ಲಂಡನ್: Brain Stroke Increase In Covid-19 Patients - ಅಧಿಕ ರಕ್ತದೊತ್ತಡ (High BP) ಮತ್ತು ಮಧುಮೇಹದಿಂದ (Diabetes) ಬಳಳುತಿರುವ ಮತ್ತು  ಕೋವಿಡ್ ವಿರುದ್ಧ ಹೋರಾಡುತ್ತಿರುವ ಯುವಕರು ಬ್ರೇನ್ ಸ್ಟ್ರೋಕ್ ಆಪಾಯ ಹೆಚ್ಚಾಗಿದೆ. ಬ್ರೈನ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ (Brain Communication Journal) ಪ್ರಕಟವಾದ ವರದಿಯ ಪ್ರಕಾರ, ಆಸ್ಪತ್ರೆಯಲ್ಲಿ ಕರೋನಾದಿಂದ (Covid-19) ತೀವ್ರವಾಗಿ ಸೋಂಕಿಗೆ ಒಳಗಾದ ಯುವಜನರಲ್ಲಿ ಸ್ಟ್ರೋಕ್ ಪ್ರಕರಣಗಳು ಕಂಡುಬಂದಿವೆ. ಕೋವಿಡ್‌ನ 267 ರೋಗಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ದೃಢಪಟ್ಟಿದೆ. ಸಂಶೋಧನಾ ವರದಿಯ ಪ್ರಕಾರ, ಈ 267 ರೋಗಿಗಳಲ್ಲಿ ಶೇ.50 ರಷ್ಟು ಜನರಲ್ಲಿ ಪಾರ್ಶ್ವವಾಯು ಪ್ರಕರಣಗಳು ಸಾಮಾನ್ಯವಾಗಿವೆ. ಸೋಂಕಿನಿಂದಾಗಿ ಮೆದುಳಿಗೆ ಹಾನಿಯಾಗುವ ಪರೀಕ್ಷೆಯಲ್ಲಿ ಈ ಅಮ್ಸ್ಧ ಕಂಡುಬಂದಿದೆ. ಕೋವಿಡ್ ರೋಗಿಗಳಲ್ಲಿ ವಿವಿಧ ರೀತಿಯ ನರವೈಜ್ಞಾನಿಕ ಮತ್ತು ಮನೋವೈದ್ಯಕೀಯ ಸಮಸ್ಯೆಗಳು ಕಂಡುಬಂದಿವೆ ಎಂದು ಸಂಶೋಧನೆ ಮಾಡಿದ ಇಂಗ್ಲೆಂಡಿನ ಸೌತಾಂಪ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಡಾ.ಆಮಿ ರಾಸ್-ರಸೆಲ್ ಹೇಳಿದ್ದಾರೆ. ಕೆಲವು ರೋಗಿಗಳಲ್ಲಿ ಎರಡೂ ರೀತಿಯ ಸಮಸ್ಯೆಗಳು ಒಟ್ಟಿಗೆ ಕಾಣಿಸಿಕೊಂಡಿವೆ. ಕೊರೊನಾದಿಂದ ಬಳಲುತ್ತಿರುವ ಓರ್ವ ರೋಗಿಯಲ್ಲಿ ನರಮಂಡಲದ ವಿವಿಧ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಇದು ಸಾಬೀತುಪಡಿಸುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-Zydus Cadila 3 ಡೋಸ್ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರದ ಅನುಮತಿ


