POCO Smartphone: ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಕೊಡುಗೆ! ಕೇವಲ 821 ರೂ.ಗೆ 5G ಸ್ಮಾರ್ಟ್‌ಫೋನ್‌

ಫ್ಲಿಪ್‌ಕಾರ್ಟ್‌ನಲ್ಲಿ POCO ಕ್ರಿಕೆಟ್ ಕಾರ್ನಿವಲ್ ಮಾರಾಟ ನಡೆಯುತ್ತಿದ್ದು,  ಇದೇ ಭಾನುವಾರ ಕೊನೆಗೊಳ್ಳಲಿದೆ. ನೀವು ಸಹ ಅತ್ಯುತ್ತಮ 5G ಫೋನ್‌ಗಾಗಿ ಹುಡುಕುತ್ತಿದ್ದರೆ POCO M3 Pro 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.  

Written by - Puttaraj K Alur | Last Updated : Apr 9, 2022, 05:12 PM IST
  • ಫ್ಲಿಪ್‌ಕಾರ್ಟ್‌ನಲ್ಲಿ POCO ಕ್ರಿಕೆಟ್ ಕಾರ್ನಿವಲ್ ಸೇಲ್ ನಡೆಯುತ್ತಿದೆ
  • ಈ ಸೇಲ್ ಏಪ್ರಿಲ್ 4ರಿಂದ ಪ್ರಾರಂಭವಾಗಿದ್ದು,ಏಪ್ರಿಲ್ 10ರವರೆಗೆ ನಡೆಯಲಿದೆ
  • POCO M3 Pro 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸುವ ಅವಕಾಶ
POCO Smartphone: ಫ್ಲಿಪ್‌ಕಾರ್ಟ್‌ನಲ್ಲಿ ಅದ್ಭುತ ಕೊಡುಗೆ! ಕೇವಲ 821 ರೂ.ಗೆ 5G ಸ್ಮಾರ್ಟ್‌ಫೋನ್‌  title=
POCO M3 Pro 5G ಸ್ಮಾರ್ಟ್‌ಫೋನ್

ನವದೆಹಲಿ: Flipkartನಲ್ಲಿ POCO ಕ್ರಿಕೆಟ್ ಕಾರ್ನಿವಲ್ ಮಾರಾಟ ನಡೆಯುತ್ತಿದೆ. ಈ ಸೇಲ್ ಏಪ್ರಿಲ್ 4ರಿಂದ ಪ್ರಾರಂಭವಾಗಿದ್ದು, ನಾಳೆ ಅಂದರೆ ಏ.10ರ ಭಾನುವಾರ ಕೊನೆಗೊಳ್ಳಲಿದೆ. ಈ ಮಾರಾಟದಲ್ಲಿ POCOನ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಭಾರತದಲ್ಲಿ 5G ಸೇವೆ ಪ್ರಾರಂಭವಾಗಲಿದ್ದು, ಜನರು ಸಹ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳತ್ತ ಮುಖಮಾಡುತ್ತಿದ್ದಾರೆ. ನೀವು ಸಹ ಉತ್ತಮ 5G ಫೋನ್‌ಗಾಗಿ ಹುಡುಕುತ್ತಿದ್ದರೆ, ಇದು ನಿಮಗೆ ಉಪಯುಕ್ತವಾಗಬಹುದು. ಇಲ್ಲಿ ನೀವು POCO M3 Pro 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಹೇಗೆ ಎಂದು ತಿಳಿದುಕೊಳ್ಳಿರಿ.

POCO M3 Pro 5G ಕೊಡುಗೆ ಮತ್ತು ರಿಯಾಯಿತಿ

POCO M3 Pro 5G 4GB RAM + 64GB ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಫೋನ್‍ನ ಪ್ರಾರಂಭಿಕ ಬೆಲೆ 15,999 ರೂ. ಇದೆ. ಆದರೆ ಫೋನ್ ಸೆಲ್‌ನಲ್ಲಿ 14,549 ರೂ.ಗೆ ಲಭ್ಯವಿದೆ. ಅಂದರೆ ಫೋನ್ ಮೇಲೆ 1,450 ರೂ. ರಿಯಾಯಿತಿ ನೀಡಲಾಗುತ್ತಿದೆ. ಇದರ ನಂತರ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿವೆ. ಇದೆಲ್ಲರ ಪ್ರಯೋಜನ ಪಡೆದುಕೊಂಡರೆ ನಿಮಗೆ ಈ ಫೋನ್ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ.  

ಇದನ್ನೂ ಓದಿ: iPhone 13 Pro Maxನಲ್ಲಿ ಅತಿ ದೊಡ್ಡ ರಿಯಾಯಿತಿ, ಕೇವಲ 22 ಸಾವಿರಕ್ಕೆ ಈ ರೀತಿ ಖರೀದಿಸಿ

POCO M3 Pro 5G ಬ್ಯಾಂಕ್ ಆಫರ್

ನೀವು POCO M3 Pro 5G 4GB ಖರೀದಿಸಲು Axis ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬಳಸಿದರೆ 728 ರೂ.ಗಳ ತ್ವರಿತ ರಿಯಾಯಿತಿ ಪಡೆಯುತ್ತೀರಿ. ಆಗ ಈ ಫೋನ್ ಬೆಲೆ 13,821 ರೂ. ಆಗಲಿದೆ. ಇದರ ನಂತರ ಎಕ್ಸ್ ಚೇಂಜ್ ಆಫರ್ ಕೂಡ ಇದೆ. ಈ ಮಾರಾಟದಲ್ಲಿ ಎಷ್ಟು ವಿನಿಮಯ ಕೊಡುಗೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ.

POCO M3 Pro 5G ಎಕ್ಸ್ ಚೇಂಜ್ ಆಫರ್

POCO M3 Pro 5Gನಲ್ಲಿ 13 ಸಾವಿರ ರೂ.ಗಳ ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ, ನೀವು ಇಷ್ಟು ಮೊತ್ತದ ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿರಬೇಕು ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 13 ಸಾವಿರ ರೂ. ರಿಯಾಯಿತಿ ಲಭ್ಯವಿರುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಬಳಸಿಕೊಂಡರೆ ನಿಮಗೆ ಈ ಫೋನ್ ಕೇವಲ 821 ರೂ.ಗೆ ಲಭಿಸುತ್ತದೆ. ಈಗಲೇ Flipkart ಸೈಟ್‍ಗೆ ಭೇಟಿ ನೀಡಿ ಆಫರ್ ಬಗ್ಗೆ ತಿಳಿದುಕೊಂಡು POCO 5G ಸ್ಮಾರ್ಟ್‌ಫೋನ್ ಖರೀದಿಸಿರಿ.

ಇದನ್ನೂ ಓದಿ: Flipkart: Vivo ಬಣ್ಣ ಬದಲಾಯಿಸುವ ಸ್ಮಾರ್ಟ್‌ಫೋನ್‌ನಲ್ಲಿ ರೂ. 15,000 ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News