Gmailನಲ್ಲಿನ ಅನಗತ್ಯ ಮೆಸೇಜ್‌ ಅಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗಬೇಕೆ? ಹಾಗಾದ್ರೆ ಈ ಟ್ರಿಕ್‌ ಬಳಸಿ

ಯಾವುದೇ ವೆರಿಫೈಡ್‌ ಅಪ್ಲಿಕೇಶನ್‌ಗೆ ಲಾಗಿನ್‌ ಆಗಬೇಕಾದರೂ ಈಗಿನ ದಿನಗಳಲ್ಲಿ ನಮ್ಮ ಇ-ಮೇಲ್‌ ಐಡಿಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಜಿ-ಮೇಲ್‌ನ್ನು ಬಳಸಿದಾಗ, ನಮಗೆ ಹಲವಾರು ರೀತಿಯ ಮೇಲ್‌ಗಳು ಅಲ್ಲಿಂದ ಬರುತ್ತವೆ. ಕೆಲಸದ ಮೇಲ್‌ಗಳ ಹೊರತಾಗಿ, ಸ್ಪ್ಯಾಮ್ ಮೇಲ್‌ಗಳು ಜಿ-ಮೇಲ್‌ನಲ್ಲಿ ಸಾಕಷ್ಟು ಸ್ಪೇಸ್‌ನ್ನು ತೆಗೆದುಕೊಳ್ಳುತ್ತವೆ. 

Written by - Bhavishya Shetty | Last Updated : Aug 2, 2022, 12:23 PM IST
  • ಜಿಮೇಲ್‌ನಿಂದ ಅನಗತ್ಯ ಮೆಸೇಜ್‌ಗಳು ಡಿಲೀಟ್‌ ಮಾಡಲು ಇಲ್ಲಿದೆ ಟ್ರಿಕ್ಸ್‌
  • ಸ್ಪ್ಯಾಮ್ ಮೇಲ್‌ಗಳು ಜಿ-ಮೇಲ್‌ನಲ್ಲಿ ಸಾಕಷ್ಟು ಸ್ಪೇಸ್‌ನ್ನು ತೆಗೆದುಕೊಳ್ಳುತ್ತವೆ
  • ಫಿಲ್ಟರ್‌ ಫಾರ್‌ ಅಟೋ ಡಿಲೀಟ್‌ ಫೀಚರ್‌ ನಿಮಗೆ ಸಹಾಯ ಮಾಡುತ್ತದೆ
Gmailನಲ್ಲಿನ ಅನಗತ್ಯ ಮೆಸೇಜ್‌ ಅಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗಬೇಕೆ? ಹಾಗಾದ್ರೆ ಈ ಟ್ರಿಕ್‌ ಬಳಸಿ  title=
Gmail

ಜಿ-ಮೇಲ್‌ (Gmail) ಎಂಬುದು ಪ್ರಸ್ತುತ ಯುಗದಲ್ಲಿ ಜನರನ್ನು ಆಕರ್ಷಿಸದ ಅತ್ಯಂತ ಜನಪ್ರಿಯ ವೇದಿಕೆಯಾಗಿದೆ. ಆದರೆ ಇದರಲ್ಲಿ ಅನೇಕ ಅನಗತ್ಯ ಮೆಸೇಜ್‌ಗಳು ತುಂಬುತ್ತವೆ. ಇದನ್ನು ಕಂಡಾಗ ಇಷ್ಟೊಂದನ್ನು ಒಂದು ಬಾರಿ ಹೇಗಪ್ಪಾ ಡಿಲೀಟ್‌ ಮಾಡೋದು ಎಂದು ಭಾವಿಸೋದು ಸಹಜ. ಹೀಗಿರುವಾಗ ನಿಮಗೊಂದು ಸಲಹೆ ನೀಡುತ್ತೇವೆ. ಆ ಸಲಹೆ ಮೂಲಕ ಅಟೋಮ್ಯಾಟಿಕ್‌ ಆಗಿ ನಿಮ್ಮ ಜಿಮೇಲ್‌ನಿಂದ ಅನಗತ್ಯ ಮೆಸೇಜ್‌ಗಳು ಡಿಲೀಟ್‌ ಆಗುತ್ತವೆ. 

ಇದನ್ನೂ ಓದಿ: IND vs WI T20: ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ಹಣಾಹಣಿ: ಪಂದ್ಯದ ಸಮಯದಲ್ಲಿ ಭಾರೀ ಬದಲಾವಣೆ!

