Cyber Fraud: ಗೂಗಲ್, ಪ್ರಸ್ತುತ ಜಗತ್ತಿನ ಆತ್ಮೀಯ ಸ್ನೇಹಿತ. ನಮಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಬೇಕಿದ್ದರೂ ಕ್ಷಣಮಾತ್ರದಲ್ಲಿ ತಿಳಿಸಬಲ್ಲ ಅತ್ಯುತ್ತಮ ತಂತ್ರಜ್ಞಾನ. ಆದರೆ, ಪ್ರತಿಯೊಂದಕ್ಕೂ ಗೂಗಲ್ ಸರ್ಚ್ ಮಾಡುವ ಗೀಳು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು, ಮೋಸದ ಜಾಲಕ್ಕೆ ಬಲಿಯಾಗುವಂತೆ ಮಾಡಬಹುದು ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?  ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಜನರು ಈ ರೀತಿಯ ವಂಚನೆಗೆ ಬಲಿಯಾಗುತ್ತಾರೆ. ಇತ್ತೀಚಿಗೆ ಅಂತಹ ಒಂದು ಪ್ರಕರಣ ಮುನ್ನಲೆಗೆ ಬಂದಿದೆ. ವಾಸ್ತವವಾಗಿ, ಮಹಿಳೆಯೊಬ್ಬರು ಗೂಗಲ್‌ನಲ್ಲಿ ಕಸ್ಟಮರ್ ಕೇರ್ ಸಂಖ್ಯೆಯನ್ನು ತೆಗೆದು ನಂತರ ಆ ಸಂಖ್ಯೆಗೆ ಕರೆ ಮಾಡಿದ್ದಾರೆ. ಕೆಲವು ನಿಮಿಷಗಳ ನಂತರ, ಸೈಬರ್ ವಂಚಕರು ಆ ಮಹಿಳೆಯ ಖಾತೆಯಿಂದ  ಕ್ರೆಡಿಟ್ ಕಾರ್ಡ್‌ನಿಂದ 2 ಲಕ್ಷದ 41 ಸಾವಿರ ರೂಪಾಯಿಗಳನ್ನು ಎಗರಿಸಿದ್ದಾರೆ. ಅಷ್ಟಕ್ಕೂ, ಆ ಮಹಿಳೆ ಮಾಡಿದ ತಪ್ಪೇನು? ಇಂತಹ ಮೋಸಗಳಿಗೆ ಹೇಗೆ ಬಲಿಯಾಗುತ್ತಾರೆ? ಈ ರೀತಿಯ ವಂಚನೆಗಳನ್ನು ತಪ್ಪಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದಿರುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಇಂದಿನ ಡಿಜಿಟಲ್ ಯುಗದಲ್ಲಿ ನಗದು ವಹಿವಾಟಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟುಗಳನ್ನು ಆನ್‌ಲೈನ್ ಮೂಲಕವೇ ಪೂರ್ಣಗೊಳಿಸಲಾಗುತ್ತದೆ. ಆದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಕೇವಲ ಫೋನ್ ಮೂಲಕ ವರ್ಗಾಯಿಸಬಹುದೇ? ವಾಸ್ತವವಾಗಿ,  49 ವರ್ಷದ ಮಹಿಳೆಯೊಬ್ಬರು ಫುಡ್ ಡೆಲಿವರಿ ಆ್ಯಪ್‌ನಲ್ಲಿ ಏನೋ ಆರ್ಡರ್ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಹಲವು ಬಾರಿ ಆನ್‌ಲೈನ್ ಪೇಮೆಂಟ್ ಮಾಡಿದರೂ ಮತ್ತೆ ಮತ್ತೆ ಪಾವತಿ ವಿಫಲವಾಗುತ್ತಿತ್ತು. ಈ ಕಾರಣಕ್ಕಾಗಿ, ಅವರು ಈ ಬಗ್ಗೆ ದೂರು ನೀಡಲು ಗೂಗಲ್‌ನಿಂದ ಆ ಅಂಗಡಿಯ ಫೋನ್ ಸಂಖ್ಯೆಯನ್ನು ತೆಗೆದುಕೊಂಡು ಕರೆ ಮಾಡಿದರು. ಅತ್ತ ಕಡೆಯಿಂದ ಮಹಿಳೆಯ ಕ್ರೆಡಿಟ್ ಕಾರ್ಡ್ ಮಾಹಿತಿ ಕೇಳಿದ್ದ ವ್ಯಕ್ತಿ ಒಟಿಪಿ ಪಡೆದು ಕೆಲವೇ ಸೆಕೆಂಡ್ ಗಳಲ್ಲಿ ಕ್ರೆಡಿಟ್ ಕಾರ್ಡ್‌ನಿಂದ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ಇದರಿಂದ ಅವರ ಖಾತೆಯಿಂದ 2,40,310 ರೂಪಾಯಿ ಕಡಿತವಾಗಿದೆ. 


