ಚಂದ್ರಯಾನಕ್ಕೆ ಕ್ಷಣಗಣನೆ: ಚಂದ್ರಯಾನ-3ರ ಉಡಾವಣೆಯ ಪ್ರತಿ ಹಂತದ ಮಾಹಿತಿ
ಚಂದ್ರಯಾನ-3ರ ಉಡಾವಣೆಯ ಕೌಂಟ್ ಡೌನ್ ಗುರುವಾರ, ಜುಲೈ 13ರಂದು ಭಾರತೀಯ ಕಾಲಮಾನ 14:35ಕ್ಕೆ ಆರಂಭಗೊಂಡಿದೆ. ಈ ಉಡಾವಣೆ, ಶುಕ್ರವಾರ, ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ನೆರವೇರಲಿದೆ. ಚಂದ್ರಯಾನ-3ರಂತಹ ಪ್ರಮುಖ ಯೋಜನೆಗೆ ಹಲವು ಮಹತ್ವದ ಸಿದ್ಧತೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಕೆಲವನ್ನು ನಾವು ಇಲ್ಲಿ ಗಮನಿಸೋಣ.
Chandrayaan 3 launch: ಭಾರತದ ಮುಂದಿನ ಚಂದ್ರ ಅನ್ವೇಷಣಾ ಯೋಜನೆ, ಚಂದ್ರಯಾನ-3 ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಇಳಿಯುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಈ ಉಡಾವಣೆಗೆ ಈಗಾಗಲೇ ಕ್ಷಣಗಣನೆ ಆರಂಭಗೊಂಡಿದ್ದು, ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನೆರವೇರಲಿದೆ. ಈ ಯೋಜನೆ ಭಾರತಕ್ಕೆ ಚಂದ್ರನ ಮೇಲಿಳಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ತರಲಿದೆ.
ಚಂದ್ರಯಾನ-3ರ ಉಡಾವಣೆಯ ಕೌಂಟ್ ಡೌನ್ ಗುರುವಾರ, ಜುಲೈ 13ರಂದು ಭಾರತೀಯ ಕಾಲಮಾನ 14:35ಕ್ಕೆ ಆರಂಭಗೊಂಡಿದೆ. ಈ ಉಡಾವಣೆ, ಶುಕ್ರವಾರ, ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ನೆರವೇರಲಿದೆ.
ಕೌಂಟ್ ಡೌನ್ ಸಿದ್ಧತೆ: ಉಡಾವಣೆಗೂ ಮೊದಲಿನ ಅವಶ್ಯಕ ಹಂತಗಳು
ಕೌಂಟ್ ಡೌನ್ ಸಂದರ್ಭದಲ್ಲಿ, ಚಂದ್ರಯಾನ-3ರಂತಹ ಪ್ರಮುಖ ಯೋಜನೆಗೆ ಹಲವು ಮಹತ್ವದ ಸಿದ್ಧತೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಕೆಲವನ್ನು ನಾವು ಇಲ್ಲಿ ಗಮನಿಸೋಣ.
1. ಸಿಸ್ಟಮ್ ಪರಿಶೀಲನೆ: ಇಂಜಿನಿಯರ್‌ಗಳು ಚಂದ್ರಯಾನ-3ರ ಎಲ್ಲ ವ್ಯವಸ್ಥೆಗಳು ಮತ್ತು ಉಪ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ. ಆ ಮೂಲಕ, ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ, ಉಡಾವಣೆಗೆ ಸಿದ್ಧವಾಗಿವೆ ಎಂದು ಖಚಿತಪಡಿಸುತ್ತಾರೆ.
2. ಇಂಧನ ಪೂರೈಕೆ: ಪ್ರೊಪೆಲ್ಲೆಂಟ್ ಟ್ಯಾಂಕ್‌ಗಳಿಗೆ ಅಗತ್ಯವಿರುವಷ್ಟು ಇಂಧನ ಮತ್ತು ಆಕ್ಸಿಡೈಸರ್‌ಗಳನ್ನು ತುಂಬಿಸಲಾಗುತ್ತದೆ. ಉಡಾವಣಾ ವಾಹನ ಯಾವ ರೀತಿಯದು ಎಂಬ ಆಧಾರದಲ್ಲಿ, ಘನ ಅಥವಾ ದ್ರವ ಇಂಧನವನ್ನು ತುಂಬಲಾಗುತ್ತದೆ.
