Solar Fan: ಈ ಬಿರು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು ಬಂದಿದೆ ಸೋಲಾರ್ ಫ್ಯಾನ್, ಬೆಲೆ ಕೂಡ ಕಡಿಮೆ
Solar Fan: ಬಿರು ಬಿಸಿಲಿನ ಬೇಗೆಯಿಂದಾಗಿ ಬೇಸತ್ತಿದ್ದೀರಾ? ಈ ಬಿರು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು ಬಂದಿದೆ ಸೋಲಾರ್ ಫ್ಯಾನ್. ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಈ ಫ್ಯಾನ್ ವಿದ್ಯುತ್ ಇಲ್ಲದೆಯೂ ಕಾರ್ಯನಿರ್ವಹಿಸಬಲ್ಲದು.
DC Portable Solar Fan: ಬೇಸಿಗೆಯಲ್ಲಿ ಕರೆಂಟ್ ಇಲ್ಲ ಅಂದ್ರೂ ಯೋಚಿಸಬೇಕಿಲ್ಲ. ಈ ಫ್ಯಾನ್ ವಿದ್ಯುತ್ ಇಲ್ಲದೆಯೇ ಕಾರ್ಯನಿರ್ವಹಿಸಬಲ್ಲ ಫ್ಯಾನ್ ಆಗಿದೆ. ಸಾಮಾನ್ಯವಾಗಿ ನೀವು ಸೋಲಾರ್ ವಾಟರ್ ಹೀಟರ್, ಸೋಲಾರ್ ಪ್ಯಾನಲ್ ಬಗ್ಗೆ ಕೇಳಿರಬಹುದು. ಆದರೆ, ಸೋಲಾರ್ ಫ್ಯಾನ್ ಬಗ್ಗೆ ಎಂದಾದರೂ ಕೇಳಿದ್ದೀರಾ... ಈ ಲೇಖನದಲ್ಲಿ ನಾವು ನಿಮಗೆ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಸೋಲಾರ್ ಫ್ಯಾನ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ ಸೌರಶಕ್ತಿ ಚಾಲಿತ ಫ್ಯಾನ್ ಚಲಾಯಿಸಲು ವಿದ್ಯುತ್ ಶಕ್ತಿಯ ಅಗತ್ಯವಿಲ್ಲ :
ಈ ಸೌರಶಕ್ತಿ ಚಾಲಿತ ಫ್ಯಾನ್ ಚಲಾಯಿಸಲು ವಿದ್ಯುತ್ ಶಕ್ತಿಯ ಅಗತ್ಯವಿಲ್ಲ. ಆದರೆ, ಅಗತ್ಯವಿದ್ದಾಗ ನೀವು ಸೋಲಾರ್ ಫ್ಯಾನ್‌ನ ಬ್ಯಾಟರಿಯನ್ನು ವಿದ್ಯುಚ್ಛಕ್ತಿಯನ್ನು ಬಳಸಿ ಚಾರ್ಜ್ ಮಾಡಬಹುದಾಗಿದ್ದು, ಇದು ಕೆಲವೇ ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ. ಮಾತ್ರವಲ್ಲ ಈ ಸೋಲಾರ್ ಫ್ಯಾನ್ ಅನ್ನು ನೀವು ಎಲ್ಲಿ ಬೇಕಾದರೂ ಬಹಳ ಸುಲಭವಾಗಿ ಅಳವಡಿಸಬಹುದಾಗಿದೆ. ಅರ್ಥಾತ್, ತುಂಬಾ ಕಡಿಮೆ ಜಾಗದಲ್ಲಿಯೂ ಕೂಡ ಸುಲಭವಾಗಿ ಹೊಂದಿಸಬಹುದಾಗಿದೆ. ಅಷ್ಟೇ ಅಲ್ಲ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಇದರ ವೇಗವನ್ನು ಹೊಂದಿಸಲು ಬಟನ್ ಸೌಲಭ್ಯವನ್ನೂ ಕೂಡ ಒದಗಿಸಲಾಗಿದೆ.
ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ಬೆಲೆ:
ನೀವು ವಿದ್ಯುತ್ ಗೊಡವೆ ಇಲ್ಲದೆ ಚಲಾಯಿಸಬಲ್ಲ ಸೋಲಾರ್ ಫ್ಯಾನ್ ಎಂದರೆ ಸೌರಶಕ್ತಿ ಚಾಲಿತ ಫ್ಯಾನ್ ಖರೀದಿಸಲು ಬಯಸಿದರೆ ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ನಿಮಗೆ ಉತ್ತಮ ಆಯ್ಕೆ ಎಂದು ಸಾಬೀತು ಪಡಿಸಬಹುದು. ಈ ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ತುಂಬಾ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದ್ದು ಇದರ ಬೆಲೆ ಕೇವಲ 294 ರೂಪಾಯಿಗಳು ಮಾತ್ರ ಎಂಬುದು ಇನ್ನಷ್ಟು ವಿಶೇಷವಾಗಿದೆ. ಎಂದರೆ ಈ ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ಅನ್ನು ಪ್ರತಿಯೊಬ್ಬರೂ ಖರೀದಿಸಬಹುದಾಗಿದ್ದು, ಇದು ಎಲ್ಲರಿಗೂ ತುಂಬಾ ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಫ್ಯಾನ್ ಆಗಿದೆ.
ಇದನ್ನೂ ಓದಿ- ಮನೆಯ ಛಾವಣಿಯ ಮೇಲೆ ಈ ಡಿವೈಸ್ ಸ್ಥಾಪಿಸಿ, ಜೀವನಪರ್ಯಂತ ಪಡೆಯಿರಿ ಫ್ರೀ ವಿದ್ಯುತ್
ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ವೈಶಿಷ್ಟ್ಯಗಳು:
ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ 12 ವೋಲ್ಟ್ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ನೇರವಾಗಿ ಸೌರ ಫಲಕಗಳಿಗೆ ಸಂಪರ್ಕಿಸಬಹುದಾಗಿದೆ. ಇದರ ಮತ್ತೊಂದು ವೈಶಿಷ್ಯವೆಂದರೆ ಈ ಫ್ಯಾನ್ ಅನ್ನು ನೀವು ಮನೆಯಲ್ಲಿ ಮಾತ್ರವಲ್ಲದೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರು, ಬೈಕ್, ಜೆಸಿಬಿ, ಟ್ಯಾಕ್ಸಿ ಅಥವಾ ಇನ್ನಾವುದೇ ಸ್ಥಳದಲ್ಲಿ ಸ್ಥಾಪಿಸಬಹುದು ಎಂದು ಹೇಳಲಾಗಿದೆ.
ರಿಚಾರ್ಜೆಬಲ್ ಬ್ಯಾಟರಿ ಫ್ಯಾನ್:
ಈ ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್ ಚಲಾಯಿಸಲು ವಿದ್ಯುತ್ ಅಗತ್ಯವಿರುವುದಿಲ್ಲ. ಇದು ವಿದ್ಯುತ್ ಇಲ್ಲದಿದ್ದಾಗಲೂ ಕೂಡ ತಂಪಾದ ಹವಾ ಒದಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್‌ನಲ್ಲಿ ಮೂರು ಬ್ಲೇಡ್‌ಗಳನ್ನು ಅಳವಡಿಸಲಾಗಿದೆ. ಈ ಬ್ಲೇಡ್‌ಗಳು 1400 ಆರ್‌ಪಿಎಂನಲ್ಲಿ ಸುತ್ತುತ್ತವೆ ಎನ್ನಲಾಗಿದೆ.
ಇದನ್ನೂ ಓದಿ- ಕರೆಂಟ್ ಹೋದರೂ ನಡೆಯುತ್ತದೆ ಈ ಫ್ಯಾನ್ ! ಅಗ್ಗದ ಬೆಲೆಯಲ್ಲಿ ತಂಪು ಗಾಳಿ ನೀಡುತ್ತದೆ Pocket Fan
ಡಿಸಿ ಪೋರ್ಟಬಲ್ ಸೋಲಾರ್ ಫ್ಯಾನ್‌ನ ಬುಲೆಟ್ ಅನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗಿದ್ದು ಇದರಿಂದ ಫ್ಯಾನ್‌ನಲ್ಲಿ ಸುಮಾರು 4 ರಿಂದ 5 ಗಂಟೆಗಳ ಕಾಲ ಸುಲಭ ಬ್ಯಾಕಪ್ ಲಭ್ಯವಾಗಲಿದೆ. ಎಂದರೆ ವಿದ್ಯುತ್ ಇಲ್ಲದೆ, ಇದು ನಾಲ್ಕರಿಂದ ಐದು ಗಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.