Hacker ಗಳ ಅಪಾಯಕಾರಿ ದಾಳಿ! ಈ 13 ಆಪ್ ಗಳನ್ನು ನಿಮ್ಮ ಮೊಬೈಲ್ ನಿಂದ ತಕ್ಷಣವೇ ಡಿಲೀಟ್ ಮಾಡಿ, ಇಲ್ದಿದ್ರೆ ಬ್ಯಾಂಕ್ ಅಕೌಂಟ್ ಖಾಲಿ
Dangerous Smartphone Apps: ಯುಪಿಐ ಮೂಲಕ ಹಣಕಾಸಿನ ವ್ಯವಹಾರ ಹೆಚ್ಚಾದಾಗಿಂದ ಹ್ಯಾಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊಬೈಲ್ ಬಳಕೆದಾರರನ್ನು ಬಲೆಗೆ ಬೀಳಿಸಲು ಹ್ಯಾಕರ್ ಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜನರ ಖಾತೆಗಳನ್ನು ಹ್ಯಾಕ್ ಮಾಡುವ ಮೂಲಕ ಅವರು ಬ್ಯಾಂಕ್ ಖಾತೆಗಳಿಗೆ ಕನ್ನಹಾಕುತ್ತಿದ್ದಾರೆ. ಇದಕ್ಕಾಗಿ ಹ್ಯಾಕರ್ ಗಳು ಕೆಲವೊಮ್ಮೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ಗಳನ್ನು ಕೂಡ ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಬನ್ನಿ ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಿಂದ ತಕ್ಷಣವೇ ಡಿಲೀಟ್ ಮಾಡಬೇಕಾಗಿರುವ ಕೆಲ ಆಪ್ ಗಳ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Dangerous Smartphone Apps that must be Immediately Deleted: ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಬಹುತೇಕ ಎಲ್ಲರ ಬಳಿಯೂ ಕೂಡ ಸ್ಮಾರ್ಟ್ ಫೋನ್ ಇದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರ ಫೋನ್ ನಲ್ಲಿ ವಿಭಿನ್ನ ರೀತಿಯ ಆಪ್ ಗಳಿರುತ್ತವೆ. ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳು ಕೂಡ ಕೆಲವೊಮ್ಮೆ ಹ್ಯಾಕರ್‌ಗಳ ರೇಡಾರ್‌ನಲ್ಲಿರುತ್ತವೆ, ಅಂದರೆ, ಹ್ಯಾಕರ್‌ಗಳು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಹ್ಯಾಕಿಂಗ್‌ನ ಸಾಧನವನ್ನಾಗಿ ಬಳಸುತ್ತಿದ್ದಾರೆ ಮತ್ತು ನಂತರ ಅವುಗಳಿಂದ ಜನರ ಸ್ಮಾರ್ಟ್‌ಫೋನ್‌ಗಳನ್ನು ಸುಲಭವಾಗಿ ಪ್ರವೇಶಿಸುತ್ತಿದ್ದಾರೆ. ಇಂದು ನಾವು ನಿಮಗೆ ಅಂತಹ ಕೆಲ ಅಪಾಯಕಾರಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಅವುಗಳನ್ನು ನೀವು ಎಂದಿಗೂ ಕೂಡ ಡೌನ್‌ಲೋಡ್ ಮಾಡಬಾರದು ಮತ್ತು ಡೌನ್‌ಲೋಡ್ ಮಾಡಿದ್ದರೆ, ಅವುಗಳನ್ನು ತಕ್ಷಣವೇ ನಿಮ್ಮ ಮೊಬೈಲ್ ನಿಂದ ತೆಗೆದುಹಾಕಿ.