ಇದನ್ನೂ ಓದಿ- ಚಂದ್ರನ ಅಂಗಳಕ್ಕಿಳಿಯಲು ಭಾರತದ ಸಿದ್ಧತೆ: ಬಾಹ್ಯಾಕಾಶ ಯೋಜನೆಗಳ ಸಾಕಾರಕ್ಕೆ ಹೊಸ ಹಾದಿ
3. ಪೇಲೋಡ್ ಅಳವಡಿಕೆ: ಇಲ್ಲಿನ ಸ್ಪೇಸ್‌ಕ್ರಾಫ್ಟ್ ಆಗಿರುವ ಚಂದ್ರಯಾನ-3ರಲ್ಲಿ ಅದರ ಪೇಲೋಡ್‌ಗಳು, ಅದು ಒಯ್ಯಲಿರುವ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಲಾಗುತ್ತದೆ.
4. ಲಾಂಚ್ ವೆಹಿಕಲ್ ಇಂಟಗ್ರೇಶನ್: ಸ್ಪೇಸ್‌ಕ್ರಾಫ್ಟ್ ಅನ್ನು ಉಡಾವಣಾ ವಾಹನಕ್ಕೆ ಅಳವಡಿಸಲಾಗುತ್ತದೆ. ಇಲ್ಲಿ ಉಡಾವಣಾ ವಾಹನ ಎಂದರೆ, ಅದನ್ನು ಬಾಹ್ಯಾಕಾಶಕ್ಕೆ ಒಯ್ಯುವ ರಾಕೆಟ್ ಆಗಿದೆ. ಸ್ಥಿರವಾದ ಉಡಾವಣೆ ನಡೆಸಲು, ಸ್ಪೇಸ್‌ಕ್ರಾಫ್ಟ್ ಅನ್ನು ಅತ್ಯಂತ ಜಾಗರೂಕವಾಗಿ ಜೋಡಿಸಿ, ಅಳವಡಿಸಲಾಗುತ್ತದೆ.
5. ಅಂತಿಮ ಪರೀಕ್ಷೆ: ಯೋಜನೆಯಲ್ಲಿ ಎಲ್ಲ ಸಿಸ್ಟಮ್‌ಗಳು, ಅಂದರೆ ಸಂವಹನ, ವಿದ್ಯುತ್, ನಿಯಂತ್ರಣ, ಸಂಚರಣ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯಾಚರಿಸಿ, ಉಡಾವಣೆಗೆ ಸಿದ್ಧವಾಗಿವೆಯೇ ಎಂದು ತಿಳಿಯಲು ಸಂಪೂರ್ಣ ಪರೀಕ್ಷೆ ನಡೆಸಲಾಗುತ್ತದೆ.
6. ಸುರಕ್ಷತಾ ಪರೀಕ್ಷೆ: ಸುರಕ್ಷತಾ ಕ್ರಮಗಳನ್ನು ಮರು ಪರೀಕ್ಷೆ ನಡೆಸಲಾಗುತ್ತದೆ. ಇದು ತುರ್ತು ವ್ಯವಸ್ಥೆಗಳು ಮತ್ತು ಕ್ರಮಗಳನ್ನು ಒಳಗೊಂಡಿದ್ದು, ಯೋಜನೆ ಮತ್ತು ಸಂಬಂಧಿತ ಸಿಬ್ಬಂದಿಗ ಸುರಕ್ಷತೆಗಾಗಿ ನಡೆಸಲಾಗುತ್ತದೆ.
