Digital Strike By Government Of India - ಭಾರತ ಸರ್ಕಾರವು 300 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಪಿಟಿಐ ವರದಿಯ ಪ್ರಕಾರ, ಚೀನಾ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಅಭಿವೃದ್ಧಿಗೊಂಡ 348 ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ಗುರುತಿಸಿದೆ, ನಾಗರಿಕರ ವಿವರಗಳನ್ನು ಸಂಗ್ರಹಿಸಿ ಮತ್ತು ಅನಧಿಕೃತ ರೀತಿಯಲ್ಲಿ ವಿದೇಶಕ್ಕೆ ಕಳುಹಿಸಿದ್ದಕ್ಕಾಗಿ ಈ ಆಪ್ ಗಳನ್ನೂ ನಿರ್ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಲೋಕಸಭೆಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಬಿಜೆಪಿಯ ರೊಡ್ಮಲ್ ನಾಗರ ಅವರ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಡೇಟಾವನ್ನು ದೇಶದ ಹೊರಗೆ ಸಾಗಿಸಲಾಗುತ್ತಿತ್ತು
"ಈ 348 ಮೊಬೈಲ್ ಅಪ್ಲಿಕೇಶನ್‌ಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿವೆ ಮತ್ತು ಅನಧಿಕೃತ ಪ್ರೊಫೈಲಿಂಗ್‌ಗಾಗಿ ದೇಶದ ಹೊರಗಿನ ಸರ್ವರ್‌ಗಳಿಗೆ ಕಳುಹಿಸುತ್ತಿವೆ" ಎಂದು ಚಂದ್ರಶೇಖರ್ ಹೇಳಿದ್ದಾರೆ.


"MHA ವಿನಂತಿಯನ್ನು ಆಧರಿಸಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಈ 348 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಏಕೆಂದರೆ ಇಂತಹ ಡೇಟಾ ಪ್ರಸರಣವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ ಮತ್ತು ರಾಜ್ಯದ ಭದ್ರತೆಯನ್ನು ಉಲ್ಲಂಘಿಸುತ್ತದೆ" ಎಂದು ಅವರು ಹೇಳಿದ್ದಾರೆ.


ಕೆಲ ಆಪ್ ಗಳು ಚೀನಾದಲ್ಲಿಯೂ ಕೂಡ ಅಭಿವೃದ್ಧಿಗೊಂಡಿವೆ
ಈ ಎಲ್ಲಾ ಆ್ಯಪ್‌ಗಳನ್ನು ಚೀನಾದಲ್ಲಿ ಅಭಿವೃದ್ಧಿಪಡಿಸಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ್, “ಈ ಅಪ್ಲಿಕೇಶನ್‌ಗಳನ್ನು ಚೀನಾ ಸೇರಿದಂತೆ ವಿವಿಧ ದೇಶಗಳು ಅಭಿವೃದ್ಧಿಪಡಿಸಿವೆ” ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ BGMI ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ
ದಕ್ಷಿಣ ಕೊರಿಯಾದ ಗೇಮಿಂಗ್ ದೈತ್ಯ ಕ್ರಾಫ್ಟನ್ ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ ನಂತರ ಸರ್ಕಾರದ ಈ ನಿರ್ಧಾರಕ್ಕೆ ಬಂದಿರುವುದು ಇಲ್ಲಿ ಉಲ್ಲೇಖನೀಯ. ಈ ಸಂಬಂಧ ಸರ್ಕಾರದಿಂದ ಆದೇಶ ಬಂದಿದ್ದು, ಆ್ಯಪ್‌ಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಗೂಗಲ್ ಹೇಳಿತ್ತು.


ಇದನ್ನೂ ಓದಿ-ಇಲ್ಲಿ ಕೇವಲ 600 ರೂಪಾಯಿಗೆ ಮಾರಾಟವಾಗುತ್ತಿದೆ 14,999 ರೂ. ಬೆಲೆಯ Nokia Smartphone


ಸೆಪ್ಟೆಂಬರ್ 2020 ರಲ್ಲಿ, ಡೇಟಾ ಸುರಕ್ಷತೆಯ ಕಾಳಜಿಗಳನ್ನು ಉಲ್ಲೇಖಿಸಿ, 117 ಇತರ ಚೀನಾ-ಸಂಯೋಜಿತ ಅಪ್ಲಿಕೇಶನ್‌ಗಳೊಂದಿಗೆ ಕ್ರಾಫ್ಟನ್‌ನ ಪ್ಲೇಯರ್‌ಅನ್‌ನೋನ್‌ಸ್ ಬ್ಯಾಟಲ್‌ಗ್ರೌಂಡ್ಸ್ (PUBG) ಅನ್ನು ನಿರ್ಬಂಧಿಸಲಾಗಿದೆ.


ಇದನ್ನೂ ಓದಿ- ಆಗಸ್ಟ್ 7ಕ್ಕೆ ಭೂಮಿಯ ಕಕ್ಷೆ ಮುಟ್ಟಲಿರುವ SSLV ರಾಕೆಟ್; ಏನಿದರ ವಿಶೇಷತೆ?


ವರ್ಷದ ಆರಂಭದಲ್ಲಿ, ಫೆಬ್ರವರಿ 14 ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ 53 ಇತರ ಚೀನಾ-ಸಂಬಂಧಿತ ಅಪ್ಲಿಕೇಶನ್‌ಗಳ ಜೊತೆಗೆ ಯುದ್ಧ ರಾಯಲ್ ಗೇಮ್ ಫ್ರೀ ಫೈರ್ ಅನ್ನು ಭದ್ರತಾ ಕಾಳಜಿ  ಹಿನ್ನೆಲೆ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.