ನವದೆಹಲಿ: Emergency Use Approval To ZyCoV-D - ಕರೋನಾ ಸಾಂಕ್ರಾಮಿಕ (Covid-19 Pandemic) ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಲಸಿಕಾಕರಣ ಕಾರ್ಯಕ್ರಮಕ್ಕೆ ಇದೀಗ ಮತ್ತೊಂದು ಲಸಿಕೆಯನ್ನು ಸೇರಿಸಲಾಗಿದೆ. ಕೇಂದ್ರ ಸರ್ಕಾರವು ಫಾರ್ಮ ಕಂಪನಿ ಝೈಡಸ್ ಕ್ಯಾಡಿಲಾದ (Zydus Cadila) 3 ಡೋಸ್ ಕೊರೊನಾ ಲಸಿಕೆಯ ತುರ್ತುಬಳಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯ ಹೆಸರು ZyCov-D. ಭಾರತದ ಔಷಧ ನಿಯಂತ್ರಕ ಜನರಲ್ನ (DCGI) ತಜ್ಞರ ಸಮಿತಿಯು ಶುಕ್ರವಾರ ಈ ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಿದೆ. ಈ ಲಸಿಕೆಯ 2 ಡೋಸ್ಗಳ ಪರಿಣಾಮದ ಕುರಿತು ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ.
Zydus Cadila receives approval for Emergency Use Authorization from DCGI for ZyCoV-D today. World’s first & India’s indigenously developed DNA based vaccine for #COVID-19 to be administered in humans including children & adults 12 yrs and above: Ministry of Science & Technology pic.twitter.com/VfL39B8xTJ
— ANI (@ANI) August 20, 2021
"Central Drugs Standard Control Organisation (CDSCO) approves the 1st DNA-based, needle-free #COVID19 vaccine in the world - ‘ZyCov-D’ by Zydus Cadila. This vaccine can be used for individuals aged 12 and above," tweets Union Health Minister Mansukh Mandaviya pic.twitter.com/MEWGeiFNNh
— ANI (@ANI) August 20, 2021
ಜೆನೆರಿಕ್ ಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ (Cadila Health Care Limited) ಜುಲೈ 1 ರಂದು ZyCoV-D ಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. 28 ಸಾವಿರ ಸ್ವಯಂಸೇವಕರ ಮೇಲೆ ನಡೆಸಿದ ಕೊನೆಯ ಹಂತದ ಪ್ರಯೋಗದ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಲಸಿಕೆಯ ಪರಿಣಾಮಕಾರಿತ್ವವು ಶೇ. 66.6 ರಷ್ಟಿದೆ ಎಂದು ತಿಳಿದುಬಂದಿದೆ. ಈ ಲಸಿಕೆ 12 ರಿಂದ 18 ವಯೋಮಾನದವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಪ್ರಾಯೋಗಿಕ ಡೇಟಾವನ್ನು ಇನ್ನೂ ಪ್ಯಾರ್ ರಿವ್ಯೂ ಮಾಡಲಾಗಿಲ್ಲ.
"The approval for world’s first DNA-based ‘ZyCov-D’ vaccine of Zydus Cadila is a testimony to the innovative zeal of India’s scientists. A momentous feat indeed," tweets PM Modi pic.twitter.com/C1mEs0SYgy
— ANI (@ANI) August 20, 2021
ಇದನ್ನೂ ಓದಿ-Coronavirus Vaccine: ಮಹಿಳೆಯರ ಫಲವತ್ತತೆಯ ಮೇಲೆ Corona Vaccine ಪ್ರಭಾವ! ತಜ್ಞರು ಹೇಳುವುದೇನು?
ಜೈಡಸ್ ಕ್ಯಾಡಿಲಾ ಸೇರಿದಂತೆ ಭಾರತದ ಬಳಿ ಇದೀಗ ಐದು ಲಸಿಕೆಗಳು
ತುರ್ತು ಬಳಕೆಯ ನಂತರ ಈ ಲಸಿಕೆ ಸಂಪೂರ್ಣವಾಗಿ ಅನುಮೋದನೆಗೊಂಡರೆ. ಇದು ಭಾರತದ ಎರಡನೇ ಸ್ವದೇಶಿ ಲಸಿಕೆಯಾಗಿದೆ. ಈ ಹಿಂದೆ ಭಾರತ್ ಬಯೋಟೆಕ್ ಮತ್ತು ICMR ಒಟ್ಟಾಗಿ COVAXIN ಎಂಬ ಮೊದಲ ಸ್ವದೇಶಿ ಕರೋನಾ ಲಸಿಕೆಯನ್ನು (Corona Vaccine) ಅಭಿವೃದ್ಧಿಗೊಳಿಸಿವೆ ಎಂಬುದು ಇಲ್ಲಿ ಗಮನಾರ್ಹ. ಈಗಾಗದೆ ದೇಶದಲ್ಲಿ ಒಟ್ಟು 4 ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಕೋವಿಶೀಲ್ಡ್, ಕೋವಾಕ್ಸಿನ್, ಸ್ಪುಟ್ನಿಕ್, ಮಾಡರ್ನಾ. ಇದೀಗ ಜೈಡಸ್ ಲಸಿಕೆ ಈ ಪಟ್ಟಿಗೆ ಸೇರ್ಪಡೆಯಾಗುವ ಮೂಲಕ, ಈ ಸಂಖ್ಯೆ ಐದಕ್ಕೆ ಏರಿಕೆಯಾದಂತಾಗಿದೆ.
ಇದನ್ನೂ ಓದಿ-Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?
ICMR ಹಾಗೂ ಬಯೋಟೆಕ್ನಾಲಾಜಿ ವಿಭಾಗದ ಬೆಂಬಲದೊಂದಿಗೆ ಈ ಲಸಿಕೆ ಅಭಿವೃದ್ಧಿಗೊಂಡಿದೆ
ಇದಕ್ಕೂ ಮೊದಲು ಈ ಕುರಿತು ಹೇಳಿಕೆ ನೀಡಿದ್ದ ಜೈಡಸ್ ಕ್ಯಾಡಿಲಾ, ತನ್ನ ಲಸಿಕೆಗೆ ಅನುಮೋದನೆ ದೊರೆತ ಎರಡು ತಿಂಗಳಲ್ಲಿ ಲಸಿಕೆಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಜೈಕೋವ್-ಡಿ ಲಸಿಕೆಯನ್ನು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬೆಂಬಲದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ. ಈ ಲಸಿಕೆಯನ್ನು ಸಾಮಾನ್ಯ ಫ್ರೀಜರ್ನಲ್ಲಿ 2 ರಿಂದ 8 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂಗ್ರಹಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