ಕರೆಂಟ್ ಹೋದರೂ ನಡೆಯುತ್ತದೆ ಈ ಫ್ಯಾನ್ ! ಅಗ್ಗದ ಬೆಲೆಯಲ್ಲಿ ತಂಪು ಗಾಳಿ ನೀಡುತ್ತದೆ Pocket Fan

Pocket Fan features and Price :  ಇಂಡೋರ್  ಔಟ್ ಡೋರ್ ಎರಡೂ ಕಡೆ ಈ ಫ್ಯಾನ್ ಅನ್ನು ಆರಾಮಾಗಿ ಬಳಸಬಹುದು. ಇದನ್ನು ಚಾರ್ಜ್ ಮಾಡಲು USB ಪೋರ್ಟ್ ಕೂಡಾ ನೀಡಲಾಗುತ್ತದೆ. 

Written by - Ranjitha R K | Last Updated : Apr 28, 2023, 10:12 AM IST
  • ಉತ್ತರದಿಂದ ದಕ್ಷಿಣದವರೆಗೆ ಬಿಸಿಲ ಧಗೆ ಹೆಚ್ಚುತ್ತಿದೆ.
  • ಬಿರು ಬೇಸಿಗೆಯಿಂದ ಜನ ಕಂಗಾಲಾಗಿದ್ದಾರೆ.
  • ಮಾರುಕಟ್ಟೆಗೆ ಬಂದಿದೆ ಪಾಕೆಟ್ ಫ್ಯಾನ್
ಕರೆಂಟ್ ಹೋದರೂ ನಡೆಯುತ್ತದೆ ಈ ಫ್ಯಾನ್ ! ಅಗ್ಗದ ಬೆಲೆಯಲ್ಲಿ ತಂಪು ಗಾಳಿ ನೀಡುತ್ತದೆ Pocket Fan title=

ಬೆಂಗಳೂರು : ಬೇಸಿಗೆ ಕಾಲಿಟ್ಟಿದೆ. ಉತ್ತರದಿಂದ ದಕ್ಷಿಣದವರೆಗೆ ಎಲ್ಲಾ ರಾಜ್ಯಗಳ ಜನರು ಸೂರ್ಯನ ಶಾಖದಿಂದ ಪರಿತಪಿಸುವಂತಾಗಿದೆ.   ಬಿರು ಬೇಸಿಗೆಯಿಂದ ಜನ ಕಂಗಾಲಾಗಿದ್ದಾರೆ. ಮನೆಯಲ್ಲಿ ಅಥವಾ ಕಚೇರಿಯಲ್ಲೇ ಇದ್ದಾಗ ಫ್ಯಾನ್, ಕೂಲರ್, ಎಸಿ ಬಳಸಿ ತಂಪು ಗಾಳಿ ಪಡೆಯಬಹುದು. ಆದರೆ ಮನೆಯಿಂದ ಹೊರ ಹೋದಾಗ ಬಿಸಿಲ ಝಳಕ್ಕೆ ತತ್ತರಿಸಿ ಹೋಗಬೇಕಾಗುತ್ತದೆ. ಹೋದ ಕಡೆಗೆಲ್ಲಾ ಎಸಿ ಕೂಲರ್ ತೆಗೆದು ಕೊಂಡು ಹೋಗುವುದು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಜನ ಕೂಡಾ ಶಾಲ್, ಕ್ಯಾಪ್, ಛತ್ರಿ ಹೀಗೆ ಸೂರ್ಯನ ಶಾಖದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕೋ ಆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇದೀಗ ಮಾರುಕಟ್ಟೆಗೆ ಪುಟ್ಟ ಅಥವಾ ಮಿನಿ ಫ್ಯಾನ್ ಗಳು ಕಾಲಿಟ್ಟಿವೆ. ಇವುಗಳನ್ನು ನಾವು ಹೋದ ಕಡೆಗೆಲ್ಲಾ ತೆಗೆದುಕೊಂಡು ಹೋಗಬಹುದು. ಈ ಫ್ಯಾನ್ ಗಳನ್ನು  ಪಾಕೆಟ್ ಫ್ಯಾನ್ ಗಳೆಂದು ಕರೆಯುತ್ತಾರೆ. ಯಾಕೆಂದರೆ ಈ ಫ್ಯಾನ್ ಗಳನ್ನು ಪಾಕೆಟ್ ನಲ್ಲಿಟ್ಟುಕೊಂಡು ಹೋಗಬಹುದು. ಈ ಮಿನಿ ಪಾಕೆಟ್ ಫ್ಯಾನ್ ಗಳಿಗೆ ಈಗ ಬೇಡಿಕೆ ಕೂಡಾ ಹೆಚ್ಚುತ್ತಿದೆ. 

