ನವದೆಹಲಿ: Google Play Store ಮೇಲೆ ಆಂಟಿ-ಮಾಲ್ವೆಯರ್ ಸಾಫ್ಟ್ವೆಯರ್ ರೂಪದಲ್ಲಿರುವ 6 ಆಪ್ ಗಳು ಸುಮಾರು 15,000ಕ್ಕೂ ಹೆಚ್ಚು ಅಂಡ್ರಾಯಿಡ್ ಬಳಕೆದಾರರ ಸೂಕ್ಷ್ಮ ಮಾಹಿತಿಯನ್ನು ಕಳ್ಳತನ ಮಾಡಿವೆ. ಈ ಮಾಹಿತಿ ಬಹಿರಂಗಗೊಳ್ಳುತ್ತಲೇ Google ತಾತ್ಕಾಲಿಕವಾಗಿ ಈ ಆಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ತೆಗೆದುಹಾಕಿದೆ. ಚೆಕ್ ಪಾಯಿಂಟ್ ನ ಸಂಶೋಧನೆಯಲ್ಲಿ ಈ ಸಂಗತಿ ಬಹಿರಂಗಗೊಂಡಿದೆ. ಆ್ಯಂಟಿ-ವೈರಸ್ ಅಪ್ಲಿಕೇಶನ್‌ ಸೋಗಿನಲ್ಲಿ ಹ್ಯಾಕರ್‌ಗಳು ಶಾರ್ಕ್‌ಬಾಟ್ ಆಂಡ್ರಾಯ್ಡ್ ಸ್ಟೀಲರ್ ಸಾಫ್ಟ್‌ವೇರ್ ಅನ್ನು ಬಳಸಿದ್ದಾರೆ ಎಂದು ಮೂವರು ಸಂಶೋಧಕರು ಪತ್ತೆಹಚ್ಚಿದ್ದಾರೆ, ಹ್ಯಾಕರ್ಗಳು ಬಳಕೆದಾರರ ಪಾಸ್‌ವರ್ಡ್‌ಗಳು, ಬ್ಯಾಂಕ್ ವಿವರ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದ್ದರು ಎನ್ನಲಾಗಿದೆ. ಪ್ಲೇ ಸ್ಟೋರ್‌ನಲ್ಲಿರುವ ಈ ಎಲ್ಲಾ ಅಪ್ಲಿಕೇಶನ್‌ಗಳನ್ನು 15,000 ಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-POCO Smartphone: ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಕೊಡುಗೆ! ಕೇವಲ 821 ರೂ.ಗೆ 5G ಸ್ಮಾರ್ಟ್‌ಫೋನ್‌

ವರದಿಯಲ್ಲಿ ಹೇಳಿದ್ದೇನು? 
ಚೆಕ್ ಪಾಯಿಂಟ್ ವರದಿಯ ಪ್ರಕಾರ, 'ಈ ಮಾಲ್‌ವೇರ್ ಜಿಯೋಫೆನ್ಸಿಂಗ್ ವೈಶಿಷ್ಟ್ಯ ಮತ್ತು ಪೈರಸಿ ತಂತ್ರಜ್ಞಾನವನ್ನು ಅಳವಡಿಸುತ್ತದೆ, ಇದು ಉಳಿದ ಮಾಲ್‌ವೇರ್‌ಗಳಿಗಿಂತ ಭಿನ್ನವಾಗಿದೆ. ಇದು Domain Generation Algorithm (DGA) ಬಳಸುತ್ತದೆ, ಇದು ಆಂಡ್ರಾಯ್ಡ್ ಮಾಲ್‌ವೇರ್ ಜಗತ್ತಿನಲ್ಲಿ ಅಪರೂಪವಾಗಿ ಬಳಸಲ್ಪಡುತ್ತದೆ'


ಇದನ್ನೂ ಓದಿ-Good News: ಮೊದಲಿಗೆ ಈ ಸ್ಮಾರ್ಟ್ ಫೋನ್ ಗಳಲ್ಲಿ ಬರಲಿದೆ Android 13! ಈ ಪಟ್ಟಿಯನ್ನೊಮ್ಮೆ ಪರಿಶೀಲಿಸಿ

ಗೂಗಲ್ ಪ್ಲೇ ಸ್ಟೋರ್ ನ ಈ ಆಪ್ ಗಳು ಬಳಕೆದಾರರ ವೈಯಕ್ತಿಕ ದತ್ತಾಂಶ ಕಳ್ಳತನ ನಡೆಸಿವೆ
ಆರು ಮಾಲ್‌ವೇರ್ ಅಪ್ಲಿಕೇಶನ್‌ಗಳು ಆಂಟಿ-ವೈರಸ್‌ ರೂಪದಲ್ಲಿ 15,000 ಕ್ಕೂ ಅಧಿಕ ಬಳಕೆದಾರರಿಗೆ ಶಾರ್ಕ್‌ಬಾಟ್ ಆಂಡ್ರಾಯ್ಡ್ ಮಾಲ್‌ವೇರ್‌ನೊಂದಿಗೆ ಸೋಂಕು ತಗುಲಿಸಿವೆ, ಈ ಸೋಂಕು ಕ್ರೆಡೆನ್ಸಿಯಲ್ ಮತ್ತು ಬ್ಯಾಂಕಿಂಗ್ ಗೆ ಸಂಬಂಧಿಸಿದ ಮಾಹಿತಿಯನ್ನು ಕದಿಯುತ್ತದೆ. ಸಂಶೋಧನೆಯ ಸಮಯದಲ್ಲಿ, ಸೋಂಕು ಪೀಡಿತ ಸಾಧನಗಳ ಸುಮಾರು 1,000 IP ವಿಳಾಸಗಳನ್ನು ಪತ್ತೆಹಚ್ಚಲಾಗಿದೆ. ಹೆಚ್ಚಿನ ಸಂಖ್ಯೆಯ ಡಿವೈಸ್ ಗಳು ಇಟಲಿ ಮತ್ತು ಯುನೈಟೆಡ್ ಕಿಂಗ್‌ಡಂಗೆ ಸಂಬಂಧಿಸಿವೆ ಎನ್ನಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.