Free OTT: ಈ ಅಗ್ಗದ ರೀಚಾರ್ಜ್ ಯೋಜನೆಗಳಲ್ಲಿ ವರ್ಷವಿಡೀ ಫ್ರೀ ಆಗಿ ಸಿಗುತ್ತೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್

Free Netflix and Amazon Prime: ನೀವು ಅಗ್ಗದ ರೀಚಾರ್ಜ್ ರೀಚಾರ್ಜ್ ಯೋಜನೆಗಳ ಜೊತೆಗೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಬಯಸಿದರೆ, ಇಂದು ನಾವು ನಿಮಗಾಗಿ ಅಂತಹ ಯೋಜನೆಗಳನ್ನು ತಂದಿದ್ದೇವೆ. ಇದರಲ್ಲಿ ನೀವು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಅನ್ನು ವರ್ಷವಿಡೀ ಉಚಿತವಾಗಿ ಆನಂದಿಸಬಹುದು.  

Written by - Yashaswini V | Last Updated : Oct 28, 2022, 02:23 PM IST
  • ಇಂದು ನಾವು ನಿಮಗಾಗಿ ಜಿಯೋದ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ತಂದಿದ್ದೇವೆ.
  • ವಾಸ್ತವವಾಗಿ, ಈ ಯೋಜನೆಗಳಲ್ಲಿ, ನೀವು ಇತರ ಯೋಜನೆಗಳಲ್ಲಿ ನೀಡಲಾದ ಅಸ್ತಿತ್ವದಲ್ಲಿರುವ ಪ್ರಯೋಜನಗಳನ್ನು ಮಾತ್ರ ಪಡೆಯುವುದಿಲ್ಲ
  • ಅದರ ಜೊತೆಗೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆಯ ಪ್ರಯೋಜನವನ್ನೂ ಪಡೆಯಲಿದ್ದೀರಿ.
Free OTT: ಈ ಅಗ್ಗದ ರೀಚಾರ್ಜ್ ಯೋಜನೆಗಳಲ್ಲಿ ವರ್ಷವಿಡೀ ಫ್ರೀ ಆಗಿ ಸಿಗುತ್ತೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್  title=
Jio Postpaid Plans

Free Netflix and Amazon Prime: ನಿಮ್ಮ ಅಸ್ತಿತ್ವದಲ್ಲಿರುವ ಮೊಬೈಲ್ ಪ್ಲಾನ್‌ನಲ್ಲಿ ಮನರಂಜನೆ ಸೇರಿದಂತೆ ಇತರ ಪ್ರಯೋಜನಗಳ ಜೊತೆಗೆ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಅನಿಯಮಿತ ಕರೆಯನ್ನು ನೀವು ಬಯಸಿದರೆ, ಇಂದು ನಾವು ನಿಮಗಾಗಿ ಜಿಯೋದ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ತಂದಿದ್ದೇವೆ. ವಾಸ್ತವವಾಗಿ, ಈ ಯೋಜನೆಗಳಲ್ಲಿ, ನೀವು ಇತರ ಯೋಜನೆಗಳಲ್ಲಿ ನೀಡಲಾದ ಅಸ್ತಿತ್ವದಲ್ಲಿರುವ ಪ್ರಯೋಜನಗಳನ್ನು ಮಾತ್ರ ಪಡೆಯುವುದಿಲ್ಲ, ಅದರ ಜೊತೆಗೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆಯ ಪ್ರಯೋಜನವನ್ನೂ ಪಡೆಯಲಿದ್ದೀರಿ.

ಇದು ಅತ್ಯಂತ ಅಗ್ಗದ ಯೋಜನೆ:
ಜಿಯೋದ 399 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು 75GB ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಯೋಜನೆಯು Netflix, Amazon Prime Video ಮತ್ತು Disney + Hotstar ಗೆ ಒಂದು ವರ್ಷದ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ. 

ಇದನ್ನೂ ಓದಿ- ಸಾಕೆಟ್‌ನಲ್ಲಿ ಈ ಡಿವೈಸ್ ಫಿಕ್ಸ್ ಮಾಡಿದ್ರೆ ಕರೆಂಟ್ ಇಲ್ಲದಿದ್ರೂ ವೈ-ಫೈ ಕಾರ್ಯನಿರ್ವಹಿಸುತ್ತೆ!

ಜಿಯೋದ 599 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯ ಪ್ರಯೋಜನಗಳು:
ಈ ಯೋಜನೆಯು ನಿಮಗೆ 100GB ಇಂಟರ್ನೆಟ್, 100 ದೈನಂದಿನ ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಒಂದು ವರ್ಷದ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ. 

ಜಿಯೋದ 799 ರೂ.ಗಳ ಪೋಸ್ಟ್‌ಪೇಯ್ಡ್ ಪ್ಲಾನ್:
ಜಿಯೋದ 799 ರೂ. ಬೆಲೆಯ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ 150GB ಡೇಟಾ ಮತ್ತು 200GB ರೋಲ್‌ಓವರ್ ಡೇಟಾವನ್ನು ನೀಡಲಾಗುತ್ತಿದೆ. ಇದು ಕುಟುಂಬ ಯೋಜನೆಯಾಗಿದ್ದು, ಇದರಲ್ಲಿ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳು, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ಅನಿಯಮಿತ ಎಸ್ಎಂಎಸ್ ಅನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ. 

ಇದನ್ನೂ ಓದಿ- ಚಾರ್ಜರ್ ಬಿಡಿ! ನಿಮ್ಮ ಬಟ್ಟೆಯಿಂದಲೇ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್

ಇದು ಅತ್ಯಂತ ದುಬಾರಿ ಯೋಜನೆ:
ಜಿಯೋದ ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ OTT ಯೋಜನೆಗಳ ಪಟ್ಟಿಯಲ್ಲಿ 999 ರೂ.ಗಳ ಪ್ಲಾನ್ ಅತ್ಯಂತ ದುಬಾರಿ ಯೋಜನೆಯಾಗಿದೆ. 999 ರೂ.ಗಳಿಗೆ ಲಭ್ಯವಿರುವ ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ 200GB ಹೈ ಸ್ಪೀಡ್ ಡೇಟಾ, 500GB ರೋಲ್‌ಓವರ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳು Netflix, Amazon Prime Video ಮತ್ತು Disney + Hotstar ನ ಸದಸ್ಯತ್ವದೊಂದಿಗೆ ಬರುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News