ಸ್ಮಾರ್ಟ್‌ಫೋನ್ ಆಪ್ ಗಳು ಅಪಾಯಕಾರಿ ಸಾಬೀತಾಗಬಹುದು
ಸಾವಿರಾರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಬೆದರಿಸುವ ಅಪಾಯಕಾರಿ Android ಮಾಲ್‌ವೇರ್ ಗಳು ಬೆದರಿಕೆಯನ್ನು ಒಡ್ಡುತ್ತಿವೆ. ಇದೇ ಕಾರಣದಿಂದಾಗಿ ಅನೇಕ Google Play Store ಅಪ್ಲಿಕೇಶನ್‌ಗಳನ್ನು ಅಪಾಯಕಾರಿ ಎಂದು ಘೋಷಿಸಲಾಗಿದೆ ಮತ್ತು ಅವುಗಳನ್ನು ಡೌನ್‌ಲೋಡ್ ಮಾಡುವುದರಿಂದ ಬಳಕೆದಾರರ ಬ್ಯಾಂಕ್ ಖಾತೆ ಸಹ ಖಾಲಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-Gmailನಲ್ಲಿನ ಅನಗತ್ಯ ಮೆಸೇಜ್ ಅಟೋಮ್ಯಾಟಿಕ್ ಆಗಿ ಡಿಲೀಟ್ ಆಗಬೇಕೆ? ಹಾಗಾದ್ರೆ ಈ ಟ್ರಿಕ್ ಬಳಸಿ
ಈ ಆಪ್‌ಗಳನ್ನು ತಕ್ಷಣವೆ ನಿಮ್ಮ ಮೊಬೈಲ್ ನಿಂದ ಅಳಿಸಿ ಹಾಕಿ
ನೀವು ಎಂದಿಗೂ ಡೌನ್‌ಲೋಡ್ ಮಾಡಬಾರದ ಒಟ್ಟು 13 ಅಪ್ಲಿಕೇಶನ್‌ಗಳ ಕುರಿತು ಇಂದು ನಾವು ನಿಮಗೆ ಮಾಹಿತಯನ್ನು ನೀಡುತ್ತಿದ್ದು, ನಿಮ್ಮ ಫೋನ್‌ನಲ್ಲಿ ಈಗಾಗಲೇ ನೀವು ಈ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ, ಅವುಗಳನ್ನು ತಕ್ಷಣವೇ ಡಿಲೀಟ್ ಮಾಡಿ. Junk Cleaner, EasyCleaner, Power Doctor, Super Clean, Full Clean -Clean Cache, Fingertip Cleaner, Quick Cleaner, Keep Clean, Windy Clean, Carpet Clean, Cool Clean, Strong Clean ಹಾಗೂ Meteor Clean ಈ ಆಪ್ ಗಳನ್ನು ಎಂದಿಗೂ ನೀವು ಡೌನ್ ಲೋಡ್ ಮಾಡಬಾರದು ಮತ್ತು ಈಗಾಗಲೇ ಅವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿದ್ದರೆ, ತಕ್ಷಣವೇ ನೀವು ಅವುಗಳನ್ನು ಅಳಿಸಿ ಹಾಕುವುದು ಉತ್ತಮ ಮಾರ್ಗವಾಗಿದೆ.
ಇದನ್ನೂ ಓದಿ-ವರ್ಷದವರೆಗೆ Netflix, Amazon Prime, Disney+Hotstar ಫ್ರೀ ಚಂದಾದಾರಿಕೆಗಾಗಿ ಈ ಕೆಲಸ ಮಾಡಿ
ಹ್ಯಾಕಿಂಗ್ ನಿಂದ ಪಾರಾಗಲು ತಕ್ಷಣವೆ ಈ ಕೆಲಸ ಮಾಡಿ
ಮೇಲಿನ ಯಾವುದೇ ಅಪ್ಲಿಕೇಶನ್‌ಗಳನ್ನು ಈಗಾಗಲೇ ತಮ್ಮ ಅಂಡ್ರಾಯಿಡ್ ಮೊಬೈಲ್ ನಲ್ಲಿ ಹೊಂದಿರುವ ಸ್ಮಾರ್ಟ್ ಫೋನ್ ಬಳಕೆದಾರರು, ಸಾಧ್ಯವಾದಷ್ಟು ಬೇಗ ಅವುಗಳನ್ನು ತೆಗೆದುಹಾಕಬೇಕೆಂದು ಸಲಹೆ ನೀಡಲಾಗುತ್ತದೆ. ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪಾಸ್‌ವರ್ಡ್ ಅನ್ನು ಸಹ ಬದಲಾಯಿಸಿಕೊಳ್ಳಿ,
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.