ಇದನ್ನೂ ಓದಿ- ಚಂದ್ರಯಾನ-3 ಯಶಸ್ಸಿನ ಹಿಂದಿದೆ 54 ನಾರಿಯರ ಶಕ್ತಿ: ದೇಶದ ಕನಸು ನನಸಾಗಿದ ಮಹಿಳೆಯರು ಇವರೇ…
7. ಹವಾಮಾನ ವೀಕ್ಷಣೆ: ಹವಾಮಾನ ಪರಿಸ್ಥಿತಿಯನ್ನು ನಿಯಮಿತವಾಗಿ ಗಮನಿಸುತ್ತಾ, ಹವಾಮಾನ ಉಡಾವಣೆಗೆ ಪೂರಕವಾಗಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ಹವಾಮಾನವೇನಾದರೂ ವ್ಯತಿರಿಕ್ತವಾಗಿದ್ದರೆ, ಆಗ ಉಡಾವಣೆ ವಿಳಂಬವಾಗುವ ಸಾಧ್ಯತೆಗಳಿವೆ. ಗಾಳಿಯ ಪಥದಲ್ಲಿನ ಬದಲಾವಣೆ, ಮೋಡದ ನಿರ್ಮಾಣಗಳು ಉಡಾವಣಾ ನಿಯಮಗಳನ್ನು ಬದಲಾಯಿಸಬಲ್ಲವು.
8. ಯೋಜನಾ ಮಾಹಿತಿ: ಯೋಜನಾ ನಿರ್ವಾಹಕರು ಮತ್ತು ಇಂಜಿನಿಯರ್‌ಗಳು ಎಲ್ಲ ಸಿಸ್ಟಮ್‌ಗಳ ಸಿದ್ಧತೆಯನ್ನು ಪರೀಕ್ಷಿಸಲು ಮಾಹಿತಿ ಚರ್ಚೆ ನಡೆಸುತ್ತಾರೆ. ಇದು ಯಾವುದೇ ಅಂತಿಮ ಹಂತದ ಸಮಸ್ಯೆ ಅಥವಾ ಕಳವಳಗಳನ್ನು ಸರಿಪಡಿಸಲು ನೆರವಾಗುತ್ತದೆ.
9. ಸುರಕ್ಷತಾ ಕ್ರಮ: ಕೌಂಟ್ ಡೌನ್‌ಗಳನ್ನು ಬದಲಾಗಬಹುದಾದ ಹವಾಮಾನ ಅಥವಾ ಅನಿರೀಕ್ಷಿತ ಘಟನೆಗಳಿಂದ ಯೋಜನೆಗೆ ಯಾವುದೇ ತೊಂದರೆಗಳಾಗದಂತೆ ಸುರಕ್ಷತಾ ಕ್ರಮವಾಗಿ ಕೈಗೊಳ್ಳಲಾಗುತ್ತದೆ. ಉಡಾವಣಾ ನಿಯಂತ್ರಕರ ಜೊತೆಗೆ, ರೇಂಜ್ ಸೇಫ್ಟಿ ಅಧಿಕಾರಿಗಳು ಮತ್ತು ಹವಾಮಾನ ಅಧಿಕಾರಿಗಳ ಉಪಸ್ಥಿತಿ ಅವಶ್ಯಕವಾಗಿದೆ. ರೇಂಜ್ ಸೇಫ್ಟಿ ಅಧಿಕಾರಿ ರಾಕೆಟ್ ಉಡಾವಣೆಯ ವೇಳೆಗೆ ಯಾವುದಾದರೂ ಅನಧಿಕೃತ ವಿಮಾನ ವಾಯು ಪ್ರದೇಶವನ್ನು ಪ್ರವೇಶಿಸುತ್ತದೆಯೇ, ಅಥವಾ ಯಾವುದಾದರೂ ಅಸಮರ್ಪಕ ರಾಕೆಟ್ ಕೆಳಗಿಳಿಯುತ್ತದೆಯೋ ಎಂದು ಪರೀಕ್ಷಿಸುತ್ತಾರೆ. ಅದೇ ರೀತಿ ಹವಾಮಾನ ಅಧಿಕಾರಿಗಳು ಹವಾಮಾನ ಬದಲಾವಣೆಯನ್ನು ಗಮನಿಸುತ್ತಾರೆ.
ಯೋಜನೆಯ ಯಶಸ್ವಿ ಮತ್ತು ಸುರಕ್ಷಿತ ಉಡಾವಣೆಗಾಗಿ ಇಂತಹ ಅಂತಿಮ ಹಂತದ ಸಿದ್ಧತೆಗಳು ಅತ್ಯಂತ ಅವಶ್ಯಕವಾಗಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.