ಇದನ್ನೂ ಓದಿ- Big Banking Alert: SBI ಸೇರಿದಂತೆ 18 ಬ್ಯಾಂಕುಗಳ ಗ್ರಾಹಕರೇ ಎಚ್ಚರ! ಹೊಸ ರೂಪದಲ್ಲಿ ಮರಳಿ ಬಂದ ಅಪಾಯಕಾರಿ ವೈರಸ್


ಗೂಗಲ್‌ನಲ್ಲಿ ಸಂಖ್ಯೆಗಳನ್ನು ಹುಡುಕುವುದು ಭಾರೀ ನಷ್ಟವನ್ನು ಉಂಟುಮಾಡಬಹುದು!
ನೀವು ಯಾವುದೇ ಕೆಲಸಕ್ಕಾಗಿ ಗೂಗಲ್‌ನಲ್ಲಿ ಯಾವುದೇ ಅಂಗಡಿ ಅಥವಾ ಕಂಪನಿಯ ಗ್ರಾಹಕ ಆರೈಕೆ ಸಂಖ್ಯೆಗಳನ್ನು ಹುಡುಕುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಇದನ್ನು ಮಾಡುವುದರಿಂದ ನೀವು ಯಾವುದೇ ಸಮಯದಲ್ಲಿ ವಂಚನೆಗೆ ಬಲಿಯಾಗಬಹುದು. ಏಕೆಂದರೆ ನೀವು ಗೂಗಲ್‌ನಲ್ಲಿ ಹುಡುಕಾಟದ ಸಮಯದಲ್ಲಿ ನೋಡುವ ಸಂಖ್ಯೆಗಳು ಅಧಿಕೃತವಲ್ಲದಿರಬಹುದು. ಆದ್ದರಿಂದ, ಇಂತಹ ವಂಚನೆಗಳನ್ನು ತಪ್ಪಿಸಲು, ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆಯುವುದು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ನೀವು ನೆನಪಿಡಬೇಕಾದ ಪ್ರಮುಖ ಅಂಶವೆಂದರೆ ಯಾವುದೇ ಬ್ಯಾಂಕ್,  ಕಂಪನಿಗಳು ನಿಮ್ಮ ಬ್ಯಾಂಕ್ ಮಾಹಿತಿಯೊಂದಿಗೆ ಒಟಿಪಿಯನ್ನು ಎಂದಿಗೂ ಕೇಳುವುದಿಲ್ಲ. ಇದರ ಹೊರತಾಗಿ, ಕಂಪನಿ ಅಥವಾ ಅಂಗಡಿಯ ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಸಂಖ್ಯೆಯನ್ನು ತೆಗೆದುಕೊಳ್ಳಿ.


ಇದನ್ನೂ ಓದಿ- YouTube Hacks: ಯೂಟ್ಯೂಬ್ ನೋಡೋವಾಗ ಜಾಹೀರಾತು ಬಾರದಂತೆ ತಡೆಯೋದು ಹೇಗೆ? ಇಲ್ಲಿದೆ ಸುಲಭ ಟ್ರಿಕ್


ಗೂಗಲ್‌ನಲ್ಲಿ  ತಪ್ಪು ಸಂಖ್ಯೆ ಲಭ್ಯವಾಗಲು ಹೇಗೆ ಸಾಧ್ಯ? ಗೂಗಲ್ ಅಂಗಡಿಯ ಬದಲು ಸ್ಕ್ಯಾಮರ್‌ಗಳ ಸಂಖ್ಯೆಯನ್ನು ಹೇಗೆ ನೀಡಿತು ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ. ಗೂಗಲ್‌ನಲ್ಲಿ ಸಜೆಸ್ಟ್ ಮತ್ತು ಎಡಿಟ್ ಎಂಬ ಆಯ್ಕೆ ಹಲವು ಬಾರಿ ಬರುವುದನ್ನು ನೀವೂ ನೋಡಿರಬೇಕು. ಅಲ್ಲಿಂದ ಸ್ಕ್ಯಾಮರ್‌ಗಳು ಗೂಗಲ್‌ನಲ್ಲಿ ಬರುವ ಸಂಖ್ಯೆಯನ್ನು ಎಡಿಟ್ ಮಾಡಿ, ಅವರ ಸಂಖ್ಯೆಯನ್ನು ನಮೂದಿಸುತ್ತಾರೆ. ಈ ನಂಬರ್ ಅನ್ನು ಪಡೆಯುವವರು ಅದು ಅಧಿಕೃತ ಸಂಖ್ಯೆಯೋ ಇಲ್ಲವೋ ಎಂಬುದನ್ನು ಗಮನಿಸದೆ ಮೋಸ ಹೋಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