ಯಾವುದೇ ವೆರಿಫೈಡ್‌ ಅಪ್ಲಿಕೇಶನ್‌ಗೆ ಲಾಗಿನ್‌ ಆಗಬೇಕಾದರೂ ಈಗಿನ ದಿನಗಳಲ್ಲಿ ನಮ್ಮ ಇ-ಮೇಲ್‌ ಐಡಿಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಜಿ-ಮೇಲ್‌ನ್ನು ಬಳಸಿದಾಗ, ನಮಗೆ ಹಲವಾರು ರೀತಿಯ ಮೇಲ್‌ಗಳು ಅಲ್ಲಿಂದ ಬರುತ್ತವೆ. ಕೆಲಸದ ಮೇಲ್‌ಗಳ ಹೊರತಾಗಿ, ಸ್ಪ್ಯಾಮ್ ಮೇಲ್‌ಗಳು ಜಿ-ಮೇಲ್‌ನಲ್ಲಿ ಸಾಕಷ್ಟು ಸ್ಪೇಸ್‌ನ್ನು ತೆಗೆದುಕೊಳ್ಳುತ್ತವೆ. ಅಷ್ಟೇ ಅಲ್ಲದೆ, ಕೆಲವೊಂದು ಬಾರಿ ಅಗತ್ಯ ಮತ್ತು ಅನಗತ್ಯ ಮೆಸೇಜ್‌ಗಳು ಯಾವುವು ಎಂಬ ಗೊಂದಲ ಕೂಡ ಮೂಡುತ್ತವೆ. ಹೀಗಾಗಿ ಜಿ-ಮೇಲ್‌ನ ಈ ಸ್ಪ್ಯಾಮ್ ಮೇಲ್‌ಗಳನ್ನು ಸ್ವಯಂಚಾಲಿತವಾಗಿ ಅಳಿಸುವ ಟ್ರಿಕ್‌ನ್ನು ಇಂದು ನಾವು ನಿಮಗೆ ಹೇಳುತ್ತೇವೆ.

ಇದು ಹೇಗೆ ಸಾಧ್ಯ ಎಂದು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅದರ ಪ್ರಕ್ರಿಯೆಯ ಬಗ್ಗೆ ಮುಂದೆ ಓದಿ. ಅನಗತ್ಯ ಮೇಲ್‌ಗಳನ್ನು ಸ್ವಯಂಚಾಲಿತವಾಗಿ ಅಳಿಸಲು, ಜಿ-ಮೇಲ್‌ ನಿಮಗೆ ವಿಶೇಷ ವೈಶಿಷ್ಟ್ಯವನ್ನು ನೀಡುತ್ತದೆ. ಅದುವೇ ಫಿಲ್ಟರ್‌ ಫಾರ್‌ ಅಟೋ ಡಿಲೀಟ್‌ ( Filters for auto-delete). ಈ ಫೀಚರ್‌ನ್ನು ಹೇಗೆ ಬಳಸಬೇಕು ಎಂಬುದನ್ನು ಮುಂದೆ ತಿಳಿಯೋಣ.

ಇದನ್ನೂ ಓದಿ: ವರ್ಷದವರೆಗೆ Netflix, Amazon Prime, Disney+Hotstar ಫ್ರೀ ಚಂದಾದಾರಿಕೆಗಾಗಿ ಈ ಕೆಲಸ ಮಾಡಿ

ಮೊದಲು ನಿಮ್ಮ ಜಿಮೇಲ್ ಖಾತೆಯನ್ನು ತೆರೆಯಿರಿ. ಈಗ ಸರ್ಚ್‌ (Search) ಪಟ್ಟಿಯಲ್ಲಿ ನೀವು 'ಫಿಲ್ಟರ್' ಆಯ್ಕೆಯನ್ನು ನೋಡಬಹುದು. ಒಂದು ವೇಳೆ ಕಂಡುಬರದಿದ್ದರೆ ಚಿಂತಿಸಬೇಕಾಗಿಲ್ಲ. ಈ ಸಂದರ್ಭದಲ್ಲಿ, 'ಫಿಲ್ಟರ್ಸ್‌ ಆಂಡ್‌ ಬ್ಲಾಕ್ಡ್‌ ಅಡ್ರೆಸಸ್‌ʼ (Filters and blocked addresses) ಟ್ಯಾಬ್‌ನ ಅಡಿಯಲ್ಲಿ ಸೆಟ್ಟಿಂಗ್‌ಗಳಲ್ಲಿ ಈ ಆಯ್ಕೆಯನ್ನು ನೀವು ಕಾಣಬಹುದು. ಇದರಲ್ಲಿ ನೀವು 'ಕ್ರಿಯೇಟ್‌ ಫಿಲ್ಟರ್' ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. 'ಫಿಲ್ಟರ್' ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಮೇಲ್ಭಾಗದಲ್ಲಿ ʼfrom' ಎಂದು ಬರೆಯುವುದನ್ನು ನೀವು ನೋಡುತ್ತೀರಿ. ನೀವು ಅಳಿಸಲು ಬಯಸುವ ಇಮೇಲ್‌ಗಳ ಹೆಸರು ಅಥವಾ ಇಮೇಲ್ ವಿಳಾಸವನ್ನು ಇಲ್ಲಿ ಟೈಪ್ ಮಾಡಿ. ಈ ರೀತಿಯಾಗಿ, ಮೇಲ್ ವಿಳಾಸಗಳನ್ನು ಆಯ್ಕೆ ಮಾಡಿ. ಬಳಿಕ ಆ ಜಿ-ಮೇಲ್‌ಗಳಿಂದ ನಿಮಗೆ ಮೆಸೇಜ್‌ಗಳು ಬರುವುದಿಲ್ಲ. ಬಂದರೂ ಸಹ ಅದು ಅಟೋಮ್ಯಾಟಿಕ್‌ ಆಗಿ ಡಿಲೀಟ್‌ ಆಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News