆ.

ದೇಶಾದ್ಯಂತ ಶನಿವಾರ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನ
ದೇಶಾದ್ಯಂತ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ದೆಹಲಿಯಲ್ಲಿ ನಡೆದ ಅಣಕು ಲಸಿಕೆ ನೀಡಿಕೆ ಅಭಿಯಾನದ ಮೇಲ್ವಿಚಾರಣೆ ನಡೆಸಲು ಖುದ್ದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಉಪಸ್ಥಿತರಿದ್ದರು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಸಂಕ್ರಾಂತಿಗೂ ಮೊದಲೇ ಲಸಿಕೆ ವಿತರಣೆ ಅಭಿಯಾನ ಆರಂಭಗೊಳ್ಳಲಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News