ಈ ಕುರಿತು ಹೇಳಿಕೆ ನೀಡಿರುವ ಡಾ. ಏಮಿ ರೋಸ್ ರಸ್ಸೆಲ್ ಪ್ರಕಾರ, ಸ್ಟ್ರೋಕ್ ಗೆ ಒಳಗಾದ ರೋಗಿಗಳ ಶರೀರದ ಹಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದ ಬಳಿಕ ರಕ್ತ ನಾಳಗಳಲ್ಲಿ ಬ್ಲಾಕೆಜ್ ಗಮನಿಸಲಾಗಿದೆ. ಭಾರತದಲ್ಲಿಯೂ ಕೂಡ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ರೋಗಿಗಳಲ್ಲಿ ದೀರ್ಘಕಾಲದವರೆಗೆ ಮೆದುಳಿನ ಮೇಲೆ ಕೆಟ್ಟ ಪರಿಣಾಮ ನೋಡಲಾಗಿದೆ. ಇವುಗಳಲ್ಲಿ ಏನ್ಸೇಫೆಲೋಪತಿ, ಕೊಮಾ ಹಾಗೂ ಸ್ಟ್ರೋಕ್ ಪ್ರಕರಣಗಳು ಶಾಮೀಲಾಗಿವೆ. ಅಷ್ಟೇ ಅಲ್ಲ ಕೊರೊನಾ (Covid-19) ರೋಗಿಗಳಲ್ಲಿ ಗುಯಿಲೇನ್ ಬೈರೆ ಸಿಂಡ್ರೋಮ್ ಪ್ರಕರಣಗಳು ಕೂಡ ಬೆಳಕಿಗೆ ಬರುತ್ತಿವೆ. ಈ ಪ್ರಕರಣಗಳೂ ಕೂಡ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಉದಾಹರಣೆಯಾಗಿದೆ. ಗುಯಿಲೇನ್ ಬೈರೆ ಸಿಂಡ್ರೋಮ್ ರೋಗಿಗಳ ಶಾರೀರದ ಇಮ್ಯೂನ್ ಸಿಸ್ಟಂ ಮೆದುಳಿನ ನರಗಳು ಹಾಗೂ ಸ್ಪೈನಲ್ ಕಾರ್ಡ್ ಮೇಲೆ ದಾಳಿ ನಡೆಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-ಭಾರತದಲ್ಲಿ ಮಕ್ಕಳ ಕೋರೋನಾ ವ್ಯಾಕ್ಸಿನ್ ಪರೀಕ್ಷೆಗೆ ಅನುಮತಿ ಕೋರಿದ Johnson&Johnson


ಏನಿದು ಬ್ರೇನ್ ಸ್ಟ್ರೋಕ್?
ಮೆದುಳಿಗೆ ರಕ್ತ ತಲುಪಿಸುವ ನರಗಳಿಗೆ ಹಾನಿಯುಂಟಾದರೆ ಅಥವಾ ಅವುಗಳಲ್ಲಿ ಅಡೆತಡೆ ಉಂಟಾದರೆ, ಮೆದುಳಿನವರೆಗೆ ರಕ್ತ ತಲುಪುವುದಿಲ್ಲ. ಹೀಗಾಗುವುದರಿಂದ ಮೆದುಳಿನವರೆಗೆ ರಕ್ತ ಹಾಗೂ ಆಕ್ಸಿಜನ್ ತಲುಪುವುದಿಲ್ಲ. ಅಮೆರಿಕಾದ ಅತಿ ದೊಡ್ಡ ಆರೋಗ್ಯ ಸಂಸ್ಥೆಯಾಗಿರುವ CDC ಪ್ರಕಾರ, ಮೆದುಳಿಗೆ ಆಕ್ಸಿಜನ್ ತಲುಪದೇ ಇರುವ ಕಾರಣ ಮೆದುಳಿಂದ ಜೀವಕೋಶಗಳು ಕೆಲವೇ ನಿಮಿಷಗಳಲ್ಲಿ ಸತ್ತುಹೋಗಲು ಆರಂಭಿಸುತ್ತವೆ ಮತ್ತು ಈ ರೀತಿ ರೋಗಿ ಬ್ರೇನ್ ಸ್ಟ್ರೋಕ್ ವಿರುದ್ಧ ಹೋರಾಡುತ್ತಾನೆ.


ಇದನ್ನೂ ಓದಿ-Side Effects Of Salt: ನೀವು ಅವಶ್ಯಕತೆಗಿಂತ ಹೆಚ್ಚು ಉಪ್ಪು ಸೇವಿಸುತ್ತಿರುವಿರಿ ಎನ್ನುತ್ತವೆ ಈ 6 ಸಂಕೇತಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