ಮಿನಿ ಪಾಕೆಟ್ ಫ್ಯಾನ್ :
Hasthip ಕಂಪನಿಯು ಹೊರ ತಂದಿರುವ ಮಿನಿ ಪಾಕೆಟ್  ಫ್ಯಾನ್ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ಫ್ಯಾನ್ 3 ವೇಗಗಳೊಂದಿಗೆ ಬರುತ್ತದೆ. ಇದು ತಂಪು ಗಾಳಿ ನೀಡುವ ವಿಚಾರದಲ್ಲಿ ನಂಬರ್ ಆನ್ ಎಂದರೆ ತಪ್ಪಾಗುವುದಿಲ್ಲ. ಇದನ್ನು ಚಾರ್ಜ್ ಮಾಡಲು USB ಪೋರ್ಟ್ ಕೂಡಾ ನೀಡಲಾಗುತ್ತದೆ. ಇದರೊಂದಿಗೆ, ಇದು 
2000 mAh ಬ್ಯಾಟರಿಯನ್ನು ಸಹ ಹೊಂದಿದೆ. ಆದ್ದರಿಂದ ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು. ಒಮ್ಮೆ ಫುಲ್ ಚಾರ್ಜ್‌ ಮಾಡಿದರೆ ಹಲವಾರು ಗಂಟೆಗಳವರೆಗೆ ಆರಾಮಾಗಿ ಬಳಸಬಹುದು.   ಈ ಫ್ಯಾನ್‌ನ ಗಾತ್ರವು ಅತ್ಯಂತ ಚಿಕ್ಕದಾಗಿದೆ. ಆದ್ದರಿಂದ ನೀವು ಎಲ್ಲಿಗೆ ಹೋಗಬೇಕಾದರೂ ಈ ಫ್ಯಾನ್ ಅನ್ನು ತೆಗೆದುಕೊಂಡು ಹೋಗಬೇಕಾಗಬಹುದು. ಇಂಡೋರ್ ಔಟ್ ಡೋರ್ ಎರಡೂ ಕಡೆ ಈ ಫ್ಯಾನ್ ಅನ್ನು ಆರಾಮಾಗಿ ಬಳಸಬಹುದು. 

ಇದನ್ನೂ ಓದಿ :  ChatGPT ಸಹಾಯದಿಂದ CV ತಯಾರಿಸಿದ ವ್ಯಕ್ತಿಗೆ ಆಫರ್ ಗಳ ಸುರಿಮಳೆಯಂತೆ !

ಈ ಮಿನಿ ಪಾಕೆಟ್ ಫ್ಯಾನಿನ ವೈಶಿಷ್ಟ್ಯಗಳು ಯಾವುವು : 
ಫ್ಯಾನ್ ಅನ್ನು ಸುಲಭವಾಗಿ ಹಿಡಿದಿಡಲು ಮತ್ತು 360 ಡಿಗ್ರಿ ತಿರುಗುವಿಕೆಗೆ ಸಹಾಯವಾಗಲು USB ಹ್ಯಾಂಡ್ಹೆಲ್ಡ್ ರಿಂಗ್‌ನೊಂದಿಗೆ ಬರುತ್ತದೆ. ಈ ಫ್ಯಾನ್ ಅಡಾಪ್ಟರ್‌ನೊಂದಿಗೆ ಬರುತ್ತದೆ ಇದರಿಂದ ಅದನ್ನು ಸುಲಭವಾಗಿ ಚಾರ್ಜ್ ಮಾಡಬಹುದು. ಇದು ಬೃಹತ್ 2000 mAh ಬ್ಯಾಟರಿಯನ್ನು ಹೊಂದಿದೆ. ಈ ಕಾರಣದಿಂದಾಗಿ ಹಲವಾರು ಗಂಟೆಗಳ ಕಾಲ ಸುಲಭವಾಗಿ ಬ್ಯಾಕಪ್ ಮಾಡಬಹುದು. ಈ ಫ್ಯಾನ್ ಹೆಚ್ಚು ಉಪಯುಕ್ತವಾಗಿದೆ ಏಕೆಂದರೆ ಇದನ್ನು ಒಮ್ಮೆ ಚಾರ್ಜ್ ಮಾಡಿದರೆ, ನೀವು ಅದನ್ನು ಹಲವಾರು ಗಂಟೆಗಳ ಕಾಲ ಬಳಸಬಹುದು.

ಎಷ್ಟಿದೆ  ಈ ಮಿನಿ ಪಾಕೆಟ್ ಫ್ಯಾನಿನ ಬೆಲೆ :
ಈ ಪೋರ್ಟಬಲ್ ಫ್ಯಾನ್ Amazonನಲ್ಲಿ ಲಭ್ಯವಿದೆ. ಪ್ರಸ್ತುತ ಈ ಫ್ಯಾನ್ ಮೇಲೆ 33% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಹಾಗಾಗಿ ರಿಯಾಯಿತಿ ದರದ ನಂತರ ಇದನ್ನು ಈ ಫ್ಯಾನ್ ಅನ್ನು 899 ರೂಪಾಯಿಗೆ  ಖರೀದಿಸಬಹುದು.

ಇದನ್ನೂ ಓದಿ : Affordable Cars: 10ಲಕ್ಷ ರೂ.ಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕಾರುಗಳಿವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News