ಬೆಂಗಳೂರು : ವರದಿಯ ಪ್ರಕಾರ, 11 ಮಿಲಿಯನ್‌ಗಿಂತಲೂ ಹೆಚ್ಚು ಆಂಡ್ರಾಯ್ಡ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ನೆಕ್ರೋ ಟ್ರೋಜನ್ ಎಂಬ ಅಪಾಯಕಾರಿ ವೈರಸ್‌ ಅಟ್ಯಾಕ್ ಮಾಡಿದೆ.ಈ ವೈರಸ್ ಅನಧಿಕೃತ ಅಪ್ಲಿಕೇಶನ್‌ಗಳು ಮತ್ತು ಗೇಮ್ ಮೋಡ್‌ಗಳ ಮೂಲಕ ಫೋನ್‌ಗೆ ಪ್ರವೇಶಿಸಿದೆ.ಈ ವೈರಸ್ 2019 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.ನಂತರ ಇದಾದ ಸದ್ದು ಅಡಗಿತ್ತಾದರೂ ಇದೀಗ ಮತ್ತೆ ಫೋನ್ ಗಳಲ್ಲಿ ಹಾವಳಿ ಇಡಲು ಶುರು ಮಾಡಿದೆ.ಆದರೆ ಈಗ ಈ ವೈರಸ್ ಇನ್ನಷ್ಟು ಅಪಾಯಕಾರಿ ರೂಪ ಪಡೆದುಕೊಂಡಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ವೈರಸ್ ಏನು ಮಾಡುತ್ತದೆ?
ಈ ವರದಿಯ ಪ್ರಕಾರ, ಈ ವೈರಸ್ ಫೋನ್‌ಗೆ ಪ್ರವೇಶಿಸಿದಾಗ,ಅದು ಇನ್ನಷ್ಟು ಅಪಾಯಕಾರಿ ಫೈಲ್‌ಗಳನ್ನು ಡೌನ್‌ಲೋಡ್ ಮಾಡುತ್ತದೆ.ನಂತರ ನಿಮ್ಮ ಫೋನ್ ಅನ್ನು ನಿಮಗೇ ತಿಳಿಯದಂತೆ ಜಾಹೀರಾತುಗಳನ್ನು ತೋರಿಸುವ ಸಾಧನವಾಗಿ ಪರಿವರ್ತಿಸುತ್ತದೆ. ಜನರನ್ನು  ವಂಚಿಸುತ್ತದೆ, ಇತರ ದುರುದ್ದೇಶಪೂರಿತ ವೈರಸ್‌ಗಳನ್ನು ಹರಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಕುಕ್ಕರ್​ ಕೂಗುತ್ತಿದ್ದಂತೆ ನೀರು ಲೀಕ್‌ ಆಗಿ ಆಚೆ ಬರ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ... ಮತ್ಯಾವತ್ತೂ ಆ ಸಮಸ್ಯೆಯೇ ಇರಲ್ಲ


ನಿಮ್ಮ ಫೋನ್‌ನಿಂದ ಈ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ : 
ಈ ವೈರಸ್ ಹರಡಲು ಎರಡು ಅಪ್ಲಿಕೇಶನ್‌ಗಳು ಹೆಚ್ಚು ಸಹಾಯ ಮಾಡಿವೆ ಎಂದು ವರದಿ ಹೇಳುತ್ತದೆ. Vuta ಕ್ಯಾಮೆರಾ ಮತ್ತು ಮ್ಯಾಕ್ಸ್ ಬ್ರೌಸರ್.Vuta ಕ್ಯಾಮೆರಾ ಅತ್ಯಂತ ಜನಪ್ರಿಯ ಕ್ಯಾಮೆರಾ ಅಪ್ಲಿಕೇಶನ್ ಆಗಿದೆ.ಇದನ್ನು ಸುಮಾರು 10 ಮಿಲಿಯನ್ ಜನರು ಡೌನ್‌ಲೋಡ್ ಮಾಡಿದ್ದಾರೆ.ಈ ಅಪ್ಲಿಕೇಶನ್‌ನ ಹಳೆಯ ಆವೃತ್ತಿಯನ್ನು ತೆಗೆದುಹಾಕಲಾಗಿದೆ. ಬಳಕೆದಾರರು ತಮ್ಮ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕು ಅಥವಾ ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು.ಒಂದು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿರುವ ಮ್ಯಾಕ್ಸ್ ಬ್ರೌಸರ್ ಅನ್ನು ಸಹ ತೆಗೆದುಹಾಕಲಾಗಿದೆ.ಇವುಗಳಲ್ಲದೆ Spotify Plus, WhatsApp, Minecraft ಮತ್ತು ಇತರ ಅಪ್ಲಿಕೇಶನ್‌ಗಳ ಮಾರ್ಪಡಿಸಿದ ಆವೃತ್ತಿಗಳು ಸಹ ವೈರಸ್‌ನಿಂದ ಪ್ರಭಾವಿತವಾಗಿವೆ.ಈ ಮಾರ್ಪಡಿಸಿದ ಅಪ್ಲಿಕೇಶನ್‌ಗಳನ್ನು ಬಳಸುವಂತೆ ಜನರನ್ನು ಆಮಿಷವೊಡ್ಡುವ ಮೂಲಕ ಹ್ಯಾಕರ್‌ಗಳು ವೈರಸ್ ಅನ್ನು ಹರಡುತ್ತಾರೆ.


 ರಕ್ಷಿಸಿಕೊಳ್ಳುವುದು ಹೇಗೆ ? : 
Android ವೈರಸ್‌ಗಳನ್ನು ತಪ್ಪಿಸಲು, Google Play Store ನಂತಹ ಅಧಿಕೃತ ಸೈಟ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ. ನಿಮ್ಮ ಫೋನ್‌ನಲ್ಲಿ Google Play ಸೆಕ್ಯೂರಿಟಿಯನ್ನು ಆನ್ ಮಾಡಿ.ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು,ಅದರ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ ಮತ್ತು ಆನ್‌ಲೈನ್ ವೀಡಿಯೊಗಳನ್ನು ವೀಕ್ಷಿಸಿ.ನಿಮ್ಮ ಫೋನ್‌ನಲ್ಲಿ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ರನ್ ಮಾಡಬಹುದು.


ಇದನ್ನೂ ಓದಿ : ಏರ್‌ಟೆಲ್ ಧಮಾಕಾ ಪ್ಲಾನ್ಸ್: ಕೇವಲ 7 ರೂ.ಗೆ ಸಿಗುತ್ತೆ 1 GB ಡೇಟಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.